Home> Sports
Advertisement

Rohit Sharma: 56 ಟೆಸ್ಟ್ ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ ವಿಕೆಟ್ ಕಬಳಿಸಿದ್ದು 20ರ ಹರೆಯದ ಈ ಸ್ಪಿನ್ನರ್!

India vs England 2nd Test: ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಫ್ ಸ್ಪಿನ್ನರ್ ಶೋಯೆಬ್ ಬಶೀರ್‌ಗೆ ಪಾದಾರ್ಪಣೆ ಮಾಡಲು ಇಂಗ್ಲೆಂಡ್ ತಂಡ ಅವಕಾಶ ನೀಡಿದೆ. ಶೋಯೆಬ್ ಬಶೀರ್ ಕೂಡ ತಮ್ಮ ತಂಡವನ್ನು ನಿರಾಸೆಗೊಳಿಸದೆ ರೋಹಿತ್ ಶರ್ಮಾ ಅವರ ಅಮೂಲ್ಯ ವಿಕೆಟ್ ಪಡೆದರು.

Rohit Sharma: 56 ಟೆಸ್ಟ್ ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ ವಿಕೆಟ್ ಕಬಳಿಸಿದ್ದು 20ರ ಹರೆಯದ ಈ ಸ್ಪಿನ್ನರ್!

India vs England 2nd Test: ಭಾರತ ತಂಡದ ನಾಯಕ ರೋಹಿತ್ ಶರ್ಮಾ ವಿಫಲರಾಗಿದ್ದಾರೆ ಎಂದು ಮತ್ತೊಮ್ಮೆ ಸಾಬೀತಾಗಿದೆ. ವಿಶಾಖಪಟ್ಟಣಂನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ವಿಶೇಷ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಕೇವಲ 41 ಎಸೆತಗಳಲ್ಲಿ 14 ರನ್ ಗಳಿಸಿ ಔಟಾದರು. ರೋಹಿತ್ ಶರ್ಮಾ ಅವರ ಇನ್ನಿಂಗ್ಸ್‌’ನಲ್ಲಿ ಒಂದೇ ಒಂದು ಬೌಂಡರಿ ಕೂಡ ಹೊಡೆಯಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್‌ ಪರ ಪದಾರ್ಪಣೆ ಮಾಡಿದ್ದ 20 ವರ್ಷದ ಆಫ್ ಸ್ಪಿನ್ನರ್ ಶೋಯೆಬ್ ಬಶೀರ್ ರೋಹಿತ್ ಶರ್ಮಾ ಅವರ ವಿಕೆಟ್ ಪಡೆದರು.

ಇದನ್ನೂ ಓದಿ: Om shape temple: ಭಾರತದ ಈ ಸ್ಥಳದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಮೊದಲ 'ಓಂ' ಆಕಾರದ ದೇವಾಲಯ

ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಫ್ ಸ್ಪಿನ್ನರ್ ಶೋಯೆಬ್ ಬಶೀರ್‌ಗೆ ಪಾದಾರ್ಪಣೆ ಮಾಡಲು ಇಂಗ್ಲೆಂಡ್ ತಂಡ ಅವಕಾಶ ನೀಡಿದೆ. ಶೋಯೆಬ್ ಬಶೀರ್ ಕೂಡ ತಮ್ಮ ತಂಡವನ್ನು ನಿರಾಸೆಗೊಳಿಸದೆ ರೋಹಿತ್ ಶರ್ಮಾ ಅವರ ಅಮೂಲ್ಯ ವಿಕೆಟ್ ಪಡೆದರು. ಭಾರತದ ಇನ್ನಿಂಗ್ಸ್‌’ನ 18ನೇ ಓವರ್‌ನಲ್ಲಿ ಶೋಯೆಬ್ ಬಶೀರ್ ರೋಹಿತ್ ಶರ್ಮಾ ಅವರನ್ನು ಬಲೆಗೆ ಬೀಳಿಸಿದರು.

ಇದನ್ನೂ ಓದಿ: Yashasvi Jaiswal: ಸೆಹ್ವಾಗ್ ಶೈಲಿಯಲ್ಲಿ ಸಿಕ್ಸ್ ಬಾರಿಸಿದ ಯಶಸ್ವಿ ಜೈಸ್ವಾಲ್!

ಶೋಯೆಬ್ ಬಶೀರ್ ಅವರ ಸ್ಪಿನ್ ಬಾಲ್’ಗೆ ರೋಹಿತ್ ಶರ್ಮಾ ಬಳಿ ಉತ್ತರವಿಲ್ಲದೇ ವಿಕೆಟ್ ಕಳೆದುಕೊಳ್ಳಬೇಕಾಯಿತು. 18ನೇ ಓವರ್‌’ನಲ್ಲಿ ಮೊದಲ ಎರಡು ಎಸೆತಗಳನ್ನು ಆಡಿದ ರೋಹಿತ್ ಶರ್ಮಾ ಮೂರನೇ ಎಸೆತದಲ್ಲಿ ಸ್ಲಿಪ್‌’ಗೆ ಕ್ಯಾಚ್ ನೀಡಿದರು. ರೋಹಿತ್ ಶರ್ಮಾ ಔಟಾದ ತಕ್ಷಣ ವಿಶಾಖಪಟ್ಟಣಂನ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರೆಲ್ಲ ನಿರಾಸೆ ಅನುಭವಿಸಿದರು. ರೋಹಿತ್ ಶರ್ಮಾ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More