Home> Sports
Advertisement

ಎಂ.ಎಸ್.ಧೋನಿ ಕ್ರಿಕೆಟ್ ನಿವೃತ್ತಿ ವದಂತಿ ಕುರಿತು ಮೌನ ಮುರಿದ ಪತ್ನಿ ಸಾಕ್ಷಿ

ಮಹೋಂದ್ರ ಸಿಂಗ್ ಧೋನಿ ಲಾಕ್ ಡೌನ್ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಿಂದ ದೂರ ಉಳಿದಿದ್ದಾರೆ.

ಎಂ.ಎಸ್.ಧೋನಿ ಕ್ರಿಕೆಟ್ ನಿವೃತ್ತಿ ವದಂತಿ ಕುರಿತು ಮೌನ ಮುರಿದ ಪತ್ನಿ ಸಾಕ್ಷಿ

ನವದೆಹಲಿ: ಮಹೋಂದ್ರ ಸಿಂಗ್ ಧೋನಿ ಲಾಕ್ ಡೌನ್ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಿಂದ ದೂರ ಉಳಿದಿದ್ದಾರೆ.

ಇತ್ತೀಚಿಗೆ ಧೋನಿ ನಿವೃತ್ತಿ ಕುರಿತಾಗಿ ಟ್ರೆಂಡಿಂಗ್ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡಿದ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ  ಧೋನಿ ಪತ್ನಿ ಸಾಕ್ಷಿ "ಈ ಲಾಕ್ ಡೌನ್ ಸಮಯದಲ್ಲಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಶೂನ್ಯ ಉಪಸ್ಥಿತಿಯನ್ನು ಹೊಂದಿದ್ದಾರೆ, ಈ ವಿಷಯಗಳು ಎಲ್ಲಿಂದ ಬರುತ್ತವೆ ಎಂದು ನನಗೆ ತಿಳಿದಿಲ್ಲ ಎಂದು ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತ ಹ್ಯಾಂಡಲ್ನಲ್ಲಿ ಇನ್ಸ್ಟಾಗ್ರಾಮ್ ಲೈವ್ ಅಧಿವೇಶನದಲ್ಲಿ ಸಾಕ್ಷಿ ಹೇಳಿದರು.ಧೋನಿ ನಿವೃತ್ತಿ ಕುರಿತಾಗಿ ವದಂತಿಗಳು ಕೇಳಿಬರುತ್ತಿರುವ ಬೆನ್ನಲೇ ಈಗ ಸಾಕ್ಷಿ ಅವರ ಸ್ಪಷ್ಟೀಕರಣ ಬಂದಿದೆ.

2019 ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಭಾರತ ಸೋತಾಗಿನಿಂದ ಎಮ್.ಎಸ್.ಧೋನಿ ಕ್ರಿಕೆಟ್ ನಿಂದ ದೂರಾಗಿದ್ದಾರೆ.ಈ ಹಿನ್ನಲೆಯಲ್ಲಿ ಆಗಾಗ ಅವರ ನಿವೃತ್ತಿ ಕುರಿತಾದ ಊಹಾಪೋಹಗಳು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಮಾಡುತ್ತಲೇ ಇರುತ್ತವೆ .ಇಂಡಿಯನ್ ಪ್ರೀಮಿಯರ್ ಲೀಗ್‌ನ 2020 ರ ನಲ್ಲಿ ಅವರು ಭಾಗವಹಿಸಬೇಕಾಗಿತ್ತು, ಆದರೆ ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಟೂರ್ನಿಯನ್ನು ಅನಿರ್ಧಿಷ್ಟವಾಗಿ ಮುಂದೂಡಲಾಯಿತು. 

Read More