Home> Sports
Advertisement

Rohit Sharma Batting : ಹೆಬ್ಬೆರಳು ಮುರಿದರು ಬ್ಯಾಟಿಂಗ್‌ ಮಾಡಿದ ರೋಹಿತ್ : ಫ್ಯಾನ್ಸ್ ಮನ ಗೆದ್ದ ಹಿಟ್ ಮ್ಯಾನ್

Rohit Sharma Batting : ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 5 ರನ್ ಗಳ ಸೋಲು ಎದುರಿಸಿದ್ದರೂ, ಈ ಪಂದ್ಯದಲ್ಲಿ ಗಾಯಗೊಂಡಿದ್ದ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಮನ ಗೆದ್ದಿದ್ದಾರೆ.

Rohit Sharma Batting : ಹೆಬ್ಬೆರಳು ಮುರಿದರು ಬ್ಯಾಟಿಂಗ್‌ ಮಾಡಿದ ರೋಹಿತ್ : ಫ್ಯಾನ್ಸ್ ಮನ ಗೆದ್ದ ಹಿಟ್ ಮ್ಯಾನ್

Rohit Sharma Batting : ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 5 ರನ್ ಗಳ ಸೋಲು ಎದುರಿಸಿದ್ದರೂ, ಈ ಪಂದ್ಯದಲ್ಲಿ ಗಾಯಗೊಂಡಿದ್ದ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಅವರು ಎದುರಾಳಿ ತಂಡದ ಉಸಿರು ಬಿಗಿಹಿಡಿದಿದ್ದರು. ಒಂದು ಕಾಲದಲ್ಲಿ ರೋಹಿತ್ ಬಾಂಗ್ಲಾದೇಶದ ಕೈಯಿಂದ ಗೆಲುವು ಕಸಿದುಕೊಳ್ಳುತ್ತಿದ್ದರು, ಆದರೆ ರೋಹಿತ್ ಶರ್ಮಾ ಈ ಪಂದ್ಯದ ಕೊನೆಯ ಎಸೆತದಲ್ಲಿ ದೊಡ್ಡ ಹೊಡೆತವನ್ನು ಹೊಡೆಯಲು ಸಾಧ್ಯವಾಗಲಿಲ್ಲ. ಟೀಂ ಇಂಡಿಯಾ 5 ರನ್‌ಗಳಿಂದ ಪಂದ್ಯವನ್ನು ಕಳೆದುಕೊಳ್ಳಬೇಕಾಯಿತು.

ಗಾಯಗೊಂಡರು ಬ್ಯಾಟಿಂಗ್‌ಗೆ ಬಂದ ರೋಹಿತ್

ಬಾಂಗ್ಲಾದೇಶ ತಂಡದ ಬ್ಯಾಟಿಂಗ್ ವೇಳೆ ರೋಹಿತ್ ಶರ್ಮಾ ಇನ್ನಿಂಗ್ಸ್ ನ ಎರಡನೇ ಓವರ್ ನಲ್ಲಿ ಗಾಯಗೊಂಡಿದ್ದರು. ನಂತರ ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಕ್ಯಾಚ್ ಹಿಡಿಯುವ ವೇಳೆ ಹೆಬ್ಬೆರಳಿಗೆ ಗಾಯವಾಯಿತು. ಇದಾದ ನಂತರ ಮೈದಾನದಿಂದ ಹೊರಗೆ ಹೋಗಿ ಆಸ್ಪತ್ರೆಯಲ್ಲಿ ಸ್ಕ್ಯಾನ್ ಮಾಡಿಸಿದಾಗ ಆ ಆ ಬೆರಳು ಮುರದಿತ್ತು. ಆ ಬೆರಳಿಗೆ ಹೊಲಿಗೆ ಹಾಕಲಾಗಿತ್ತು. ಆದರೆ ಆಗ ಟೀಂ ಇಂಡಿಯಾ ಸಂಕಷ್ಟದಲ್ಲಿರುವುದನ್ನು ಕಂಡು ರೋಹಿತ್ ಬ್ಯಾಂಡೇಜ್ ಕೈಗೆ ಸುತ್ತಿಕೊಂಡು ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿದು ಬ್ಯಾಟಿಂಗ್ ಮಾಡಿದರು. ಈ ಮೂಲಕ ರೋಹಿತ್ ಮೈದಾನದಲ್ಲಿದ್ದ ಅಭಿಮಾನಗಳ ಮನ ಗೆದ್ದಿದ್ದಾರೆ.

ಇದನ್ನೂ ಓದಿ : IND vs BAN : ಈ ಆಟಗಾರನಿಂದಾಗಿ ಟೀಂ ಇಂಡಿಯಾಗೆ ಸರಣಿ ಸೋಲು

ರೋಹಿತ್ ಬಿರುಸಿನ ಬ್ಯಾಟಿಂಗ್

ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಬ್ಯಾಟಿಂಗ್‌ಗೆ ಇಳಿದಾಗ. ಆಗ ಟೀಂ ಇಂಡಿಯಾ ಗೆಲುವಿಗೆ 42 ಎಸೆತಗಳಲ್ಲಿ 64 ರನ್‌ಗಳ ಅಗತ್ಯವಿತ್ತು. ಮೈದಾನಕ್ಕೆ ಬಂದ ತಕ್ಷಣ ರೋಹಿತ್ ರನ್ ಮಳೆ ಸುರಿಸಿದರು. ರೋಹಿತ್ ಗ್ರೌಂಡ್ ನ ಎಲ್ಲಾ ಮೂಲೆ  ಕಡೆಗಳಲ್ಲಿ ಬ್ಯಾಟ್ ಬಿಸಿದರು. ಇವರ ಬ್ಯಾಟಿಂಗ್ ನೋಡಿ ಎದುರಾಳಿ ಬೌಲರ್ ಗಳು ಹಲ್ಲು ಕಿರಿದುಕೊಂಡರು. ಅವರು ಕೇವಲ 28 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು 5 ಲಾಂಗ್ ಸಿಕ್ಸ್ ಒಳಗೊಂಡತೆ 51 ರನ್ ಗಳಿಸಿದರು. ಕೊನೆಯ ಎರಡು ಎಸೆತಗಳಲ್ಲಿ ಟೀಂ ಇಂಡಿಯಾಗೆ 2 ಸಿಕ್ಸರ್‌ಗಳ ಅಗತ್ಯವಿತ್ತು, ಆದರೆ ರೋಹಿತ್ ಒಂದು ಮಾತ್ರ ಹೊಡೆಯಲು ಸಾಧ್ಯವಾಯಿತು.

ಬ್ಯಾಂಡೇಜ್ ಹಾಕಿಕೊಂಡು ಮೈದಾನಕ್ಕಿಳಿದ ಹಿಟ್ ಮ್ಯಾನ್

ರೋಹಿತ್ ಶರ್ಮಾ ಬಾಲ್ ಹಿಡಿಯಲು ಹೋಗಿ ಹೆಬ್ಬೆರಳಿಗೆ ಗಾಯವಾಗಿತ್ತು. ಆದರೂ, ಟೀಂ ಇಂಡಿಯಾ ಸಂಕಷ್ಟದಲ್ಲಿರುವುದನ್ನು ಕಂಡ ರೋಹಿತ್ ನಿಲ್ಲದೆ ಮೈದಾನಕ್ಕೆ ಬಂದ ತಕ್ಷಣ ಬಿರುಸಿನ ಬ್ಯಾಟಿಂಗ್ ಮಾಡಿದರು. ಅವರ ಧೈರ್ಯ ಮತ್ತು ಬ್ಯಾಟಿಂಗ್ ಎಲ್ಲವೂ ಬೆರಗು ಹುಟ್ಟಿಸುವಂತಿತ್ತು. ಮುಸ್ತಾಫಿಜುರ್ ರೆಹಮಾನ್ ಕೊನೆಯ ಎಸೆತದ ಬಾಲ್ ಗೆ ಸಿಕ್ಸರ್ ಹೊಡೆಯಲು ಮುಂದಾದರು ಆದರೆ ಸಾಧ್ಯವಾಗಲಿಲ್ಲ. ಈ ರೋಹಿತ್ ತಮ್ಮ ಧೈರ್ಯದಿಂದ ಎಲ್ಲರ ಮನ ಗೆದ್ದರು.

ಇದನ್ನೂ ಓದಿ : IND vs BAN : ವಿರಾಟ್ ಕೊಹ್ಲಿ ಇಂದು ಓಪನಿಂಗ್ ಹೋಗಿದ್ದೆ ಟೀಂ ಇಂಡಿಯಾಗೆ ನಷ್ಟವಾಗಿದೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More