Home> Sports
Advertisement

ತಂದೆಯಾದ ಸಂತಸದಲ್ಲಿ ಟೀಂ ಇಂಡಿಯಾ 'ಹಿಟ್‌ಮ್ಯಾನ್' ರೋಹಿತ್ ಶರ್ಮಾ!

ಹೆಣ್ಣು ಮಗುವಿಗೆ ಜನ್ಮ ನೀಡಿದ ರೋಹಿತ್ ಪತ್ನಿ ರಿತಿಕಾ.
 

ತಂದೆಯಾದ ಸಂತಸದಲ್ಲಿ ಟೀಂ ಇಂಡಿಯಾ 'ಹಿಟ್‌ಮ್ಯಾನ್' ರೋಹಿತ್ ಶರ್ಮಾ!

ನವದೆಹಲಿ: ಹೊಸ ವರ್ಷದ ಮುನ್ನವೇ ಭಾರತೀಯ ತಂಡದ ಸ್ಟಾರ್ ಕ್ರಿಕೆಟಿಗ, ಟೀಂ ಇಂಡಿಯಾದ 'ಹಿಟ್‌ಮ್ಯಾನ್' ಎಂದು ಖ್ಯಾತಿ ಪಡೆದಿರುವ ರೋಹಿತ್ ಶರ್ಮಾ ತಂದೆಯಾಗಿದ್ದಾರೆ. ರೋಹಿತ್ ಶರ್ಮಾ ಪತ್ನಿ ರಿತಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 

ರೋಹಿತ್ ಶರ್ಮಾ ತಂದೆಯಾದ ಸುದ್ದಿ ಮೆಲ್ಬೊರ್ನ್ನಲ್ಲಿ ನಡೆದ ಭಾರತದ ಮೂರನೇ ಟೆಸ್ಟ್ ಪಂದ್ಯವನ್ನು ಗೆದ್ದ ಕೆಲವೇ ಗಂಟೆಗಳ ನಂತರ ತಿಳಿದಿದ್ದು, ಅವರ ಸಂತಸ ಇಮ್ಮಡಿಗೊಂಡಿದೆ.

fallbacks

ಇನ್ನು ಮಗಳನ್ನು ಕಣ್ತುಂಬಿಕೊಳ್ಳಲು ರೋಹಿತ್ ಶರ್ಮಾ ತವರಿಗೆ ಮರಳಿದ್ದು, ಸಿಡ್ನಿಯಲ್ಲಿ ಜನವರಿ 03 ರಿಂದ ಆರಂಭವಾಗಲಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. 

ಸಿಡ್ನಿಯಲ್ಲಿ ನಾಲ್ಕನೇ ಟೆಸ್ಟ್ನಲ್ಲಿ ರೋಹಿತ್ ಶರ್ಮಾ ಆಡಲು ಆಗುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಸ್ಪಷ್ಟಪಡಿಸಿದೆ. ಆಲ್ ರೌಂಡರ್ ಹಾರ್ದಿಕ್  ಪಾಂಡ್ಯರನ್ನು ತಂಡದಲ್ಲಿ ಸೇರಿಸಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.
 

Read More