Home> Sports
Advertisement

WPL 2023, RCB Vs GG: ಸೋಫಿ ಡಿವೈನ್ ಅಬ್ಬರ! ಆರ್​ಸಿಬಿಗೆ ಮತ್ತೊಂದು ಭರ್ಜರಿ ಜಯ

Womens Premier League 2023: ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್​ನ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಂದು ಭರ್ಜರಿ ಗೆಲುವು ಸಾಧಿಸಿದೆ. ​

WPL 2023, RCB Vs GG: ಸೋಫಿ ಡಿವೈನ್ ಅಬ್ಬರ! ಆರ್​ಸಿಬಿಗೆ ಮತ್ತೊಂದು ಭರ್ಜರಿ ಜಯ

ಮುಂಬೈ: ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್​ನ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಂದು ಭರ್ಜರಿ ಗೆಲುವು ಸಾಧಿಸಿದೆ. ಸೋಫಿ ಡಿವೈನ್ ಬ್ಯಾಟಿಂಗ್ ಅಬ್ಬರಕ್ಕೆ ಗುಜರಾತ್ ಜೈಂಟ್ಸ್ ತತ್ತರಿಸಿಹೋಯಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 188 ರನ್‍ಗಳ ಬೃಹತ್ ಮೊತ್ತ ಕಲೆಹಾಕಿತು. 189 ರನ್​ಗಳ ಸವಾಲಿನ ಗುರಿ ಬೆನ್ನತ್ತಿದ RCB 15.3 ಓವರ್‍ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.

ಇದನ್ನೂ ಓದಿ: Team India : ಆಸ್ಟ್ರೇಲಿಯಾ ವಿರುದ್ಧ ಗೆಲುವಿನ ರಹಸ್ಯ ಬಿಚ್ಚಿಟ್ಟ ಮೊಹಮ್ಮದ್ ಶಮಿ!

ಸೋಫಿ ಡಿವೈನ್ ಸಿಡಿಲಬ್ಬರದ ಬ್ಯಾಟಿಂಗ್!

RCB ಪರ ಸೋಫಿ ಡಿವೈನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸೋಫಿ, ಸ್ಮೃತಿ ಮಂಧಾನ ಜೊತೆಗೂಡಿ ಮೊದಲ ವಿಕೆಟ್​ಗೆ 125 ರನ್​ಗಳ ಅಮೋಘ ಜೊತೆಯಾಟವಾಡಿದರು. 37 ರನ್​ ಬಾರಿಸಿ ಸ್ಮೃತಿ ಮಂಧಾನ ಔಟಾದರು. ನಂತರ ಮತ್ತೆ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದ ಸೋಫಿ ಸಿಕ್ಸರ್​ಗಳ ಸುರಿಮಳೆಗೈದರು.  36 ಎಸೆತಗಳಲ್ಲಿ 8 ಸಿಕ್ಸರ್ ಮತ್ತು 9 ಬೌಂಡರಿ ಇದ್ದ 99 ರನ್ ಗಳಿಸಿದ ಸೋಫಿ ವಿಕೆಟ್ ಒಪ್ಪಿಸುವ ಮೂಲಕ ಕೇವಲ 1 ರನ್‍ನಿಂದ ಶತಕ ವಂಚಿತರಾಗಿ ನಿರಾಸೆ ಅನುಭವಿಸಿದರು.

ಇನ್ನುಳಿದಂತೆ ಎಲ್ಲಿಸ್ ಪೆರ್ರಿ(ಅಜೇಯ 19) ಮತ್ತು ಹೀದರ್ ನೈಟ್(ಅಜೇಯ 22) ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ಗುಜರಾತ್ ಪರ ಬೌಲಿಂಗ್‍ನಲ್ಲಿ ಕಿಮ್ ಗರ್ತ್ ಮತ್ತು ಸ್ನೇಹ ರಾಣಾ ತಲಾ ಒಂದೊಂದು ವಿಕೆಟ್ ಪಡೆದರು.

ಇದನ್ನೂ ಓದಿ: IND vs AUS : ಎರಡನೇ ODI ಗೆ ರೋಹಿತ್ ಎಂಟ್ರಿ : Playing 11 ನಿಂದ ಯಾರು ಔಟ್?

ಬೃಹತ್ ಮೊತ್ತ ಪೇರಿಸಿದ್ದ ಗುಜರಾತ್

ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ಪರ ಲಾರಾ ವೊಲ್ವಾರ್ಡ್ಟ್(68), ಆಶ್ಲೀಗ್ ಗಾರ್ಡ್ನರ್(41), ಸಬ್ಬಿನೇನಿ ಮೇಘನಾ(31), ದಯಾಲನ್ ಹೇಮಲತಾ(ಅಜೇಯ 16), ಸೋಫಿಯಾ ಡಂಕ್ಲಿ(16) ಮತ್ತು ಹರ್ಲೀನ್ ಡಿಯೋಲ್(ಅಜೇಯ 12) ಉತ್ತಮ ಆಟವಾಡಿ ತಂಡ ಬೃಹತ್ ಮೊತ್ತ ಗಳಿಸಲು ನೆರವಾಗಿದ್ದರು. ಆರ್‍ಸಿಬಿ ಪರ ಬೌಲಿಂಗ್‍ನಲ್ಲಿ ಶ್ರೇಯಾಂಕ ಪಾಟೀಲ್ 2 ವಿಕೆಟ್ ಪಡೆದರೆ, ಸೋಫಿ ಡಿವೈನ್ ಮತ್ತು ಹೀದರ್ ನೈಟ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More