Home> Sports
Advertisement

'Rajiv Gandhi Khel Ratna Award' ಅನ್ನು ಇನ್ಮುಂದೆ 'Major Dhyan Chand Khel Ratna Award'ಎಂದು ಗುರುತಿಸಲಾಗುವುದು: PM Modi

Rajiv Gandhi Khel Ratna Award - ಖೇಲ್ ರತ್ನ (Rajiv Gandhi Khel Ratna Award) ಪ್ರಶಸ್ತಿಯ ಹೆಸರನ್ನು ಮೇಜರ್ ಧ್ಯಾನ್ ಚಂದ್ ಜಿ (Major Dhyan Chand) ಅವರಿಗೆ ಅರ್ಪಿಸಬೇಕು ಎಂದು ಅನೇಕ ದೇಶವಾಸಿಗಳು ಒತ್ತಾಯಿಸಿದ್ದಾರೆ ಎಂದು ಪ್ರಧಾನಿ ಮೋದಿ (PM Narendra Modi) ಹೇಳಿದ್ದಾರೆ. ಜನರ ಭಾವನೆಗಳನ್ನು ಪರಿಗಣಿಸಿ, ಇದೀಗ ಅದನ್ನು ಇದನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ (Major Dhyan Chand Khel Ratna Award) ಎಂದು ಗುರುತಿಸಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ. 

'Rajiv Gandhi Khel Ratna Award' ಅನ್ನು ಇನ್ಮುಂದೆ 'Major Dhyan Chand Khel Ratna Award'ಎಂದು ಗುರುತಿಸಲಾಗುವುದು:  PM Modi

ನವದೆಹಲಿ:  Mejor Dhyan Chand Khel Ratna Award - ಖೇಲ್ ರತ್ನ ಪ್ರಶಸ್ತಿಗೆ ಸಂಬಂಧಿಸಿದಂತೆ ಮೋದಿ ಸರ್ಕಾರ ಮಹತ್ವದ ಮತ್ತೋ ದೊಡ್ಡ ನಿರ್ಧಾರವೊಂದನ್ನು ಕೈಗೊಂಡಿದೆ. ಮೋದಿ ಸರ್ಕಾರವು 'ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ'ಯನ್ನು 'ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ' ಎಂದು ಮರುನಾಮಕರಣ ಮಾಡಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಈ ಕುರಿತು ಮಾಹಿತಿಯನ್ನು ನೀಡಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಶುಕ್ರವಾರ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, 'ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯ ಆಟಗಾರರ ಮಹಾನ್ ಪ್ರಯತ್ನಗಳಿಂದ ನಾವೆಲ್ಲರೂ ಮುಳುಗಿದ್ದೇವೆ. ನಮ್ಮ ಮಕ್ಕಳು ಮತ್ತು ಹೆಣ್ಣು ಮಕ್ಕಳು ತೋರಿಸಿದ ಇಚ್ಛಾಶಕ್ತಿ, ವಿಶೇಷವಾಗಿ ಹಾಕಿಯಲ್ಲಿ, ಗೆಲ್ಲುವ ಹುಮ್ಮಸ್ಸು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಉತ್ತಮ ಸ್ಫೂರ್ತಿಯಾಗಿದೆ' ಎಂದಿದ್ದಾರೆ. 

'ದೇಶ ಹೆಮ್ಮೆ ಪಡುತ್ತಿರುವ ಕ್ಷಣಗಳ ನಡುವೆ, ದೇಶಾದ್ಯಂತ ಇರುವ ಹಲವು ಕ್ರೀಡಾಪ್ರೇಮಿಗಳು ಖೇಲ್ ರತ್ನ ಪ್ರಶಸ್ತಿಗೆ ಹಾಕಿ ಮಾಂತ್ರಿಕ ಮತ್ತು ದಂತಕಥೆ (Hockey Legend) ಮೇಜರ್ ಧ್ಯಾನ್ ಚಂದ್ ಅವರ ಹೆಸರನ್ನು ಅರ್ಪಿಸಬೇಕು ಎಂದು ಬೇಡಿಕೆ ಸಲ್ಲಿಸಿದ್ದಾರೆ. ಜನರ ಈ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಇದೀಗ ಆ ಪ್ರಶಸ್ತಿಯ ಹೆಸರನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಹೆಸರಿಸಲಾಗಿದೆ... ಜೈ ಹಿಂದ್!' ಎಂದು ಪ್ರಧಾನಿ ಮೋದಿ ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ-Tokyo Olympics 2020 Updates: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿಗುರಿದ ಮತ್ತೊಂದು ಪದಕದ ಆಸೆ, ಕುಸ್ತಿ ಸೆಮಿಫೈನಲ್ ಗೆ ಲಗ್ಗೆ ಇಟ್ಟ ಬಜರಂಗ್ ಪುನಿಯಾ

ಈ ಕುರಿತು ಮತ್ತೊಂದು ಟ್ವೀಟ್ ನಲ್ಲಿ ಮಾತನಾಡಿರುವ ಪ್ರಧಾನಿ ಮೋದಿ, 'ಭಾರತಕ್ಕೆ ಸನ್ಮಾನ ಹಾಗೂ ಗೌರವವನ್ನು ತಂದುಕೊಟ್ಟ ಆಗ್ರಗಣ್ಯ ಆಟಗಾರರ ಪೈಕಿ ಮೇಜರ್ ಧ್ಯಾನ್ ಚಂದ್ ಕೂಡ ಒಬ್ಬರು. ಹೀಗಾಗಿ ದೇಶದ ಅತ್ಯುನ್ನದ ಕ್ರೀಡಾ ಪುರಸ್ಕಾರದ ಹೆಸರನ್ನು ಅವರ ಸ್ಮರಣಾರ್ಥ ನೀಡುವುದು ಉಚಿತ' ಎಂದಿದ್ದಾರೆ. 

ಇದನ್ನೂ ಓದಿ- Tokyo Olympics: ಕೈ ಜಾರಿದ ಕಂಚಿನ ಪದಕ, ಭಾರತೀಯ ಮಹಿಳಾ ಹಾಕಿ ತಂಡದ ಕನಸು ಭಗ್ನ

ಪ್ರತಿವರ್ಷ ಮೇಜರ್ ಧ್ಯಾನ್ ಚಂದ್ ಅವರ ಹುಟ್ಟುಹಬ್ಬ ಅಂದರೆ ಆಗಸ್ಟ್ 30 ರಂದು ಖೇಲ್ ರತ್ನ ಅವಾರ್ಡ್ ಅನ್ನು ನೀಡಲಾಗುತ್ತಿದೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ- Tokyo Olympics 2021 :  ಬೆಳ್ಳಿಗೆ ಮುತ್ತಿಟ್ಟ ಕುಸ್ತಿಪಟು ರವಿ ದಹಿಯಾ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More