Home> Sports
Advertisement

ICC World Cupನಲ್ಲಿ ಭಾರತದ ವಿರುದ್ಧ ಪಾಕಿಸ್ತಾನಕ್ಕೆ 6 ಬಾರಿ ಸೋಲು; ಆದರೆ ಈ ಬಾರಿ ಪಾಕ್​ಗೇ ಜಯ!

ಭಾರತದ ವಿರುದ್ಧ 6 ಬಾರಿ ಸೋಲನುಭವಿಸಿರುವ ದಾಖಲೆಯನ್ನು ಪಾಕಿಸ್ತಾನ ಈ ಬಾರಿ ಮುರಿಯಲಿದೆ ಎಂದು ಬ್ಯಾಟಿಂಗ್ ದಿಗ್ಗಜ ಇಂಜಮಾಮ್ ಉಲ್ ಹಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ICC World Cupನಲ್ಲಿ ಭಾರತದ ವಿರುದ್ಧ ಪಾಕಿಸ್ತಾನಕ್ಕೆ 6 ಬಾರಿ ಸೋಲು; ಆದರೆ ಈ ಬಾರಿ ಪಾಕ್​ಗೇ ಜಯ!

ಕರಾಚಿ: ICC World Cupನ ಅತಿ ದೊಡ್ಡ ಪದ್ಯ ಯಾವುದು? ಅಂತಾ ಯುರೋಪ್, ಅಮೇರಿಕಾ, ಆಸ್ಟ್ರೇಲಿಯಾದಲ್ಲಿ ಈ ಪ್ರಶ್ನೆ ಕೇಳಿದರೆ ಅಲ್ಲಿನವರ ಉತ್ತರ ಫೈನಲ್ಸ್ ಅನ್ನೋದೇ ಆಗಿರುತ್ತೆ. ಆದರೆ ಇದೇ ಪ್ರಶ್ನೆಯನ್ನು ಏಷ್ಯಾದಲ್ಲಿ ಕೇಳಿದರೆ, ಬಹುಶಃ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಎಂಬ ಉತ್ತರ ಖಚಿತ. ಪ್ರತಿ ಬಾರಿ ವಿಶ್ವಕಪ್ ಪಂದ್ಯ ನಡೆಯುವಾಗಲೂ ಭರತ್ ಮತ್ತು ಪಾಕಿಸ್ತಾನಗಳ ನಡುವಿನ ಪಂದ್ಯಕ್ಕಾಗಿ ಜನ ಕಾದು ಕುಳಿತಿರುತ್ತಾರೆ. ಈ ಎರಡೂ ದೇಶಗಳ ನಡುವೆ ನಡೆದ ಪಂದ್ಯಗಳಲ್ಲಿ ಭಾರತ ಒಟ್ಟು 6 ಬಾರಿ ಗೆಲುವು ಸಾಧಿಸಿದೆ. ಆದರೆ, ಈ ಬಾರಿ ಭಾರತದ ವಿರುದ್ಧ ಪಾಕಿಸ್ತಾನದ ಗೆಲುವು ನೋಡಲು ಜನತೆ ಉತ್ಸುಕರಾಗಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಪಾಕಿಸ್ತಾನದ ಆಯ್ಕೆ ಸಮಿತಿ ಮುಖ್ಯಸ್ಥ ಹಾಗೂ ಬ್ಯಾಟಿಂಗ್ ದಿಗ್ಗಜ ಇಂಜಮಾಮ್ ಉಲ್ ಹಕ್, ಭಾರತದ ವಿರುದ್ಧ 6 ಬಾರಿ ಸೋಲನುಭವಿಸಿರುವ ದಾಖಲೆಯನ್ನು ಪಾಕಿಸ್ತಾನ ಈ ಬಾರಿ ಮುರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಐಸಿಸಿ ವಿಶ್ವ ಕಪ್ 2019ರಲ್ಲಿ ಜೂನ್ 16 ರಂದು ಭಾರತ ಮತ್ತು ಪಾಕ್ ನಡುವೆ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಪಾಕ್ ಜಯಶಾಲಿಯಾಗಲಿದೆ ಎಂದು ಹಕ್ ಹೇಳಿದ್ದಾರೆ. 1992ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಮೊದಲ ಪಂದ್ಯ ನಡೆದಿತ್ತು. 2007 ರಿಂದೀಚೆಗೆ, ಎರಡೂ ತಂಡಗಳು ವಿಶ್ವ ಕಪ್ನಲ್ಲಿ ತೀವ್ರ ಹಣಾಹಣಿ ನಡೆಸಿವೆ.

1992 ವಿಶ್ವ ಚಾಂಪಿಯನ್ ತಂಡದ ಬಗ್ಗೆ ಮಾತನಾಡಿದ ಇಂಜಮಾಮ್-ಉಲ್-ಹಕ್, "ಜನರು ಭಾರತ-ಪಾಕ್ ಪಂದ್ಯವನ್ನು ಗಂಭೀರವಾಗಿ ಪರಿಗಣಿಸುತ್ತಾರೆ. 'ನಾವು ವಿಶ್ವ ಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕ್ ಗೆದ್ದರೆ ಮಾತ್ರ ಸಂಭ್ರಮಿಸುತ್ತೇವೆ' ಎಂದು ಕೆಲವರು ಹೇಳುತ್ತಾರೆ. ಹಾಗಾಗಿ ಇದುವರೆಗೂ ಪಾಕ್ ಕಂಡಿರುವ ಸೋಲಿನ ದಾಖಲೆಯನ್ನು ಮುರಿದು, ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕ್ ಈ ಬಾರಿ ಜಯಗಳಿಸಲಿದೆ" ಎಂದು ಪಾಕಿಸ್ತಾನ ಕ್ರಿಕೆಟ್ ನ ಒಂದು ವೆಬ್ಸೈಟ್ ಗೆ ಹೇಳಿದ್ದಾರೆ. 

fallbacks

ಇಂಜಾಮಾಮ್-ಉಲ್-ಹಕ್, ಪಾಕಿಸ್ತಾನ ತಂಡದ ಮಾಜಿ ನಾಯಕ(ಫೋಟೋ: ಪಿಟಿಐ)

"ವಿಶ್ವಕಪ್ ಎಂದರೆ ಕೇವಲ ಭಾರತದ ವಿರುದ್ದದ ಪಂದ್ಯ ಮಾತ್ರ ಅಲ್ಲ. ಪಾಕಿಸ್ತಾನಕ್ಕೆ ಇತರ ತಂಡಗಳನ್ನು ಸೋಲಿಸುವ ಸಾಮರ್ಥ್ಯವೂ ಇದೆ" ಎಂದು ಇಂಜಮಾಮ್-ಉಲ್-ಹಕ್ ಹೇಳಿದ್ದಾರೆ. ಏಕದಿನ ಪಂದ್ಯಗಳಲ್ಲಿ ಸತತ 10 ಬಾರಿ ಸೋತಿರುವ ಪಾಕಿಸ್ತಾನ ಸದ್ಯ ವಿಶ್ವಕಪ್ ನಲ್ಲಿ ಆಫ್ಘಾನಿಸ್ತಾನದ ವಿರುದ್ಧ ಸೋಲನುಭವಿಸಿದೆ. 

Read More