Home> Sports
Advertisement

New Zealand vs India, 3rd T20I: ಅಬ್ಬರಿಸಿದ ರೋಹಿತ್, ಥ್ರಿಲಿಂಗ್ ಸೂಪರ್ ಓವರ್ ನಲ್ಲಿ ಭಾರತಕ್ಕೆ ಗೆಲುವು

ಹ್ಯಾಮಿಲ್ಟನ್‌ನಲ್ಲಿ ಬುಧವಾರ ನಡೆದ ಐದು ಪಂದ್ಯಗಳ ಸರಣಿಯಲ್ಲಿ ಭಾರತವು ಸೂಪರ್ ಓವರ್ ಮೂಲಕ ಮೂರನೇ ಟಿ 20 ಅಂತರರಾಷ್ಟ್ರೀಯ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ 3-0 ಮುನ್ನಡೆ ಸಾಧಿಸಿತು.

New Zealand vs India, 3rd T20I: ಅಬ್ಬರಿಸಿದ ರೋಹಿತ್, ಥ್ರಿಲಿಂಗ್ ಸೂಪರ್ ಓವರ್ ನಲ್ಲಿ ಭಾರತಕ್ಕೆ ಗೆಲುವು

ನವದೆಹಲಿ: ಹ್ಯಾಮಿಲ್ಟನ್‌ನಲ್ಲಿ ಬುಧವಾರ ನಡೆದ ಐದು ಪಂದ್ಯಗಳ ಸರಣಿಯಲ್ಲಿ ಭಾರತವು ಸೂಪರ್ ಓವರ್ ಮೂಲಕ ಮೂರನೇ ಟಿ 20 ಅಂತರರಾಷ್ಟ್ರೀಯ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ 3-0 ಮುನ್ನಡೆ ಸಾಧಿಸಿತು.

ಸೆಡಾನ್ ಪಾರ್ಕ್‌ನಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿ ಐದು ವಿಕೆಟ್‌ಗೆ 179 ರನ್ ಗಳಿಸಿತು. ಓಪನರ್ ರೋಹಿತ್ ಶರ್ಮಾ 65 ರನ್ ಗಳಿಸಿ ಭಾರತ ಪರ ಅಗ್ರ ರನ್ ಗಳಿಸಿದರೆ, ನಾಯಕ ವಿರಾಟ್ ಕೊಹ್ಲಿ 38 ರನ್ ಹಾಗೂ ಕೆ.ಎಲ್ ರಾಹುಲ್ 27 ರನ್ ಗಳಿಸಿದ್ದಾರೆ.

ಭಾರತ ತಂಡ ನೀಡಿದ 180 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ನ್ಯೂಜಿಲೆಂಡ್ ತಂಡವು ಒಂದು ಹಂತದಲ್ಲಿ ಗೆಲುವಿನ ತಡಕ್ಕೆ ಬಂದು ನಿಂತಿತ್ತು.ಕೀವಿಸ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಕೇವಲ 48 ಎಸೆತಗಳಲ್ಲಿ 95 ರನ್ ಗಳಿಸುವ ಮೂಲಕ ಭಾರತ ತಂಡದ ಗೆಲುವಿಗೆ ಅಡ್ಡಿಯಾಗಿದ್ದರು.ಯಾವಾಗ ಅವರು ಶಮಿ ಬೌಲಿಗೆ ಔಟಾದರೂ ಆಗ ತಂಡದ ಚಿತ್ರಣವೇ ಬದಲಾಯಿತು.ಕೊನೆಗೆ ನ್ಯೂಜಿಲೆಂಡ್ ತಂಡವು 179ರನ್ ಗಳಿಸಿದ್ದರಿಂದಾಗಿ ಪಂದ್ಯ ಟೈ ನಲ್ಲಿ ಅಂತ್ಯಗೊಂಡಿತು.

ಕೊನೆಗೆ ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ ಕೀವಿಸ್ ತಂಡವು 17 ರನ್ ಗಳಿಸಿತು.ಇದಾದ ನಂತರ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡವು ಕೊನೆಯ ಎರಡು ಎಸೆತಗಳಲ್ಲಿ ರೋಹಿತ್ ಶರ್ಮಾ ಸಿಡಿಸಿದ ಎರಡು ಸಿಕ್ಸರ್ ಗಳ ಪರಿಣಾಮವಾಗಿ ಭಾರತ ಥ್ರಿಲಿಂಗ್ 20 ರನ್ ಗಳಿಸುವ ಮೂಲಕ ಸುಲಭವಾಗಿ ಗೆದ್ದುಕೊಂಡಿತು. ಆ ಮೂಲಕ ಭಾರತ ತಂಡವು ನ್ಯೂಜಿಲೆಂಡ್ ನೆಲದಲ್ಲಿ ಮೊದಲ ಬಾರಿಗೆ ಟಿ20 ಸರಣಿಯನ್ನು ಗೆದ್ದುಕೊಂಡಿದೆ.

 

Read More