Home> Sports
Advertisement

VIDEO: ಮುದ್ದಿನ ಮಗಳೊಂದಿಗೆ ಧೋನಿ ಹುಟ್ಟುಹಬ್ಬ ಆಚರಣೆ!

ಇಂಗ್ಲೆಂಡ್‌ನ ಲೀಡ್ಸ್ನಲ್ಲಿ, ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ, ಮಗಳು ಜೀವಾ ಮತ್ತು ಭಾರತ ಕ್ರಿಕೆಟ್ ತಂಡದ ಆಟಗಾರರೊಂದಿಗೆ ಧೋನಿ ಹುಟ್ಟುಹಬ್ಬ ಆಚರಿಸಿಕೊಂಡರು.

VIDEO: ಮುದ್ದಿನ ಮಗಳೊಂದಿಗೆ ಧೋನಿ ಹುಟ್ಟುಹಬ್ಬ ಆಚರಣೆ!

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ 38 ನೇ ಹುಟ್ಟುಹಬ್ಬವನ್ನು ಜುಲೈ 7 ರಂದು ಭಾನುವಾರ ಆಚರಿಸಿದರು. ಲೀಡ್ಸ್ ಆಫ್ ಇಂಗ್ಲೆಂಡ್‌ನಲ್ಲಿ, ಧೋನಿ  ಪತ್ನಿ ಸಾಕ್ಷಿ, ಮಗಳು ಜೀವ ಮತ್ತು ತಂಡದ ಸದಸ್ಯರೊಂದಿಗೆ ಹುಟ್ಟುಹಬ್ಬ ಆಚರಿಸಿದರು. ಮುದ್ದಿನ ಮಗಳೊಂದಿಗೆ ಕೇಕ್ ಕತ್ತರಿಸಿದ ಧೋನಿ ಕೇಕ್ ಅನ್ನು ಮೊದಲು ತಮ್ಮ ಮಗಳು ಜೀವಗೆ ತಿನ್ನಿಸಿ, ಬಳಿಕ ಮಡದಿಗೆ ತಿನ್ನಿಸಿದರು.

ಜುಲೈ 7, 1981 ರಂದು ಜಾರ್ಖಂಡ್‌ನ ರಾಂಚಿಯಲ್ಲಿ (ಆಗಿನ ಬಿಹಾರ) ಜನಿಸಿದ ಧೋನಿ ಇಂಗ್ಲೆಂಡ್‌ನಲ್ಲಿ ಪತ್ನಿ ಮತ್ತು ಮಗಳು ಜೀವ ಸೇರಿದಂತೆ ಇತರ ಆಪ್ತ ಆಟಗಾರರೊಂದಿಗೆ ನಿನ್ನೆ ತಮ್ಮ ಜನ್ಮದಿನವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಅವರ ಪತ್ನಿ ಸಾಕ್ಷಿ ಜನ್ಮದಿನಾಚರಣೆಯ ವಿಡಿಯೋ ಮತ್ತು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಬಿಸಿಸಿಐ ಕೂಡ ತನ್ನ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದೆ.

ಟೀಮ್ ಇಂಡಿಯಾದ ಯಶಸ್ವಿ ನಾಯಕರಲ್ಲಿ ಒಬ್ಬರು:
ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ನಾಯಕರಲ್ಲಿ ಧೋನಿ ಕೂಡ ಛಾಪು ಮೂಡಿಸಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ  ತಂಡ 27 ಟೆಸ್ಟ್, 110 ಏಕದಿನ ಮತ್ತು 41 ಟಿ-20 ಪಂದ್ಯಗಳನ್ನು ಗೆದ್ದಿದೆ. ಧೋನಿ ನಾಯಕತ್ವದಲ್ಲಿ, ಭಾರತ ತಂಡವು 2007 ರಲ್ಲಿ ಟಿ-20 ವಿಶ್ವಕಪ್ ಮತ್ತು 2011 ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಗೆದ್ದಿತು. ಇದಲ್ಲದೆ ಧೋನಿ 2013 ರಲ್ಲಿ ತಂಡಕ್ಕೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ನೀಡಿದ್ದಾರೆ.

ಧೋನಿ ವೃತ್ತಿಜೀವನ
ಮಹೇಂದ್ರ ಸಿಂಗ್ ಧೋನಿಯವರ ಕ್ರಿಕೆಟ್ ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ, ಧೋನಿ ಇದುವರೆಗೆ 349 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳ 296 ಇನ್ನಿಂಗ್ಸ್‌ಗಳಲ್ಲಿ, ಧೋನಿ ತಮ್ಮ 72 ಅರ್ಧಶತಕ ಮತ್ತು 10 ಶತಕಗಳನ್ನು ಒಳಗೊಂಡಂತೆ 50.58 ಸರಾಸರಿಯಲ್ಲಿ 10723 ರನ್ ಗಳಿಸಿದ್ದಾರೆ. ಇದಲ್ಲದೆ, 90 ಟೆಸ್ಟ್ ಪಂದ್ಯಗಳ 144 ಇನ್ನಿಂಗ್ಸ್‌ಗಳಲ್ಲಿ ಮಹೇಂದ್ರ ಸಿಂಗ್ ಧೋನಿ 38.09 ಸರಾಸರಿಯಲ್ಲಿ 4876 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ ಅವರು 6 ಶತಕಗಳನ್ನು ಮತ್ತು 33 ಅರ್ಧಶತಕಗಳನ್ನು ಗಳಿಸಿದ್ದಾರೆ.

Read More