Home> Sports
Advertisement

ರೋಚಕ ಫೈನಲ್ ನಲ್ಲಿ ಮುಂಬೈಗೆ ಒಲಿದ ಐಪಿಎಲ್ ಚಾಂಪಿಯನ್ ಪಟ್ಟ

ಹೈದರಾಬಾದ್ ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಕೊನೆಗೂ ವಿಜಯಲಕ್ಷ್ಮಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಒಲಿದಿದ್ದಾಳೆ. ತೀವ್ರ ಕುತೂಹಲ ಕೆರಳಿಸಿದ್ದ ಅಂತಿಮ ಪಂದ್ಯದಲ್ಲಿ ಚೆನ್ನೈ ವಿರುದ್ಧ ಕೇವಲ 1 ರನ್ ಗಳ ಅಂತರದ ರೋಚಕ ಗೆಲುವನ್ನು ಮುಂಬೈ ತಂಡವು ಸಾಧಿಸಿದೆ.

ರೋಚಕ ಫೈನಲ್ ನಲ್ಲಿ ಮುಂಬೈಗೆ ಒಲಿದ ಐಪಿಎಲ್ ಚಾಂಪಿಯನ್ ಪಟ್ಟ

ನವದೆಹಲಿ: ಹೈದರಾಬಾದ್ ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಕೊನೆಗೂ ವಿಜಯಲಕ್ಷ್ಮಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಒಲಿದಿದ್ದಾಳೆ. ತೀವ್ರ ಕುತೂಹಲ ಕೆರಳಿಸಿದ್ದ ಅಂತಿಮ ಪಂದ್ಯದಲ್ಲಿ ಚೆನ್ನೈ ವಿರುದ್ಧ ಕೇವಲ 1 ರನ್ ಗಳ ಅಂತರದ ರೋಚಕ ಗೆಲುವನ್ನು ಮುಂಬೈ ತಂಡವು ಸಾಧಿಸಿದೆ.

ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ತಂಡವು 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು. ಕಿರಣ್ ಪೊಲಾರ್ಡ್ ಅಜೇಯ್ 41 ರನ್ ಗಳಿಸಿದ್ದೆ ಅಧಿಕ ಮೊತ್ತವಾಗಿತ್ತು. ಪ್ರಾರಂಭದಲ್ಲಿ ರೋಹಿತ್ ಶರ್ಮಾ ಹಾಗೂ ಡಿಕಾಕ್ ಅವರು 45 ಮೊದಲ ವಿಕೆಟ್ ಜೊತೆಯಾಟವಾಡಿ ಬೃಹತ್ ಮೊತ್ತ ಗಳಿಸುವ ಸೂಚನೆ ನೀಡಿದ್ದರು.ಆದರೆ ನಂತರ ಮುಂಬೈ ತಂಡವು ಬೇಗನೆ ವಿಕೆಟ್ ಗಳನ್ನು ಕಳೆದುಕೊಂಡು ಸಾಧಾರಣ ಮೊತ್ತವನ್ನು ಗಳಿಸಿತು. 

150 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಚೆನ್ನೈ ತಂಡವು ಸುಲಭವಾಗಿ ತಲುಪುವ ಭರವಸೆ ನೀಡಿತ್ತು. ಆದರೆ ಕೊನೆಯ ಹಂತದಲ್ಲಿ ಆದ ಎಡವಟ್ಟುಗಳಿಂದಾಗಿ ಪಂದ್ಯ ಕೈ ಜಾರುವಂತೆ ಆಗಿತ್ತು. ಶೇನ್ ವಾಟ್ಸನ್ ಅವರು ಚೆನ್ನೈ ಪರವಾಗಿ ಏಕಾಂಗಿ ಹೋರಾಟ ನಡೆಸಿದರು ಕೂಡ ಕೊನೆಯಲ್ಲಿ ರನ್ ಔಟ್ ಆಗಿ ಹೊರ ನಡೆದಾಗ ಪಂದ್ಯ ಮುಂಬೈ ಕಡೆ ವಾಲಿತ್ತು. ಅವರು ಕೇವಲ 59 ಎಸೆತಗಳಲ್ಲಿ 80 ರನ್ ಗಳಿಸಿದರೂ ಕೂಡ ಕೊನೆಯಲ್ಲಿ ರನ್ ಔಟ್ ಆಗಿ ಭಾರಿ ನಿರಾಸೆ ಮಾಡಿದರು.

ಅಂತಿಮ ಓವರ್ ಗಳಲ್ಲಿ ಗೆಲುವಿಗೆ 2 ರನ್ ಗಳ ಅಗತ್ಯವಿತ್ತು, ಆದರೆ ಲಸಿತ್ ಮಾಲಿಂಗ್ ಎಸೆದ ಯಾರ್ಕರ್ ನಿಂದಾಗಿ ಶಾರ್ದುಲ್ ಠಾಕೂರ್ ಅವರು ಎಲ್ಬಿಡಬ್ಲ್ಯು ಗೆ ಬಲಿಯಾದರು. ಆ ಮೂಲಕ ಚೆನ್ನೈ ತಂಡ 1 ರನ್ ಗಳ ಅಂತರಿಂದ ಚಾಂಪಿಯನ್ ಪಟ್ಟವನ್ನು ಕೈಚೆಲ್ಲಿತು. 
 

Read More