Home> Sports
Advertisement

Heartbreaking!: ಎಂ.ಎಸ್.ಧೋನಿ ಭೇಟಿಯಾಗಲು 1,400 ಕಿ.ಮೀ ನಡೆದುಹೋದ ಅಭಿಮಾನಿ..!

ಅಜಯ್ ಗಿಲ್ ಎಂಬ ಹೆಸರಿನ ಅಭಿಮಾನಿಯೊಬ್ಬ ಎಂ.ಎಸ್.ಧೋನಿಯವರನ್ನು ಭೇಟಿಯಾಗಲು ಬರೋಬ್ಬರಿ 1,400 ಕಿ.ಮೀ ದೂರದಿಂದ ಹೋಗಿದ್ದಾನೆ.

Heartbreaking!: ಎಂ.ಎಸ್.ಧೋನಿ ಭೇಟಿಯಾಗಲು 1,400 ಕಿ.ಮೀ ನಡೆದುಹೋದ ಅಭಿಮಾನಿ..!

ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಕೋಟ್ಯಂತರ ಫ್ಯಾನ್ ಫಾಲೋವರ್ಸ್ ಗಳಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನನ್ನು ಜೀವನದಲ್ಲಿ ಒಮ್ಮೆಯಾದರೂ ಭೇಟಿ ಮಾಡಿ ಮಾತನಾಡಿಸಬೇಕೆಂಬುದು ಅವರ ಅಭಿಮಾನಿಗಳ ಬಯಕೆಯಾಗಿರುತ್ತದೆ. ಧೋನಿಯನ್ನು ಖುದ್ದು ಭೇಟಿಯಾಗಲೇಬೇಕೆಂದು ಅನೇಕರು ಸಾವಿರಾರು ಕಿ.ಮೀ ದೂರದಿಂದ ಹೋಗುತ್ತಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಯಾಕೆಂದರೆ ಅಭಿಮಾನಿಗಳ ಅಭಿಮಾನವೇ ಅಂತಹದ್ದು. ತಾವು ಅತಿಯಾಗಿ ಪ್ರೀತಿಸುವ ನೆಚ್ಚಿನ ಆಟಗಾರರನ್ನು ಭೇಟಿಯಾಗಲು ಅವರು ಎಲ್ಲದ್ದಕ್ಕೂ ಸಿದ್ಧರಾಗಿರುತ್ತಾರೆ.  

ಇದೇ ರೀತಿಯ ಘಟನೆಯೊಂದರಲ್ಲಿ ಅಜಯ್ ಗಿಲ್ ಎಂಬ ಹೆಸರಿನ ಅಭಿಮಾನಿಯೊಬ್ಬ ಎಂ.ಎಸ್.ಧೋನಿಯವರನ್ನು ಭೇಟಿಯಾಗಲು ಬರೋಬ್ಬರಿ 1,400 ಕಿ.ಮೀ ದೂರದಿಂದ ಹೋಗಿದ್ದಾನೆ. ಆದರೆ ಕೊನೆಗೆ ಅವರು ನಿರಾಶೆ ಅನುಭವಿಸಿದ್ದಾರೆ. ಯಾಕೆಂದರೆ ಇಷ್ಟು ದೂರದಿಂದ ಬಂದಿದ್ದ ಆತನಿಗೆ ತನ್ನ ನೆಚ್ಚಿನ ಆಟಗಾರನನ್ನು ಭೇಟಿಯಾಗಲು ಸಾಧ್ಯವಾಗಿಲ್ಲ.

ಇದನ್ನೂ ಓದಿ: ಲಾರ್ಡ್ಸ್ ನಲ್ಲಿ ಲಾರ್ಡ್ ಗಳಾದ ಟೀಮ್ ಇಂಡಿಯಾ ಬೌಲರ್ ಗಳು, ಭಾರತಕ್ಕೆ ಭರ್ಜರಿ ಜಯ

ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿರುವ ಧೋನಿಯನ್ನು ಭೇಟಿಯಾಗಲು ಹರಿಯಾಣದ ಹಿಸಾರ್ ಜಿಲ್ಲೆಯ ತನ್ನ ಹಳ್ಳಿ ಜಲನ್ ಖೇಡಾದಿಂದ 18 ವರ್ಷದ ಅಜಯ್ ಗಿಲ್ ಹೋಗಿದ್ದಾನೆ. 1,400 ಕಿ.ಮೀ ನಡೆದುಕೊಂಡೇ ಅವರು ಧೋನಿ ಭೇಟಿಯಾಗಲು ಬಂದಿದ್ದರು. ಗಿಲ್ ಪ್ರಕಾರ, ಅವರು ಧೋನಿಯನ್ನು ಕೇವಲ 10 ನಿಮಿಷಗಳ ಕಾಲ ಭೇಟಿಯಾಗಲು ಬಯಸಿದ್ದರು. ಅದಕ್ಕಾಗಿ ಅವರು ಜುಲೈ 29 ರಿಂದ 16 ದಿನಗಳ ಕಾಲ ನಡೆದಿದ್ದಾರೆ. ಹಿಸಾರ್ ನಲ್ಲಿ ಕ್ಷೌರಿಕನಾಗಿ ಕೆಲಸ ಮಾಡುತ್ತಿರುವ ಗಿಲ್ ಧೋನಿ ಭೇಟಿಯಾಗದೆ ನಿರಾಸೆ ಅನುಭವಿಸಿದ್ದಾರೆ. ಗಿಲ್ ರಾಂಚಿಯ ಹೊರವಲಯದಲ್ಲಿರುವ ಧೋನಿಯ ಸಿಮಾಲಿಯಾ ಫಾರ್ಮ್ ಹೌಸ್ ಹೊರಗೆ ಕಾಯುತ್ತಿದ್ದರು. ಆದರೆ ಧೋನಿ ಪ್ರಸ್ತುತ ರಾಂಚಿಯಲ್ಲಿಲ್ಲ. ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗಾಗಿ ಅವರು ಸಿಎಸ್‌ಕೆ ತಂಡ ಸೇರಿಕೊಳ್ಳಲು ಯುಎಇಗೆ ತೆರಳಿದ್ದಾರೆ.

ಇದನ್ನೂ ಓದಿ: Ball tampering: ಲಾರ್ಡ್ಸ್ ಟೆಸ್ಟ್ ನಲ್ಲಿ ಆಂಗ್ಲರ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ..!

ಗಿಲ್ ತನ್ನ ವಿಶಿಷ್ಟ ನೋಟದಿಂದ ರಾಂಚಿಯಲ್ಲಿ ದಾರಿಹೋಕರ ಗಮನ ಸೆಳೆದಿದ್ದರು. ಯಾಕೆಂದರೆ ಆತನ ಕೂದಲು ಹಳದಿ, ಕಿತ್ತಳೆ, ಕಡು ನೀಲಿ ಮತ್ತು ತಿಳಿ ನೀಲಿ ಬಣ್ಣದ್ದಾಗಿತ್ತು. ಇವು CSK ತಂಡದ ಬಣ್ಣಗಳಾಗಿವೆ. ಗಿಲ್ ತನ್ನ ತಲೆಯನ್ನು ಭಾಗಶಃ ‘ಧೋನಿ’ ಎಂದು, ಇನ್ನೊಂದು ಕಡೆ ‘ಮಾಹಿ’ ಎಂದು ಬರೆಸಿಕೊಂಡಿದ್ದನು. ಧೋನಿ ಬರುವವರೆಗೂ ನಾನು ಇಲ್ಲಿಯೇ ಕಾಯುತ್ತೇನೆ ಎಂದು ಗಿಲ್ ಹಠಹಿಡಿದು ಕುಳಿತಿದ್ದರಂತೆ. ಯುವ ಉದ್ಯಮಿಯೊಬ್ಬರು ಧೋನಿ ಮುಂದಿನ 3 ತಿಂಗಳು ಇಲ್ಲಿಗೆ ಬರುವುದಿಲ್ಲ ಅಂತಾ ಹೇಳಿ ಅವರ ಮನವೊಲಿಸಿದರು. ಅಲ್ಲದೆ ಮರಳಿ ಊರಿಗೆ ಹೋಗಲು ಗಿಲ್‌ಗಾಗಿ ದೆಹಲಿಗೆ ವಿಮಾನದ ಟಿಕೆಟ್ ಅನ್ನು ಸಹ ಕಾಯ್ದಿರಿಸಿದರಂತೆ. ನೆಚ್ಚಿನ ಆಟಗಾರರನ್ನು ಕಣ್ತುಂಬಿಕೊಳ್ಳಲೆಂದು ಅಷ್ಟು ದೂರದಿಂದ ಬಂದಿದ್ದ ಗಿಲ್ ಗೆ ನಿರಾಸೆಯಾಗಿದೆ. ಆದರೆ ಮುಂದೊಂದು ದಿನ ಮತ್ತೆ ಧೋನಿ ಭೇಟಿಯಾಗಲು ಬಂದೇ ಬರುತ್ತೇನೆ ಅಂತಾ ಗಿಲ್ ಹೇಳಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More