Home> Sports
Advertisement

IND vs BAN 2nd ODI: ಟೀಂ ಇಂಡಿಯಾದ ಆರಂಭಿಕ ಆಟಗಾರ ಚೇಂಜ್! ಧವನ್-ರಾಹುಲ್ ಬದಲು ಎಂಟ್ರಿ ಕೊಟ್ಟಿದ್ಯಾರು?

IND vs BAN 2nd ODI: ಈಗಾಗಲೇ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 0-1 ಅಂತರದಲ್ಲಿ ಹಿಂದುಳಿದಿದೆ. ಒಂದು ವೇಳೆ ಎರಡನೇ ಏಕದಿನ ಪಂದ್ಯದಲ್ಲೂ ಟೀಂ ಇಂಡಿಯಾ ಸೋತರೆ ಸತತ ಎರಡನೇ ಏಕದಿನ ಸರಣಿಯಲ್ಲಿ ಸೋಲನುಭವಿಸಲಿದೆ. ಜೊತೆಗೆ ಸರಣಿ ಗೆಲ್ಲುವ ಕನಸು ಕಮರಲಿದೆ.

IND vs BAN 2nd ODI: ಟೀಂ ಇಂಡಿಯಾದ ಆರಂಭಿಕ ಆಟಗಾರ ಚೇಂಜ್! ಧವನ್-ರಾಹುಲ್ ಬದಲು ಎಂಟ್ರಿ ಕೊಟ್ಟಿದ್ಯಾರು?

IND vs BAN 2nd ODI: ಡಿಸೆಂಬರ್ 7ರಂದು ಬೆಳಗ್ಗೆ 11 ಗಂಟೆಗೆ ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಆರಂಭಿಕ ಆಟಗಾರರ ಆಯ್ಕೆಯಲ್ಲಿ ಬಹುದೊಡ್ಡ ಬದಲಾವಣೆ ಮಾಡುವ ಸಾಧ್ಯತೆಯಿದೆ.

ಈಗಾಗಲೇ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 0-1 ಅಂತರದಲ್ಲಿ ಹಿಂದುಳಿದಿದೆ. ಒಂದು ವೇಳೆ ಎರಡನೇ ಏಕದಿನ ಪಂದ್ಯದಲ್ಲೂ ಟೀಂ ಇಂಡಿಯಾ ಸೋತರೆ ಸತತ ಎರಡನೇ ಏಕದಿನ ಸರಣಿಯಲ್ಲಿ ಸೋಲನುಭವಿಸಲಿದೆ. ಜೊತೆಗೆ ಸರಣಿ ಗೆಲ್ಲುವ ಕನಸು ಕಮರಲಿದೆ.

ಇದನ್ನೂ ಓದಿ: Kidney ರೋಗಿಗಳಿಗೆ ಯಾವ ಉಪ್ಪು ಆರೋಗ್ಯಕರ? ಬಿಳಿ ಉಪ್ಪು ಪ್ರಾಣವನ್ನೇ ತೆಗೆಯುತ್ತದೆ

ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯ ಟೀಂ ಇಂಡಿಯಾಗೆ 'ಮಾಡು ಇಲ್ಲವೇ ಮಡಿ' ಪಂದ್ಯವಾಗಲಿದೆ. ಏಕದಿನ ಸರಣಿಯಲ್ಲಿ ಉಳಿಯಬೇಕಾದರೆ ಭಾರತಕ್ಕೆ ಈ ಪಂದ್ಯವನ್ನು ಗೆಲ್ಲುವುದು ಅನಿವಾರ್ಯವಾಗಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಏಕದಿನ ಪಂದ್ಯ ನಾಳೆ ಅಂದರೆ ಡಿಸೆಂಬರ್ 7 ರಂದು ಮೊದಲ ಏಕದಿನ ಪಂದ್ಯ ನಡೆದ ಮೀರ್‌ಪುರದಲ್ಲಿ ನಡೆಯಲಿದೆ.

ಎರಡನೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾದ ಆರಂಭಿಕ ಜೋಡಿಯಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ. ಎರಡನೇ ODI ಪಂದ್ಯದಲ್ಲಿ, ರೋಹಿತ್ ಶರ್ಮಾ ಜೊತೆ ಶಿಖರ್ ಧವನ್ ಅಥವಾ ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯುವುದಿಲ್ಲ. ಆದರೆ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ,

ಇಶಾನ್ ಕಿಶನ್ ಪ್ಲೇಯಿಂಗ್ ಇಲೆವೆನ್ ಗೆ ಸೇರ್ಪಡೆಗೊಂಡರೆ ಶಿಖರ್ ಧವನ್ ಹೊರಗುಳಿಯಬಹುದು. ಕಳೆದ 33 ಏಕದಿನ ಇನ್ನಿಂಗ್ಸ್‌ಗಳಲ್ಲಿ ಶಿಖರ್ ಧವನ್ ಒಂದೇ ಒಂದು ಶತಕ ಗಳಿಸಲು ಸಾಧ್ಯವಾಗಿಲ್ಲ. ಶಿಖರ್ ಧವನ್ ತಮ್ಮ ಕೊನೆಯ ODI ಶತಕವನ್ನು 9 ಜೂನ್ 2019 ರಂದು ICC ಕ್ರಿಕೆಟ್ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗಳಿಸಿದರು. ಶಿಖರ್ ಧವನ್ ಅವರಿಗೆ ಈಗ 36 ವರ್ಷ.

ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶಿಖರ್ ಧವನ್ ಕೇವಲ 7 ರನ್ ಗಳಿಸಿ ಔಟಾಗಿದ್ದರು. ಈ ಬಳಿಕ ಪಂದ್ಯ ಹೀನಾಯವಾಗಿ ಸೋಲು ಕಂಡಿತ್ತು. ಶಿಖರ್ ಧವನ್ ಅವರ ಫ್ಲಾಪ್ ಶೋ ನಂತರ, ನಾಯಕ ರೋಹಿತ್ ಶರ್ಮಾ ಎರಡನೇ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್‌ಗೆ ಅವಕಾಶ ನೀಡಬಹುದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: LIC ಈ ಹೊಸ ಯೋಜನೆಯ ಪ್ರೀಮಿಯಂಗೆ, 10 ಪಟ್ಟು ಲಾಭ ಸಿಗಲಿದೆ!

ಟೀಂ ಇಂಡಿಯಾದ ದೊಡ್ಡ ಅಸ್ತ್ರ 2023ರ ಏಕದಿನ ವಿಶ್ವಕಪ್:

ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ನೀಡಲು ಶಿಖರ್ ಧವನ್ ಗೆ ಸಾಧ್ಯವಾಗುತ್ತಿಲ್ಲ, ಇಂತಹ ಪರಿಸ್ಥಿತಿಯಲ್ಲಿ ಇಶಾನ್ ಕಿಶನ್ ಗೆ ಅವಕಾಶ ಸಿಕ್ಕರೆ ರನ್ ಗಳ ಬಿರುಸಿನ ಸ್ಫೋಟವನ್ನು ಮಾಡಬಹುದು. ಮುಂದಿನ ವರ್ಷ 2023ರ ODI ವಿಶ್ವಕಪ್ ಭಾರತದಲ್ಲಿ ನಡೆಯಲಿದ್ದು, ಇಶಾನ್ ಕಿಶನ್‌ಗೆ ಈಗಿನಿಂದಲೇ ODI ತಂಡದಲ್ಲಿ ನಿರಂತರ ಅವಕಾಶಗಳನ್ನು ನೀಡಬೇಕಾಗಿದೆ. ಇಶಾನ್ ಕಿಶನ್ ಅವರಂತಹ ಬಿರುಸಿನ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರೊಂದಿಗೆ ಏಕದಿನ ತಂಡದಲ್ಲಿ ಆರಂಭಿಕ ಸ್ಥಾನಕ್ಕೆ ಬಂದರೆ, 2023ರ ವಿಶ್ವಕಪ್ ಆಟದಲ್ಲಿ ಟೀಂ ಇಂಡಿಯಾದ ಗೆಲುವು ಖಚಿತ ಎನ್ನಬಹುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More