Home> Sports
Advertisement

Sushil Kumar : ರೆಸ್ಲರ್ ಸುಶೀಲ್ ಕುಮಾರ್ ಸಹಚರರು ದೊಣ್ಣೆಯಿಂದ ಹೊಡೆಯುವ ಫೋಟೋ ವೈರಲ್!

ಸುಶೀಲ್ ಕುಮಾರ್‌ ಸಹಚರರು, ದೊಣ್ಣೆಯಿಂದ ಹೊಡೆಯುತ್ತಿರುವ ದೃಶ್ಯದ ವಿಡಿಯೋ

Sushil Kumar : ರೆಸ್ಲರ್ ಸುಶೀಲ್ ಕುಮಾರ್ ಸಹಚರರು ದೊಣ್ಣೆಯಿಂದ ಹೊಡೆಯುವ ಫೋಟೋ ವೈರಲ್!

ನವದೆಹಲಿ : ರೆಸ್ಲರ್ ಸಾಗರ್ ಕೊಲೆ ಪ್ರಕರಣದಲ್ಲಿ ಪೋಲೀಸರ ವಶದಲ್ಲಿರುವ ಒಲಿಂಪಿಯನ್ ರೆಸ್ಲರ್ ಸುಶೀಲ್ ಕುಮಾರ್‌ ಮತ್ತು ಸಹಚರರು, ದೊಣ್ಣೆಯಿಂದ ಹೊಡೆಯುತ್ತಿರುವ ದೃಶ್ಯದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. 

ವ್ಯಕ್ತಿಯೊಬ್ಬ ಗಾಯದಿಂದ ಒದ್ದಾಡುತ್ತ ನೆಲಕ್ಕೆ ಬಿದ್ದಿದ್ದ. ಸುಶೀಲ್‌ ಕುಮಾರ್(Sushil Kumar) ಮತ್ತು ಅವರ ಸಹಚರರು ದೊಣ್ಣೆಗಳಿಂದ ಹೊಡೆಯುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಇದನ್ನೂ ಓದಿ : ಅಟೋ ಡ್ರೈವರ್ ಗಳಿಗೆ ಆಹಾರ ಧಾನ್ಯ ವಿತರಿಸಿದ ಕ್ರಿಕೆಟರ್ ಮಿಥಾಲಿ ರಾಜ್ ತಂದೆ

ವಿಡಿಯೋದ ನೈಜತೆಯ ಕುರಿತಂತೆ ದೆಹಲಿ ಪೊಲೀಸರು(Delhi Police) ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಛತ್ರಸಾಲಾ ಕ್ರೀಡಾಂಗಣದಲ್ಲಿ ನಡೆದಿದ್ದ ಜಗಳದಲ್ಲಿ ಹಲ್ಲೆಗೊಳಗಾಗಿದ್ದ 23 ವರ್ಷದ ಕುಸ್ತಿಪಟು ಸಾಗರ್ ಅಸುನೀಗಿದ್ದರು. ಇದೇ ಪ್ರಕರಣದಲ್ಲಿ ಸುಶೀಲ್‌ ಕುಮಾರ್‌ ಸೇರಿದಂತೆ ಈವರೆಗೆ ಒಟ್ಟು ಎಂಟು ಜನರನ್ನು ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ : KL Rahul- ಕೆ.ಎಲ್.ರಾಹುಲ್ ಫಿಟ್ನೆಸ್ ಕಂಡು ಫಿದಾ ಆದ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More