Home> Sports
Advertisement

Diamond Magnate Nirav Modi: ನೀರವ್ ಮೋದಿ ಭಾರತಕ್ಕೆ ಹಸ್ತಾಂತರಿಸಲು ಲೈನ್ ಕ್ಲಿಯರ್! ಬ್ರಿಟನ್ನಲ್ಲಿದ್ದ ಕೊನೆಯ ಭರವಸೆಯೂ ನಾಶ

Diamond Magnate Nirav Modi: 2018ರಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ನೀರವ್ ಮೋದಿ ಭಾರತದಿಂದ ಪರಾರಿಯಾಗಿದ್ದರು. ಅವರನ್ನು ಹಸ್ತಾಂತರಿಸಿದರೆ ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂದು ವಾದಿಸಿದ್ದಾರೆ. ನೀರವ್ ಮೋದಿ ಸದ್ಯ ಲಂಡನ್‌ನ ವಾಂಡ್ಸ್‌ವರ್ತ್ ಜೈಲಿನಲ್ಲಿದ್ದಾರೆ. ಈಗ ಅವರಿಗೆ ಬ್ರಿಟನ್‌ನಲ್ಲಿ ಯಾವುದೇ ಕಾನೂನು ಅವಕಾಶವಿಲ್ಲ.

Diamond Magnate Nirav Modi: ನೀರವ್ ಮೋದಿ ಭಾರತಕ್ಕೆ ಹಸ್ತಾಂತರಿಸಲು ಲೈನ್ ಕ್ಲಿಯರ್! ಬ್ರಿಟನ್ನಲ್ಲಿದ್ದ ಕೊನೆಯ ಭರವಸೆಯೂ ನಾಶ

Diamond Magnate Nirav Modi: ಪರಾರಿಯಾಗಿದ್ದ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಬ್ರಿಟನ್ ಕೋರ್ಟ್ ನಿಂದ ಶಾಕ್ ನೀಡಿದೆ. ಭಾರತಕ್ಕೆ ಹಸ್ತಾಂತರದ ವಿರುದ್ಧ ನೀರವ್ ಮೋದಿ ಸಲ್ಲಿಸಿದ್ದ ಮೇಲ್ಮನವಿಯನ್ನು ಬ್ರಿಟನ್ ನ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಲಂಡನ್‌ನಲ್ಲಿರುವ ರಾಯಲ್ ಕೋರ್ಟ್ ಆಫ್ ಜಸ್ಟಿಸ್‌ನಲ್ಲಿ ನ್ಯಾಯಮೂರ್ತಿ ಜೆರೆಮಿ ಸ್ಟುವರ್ಟ್-ಸ್ಮಿತ್ ಮತ್ತು ನ್ಯಾಯಮೂರ್ತಿ ರಾಬರ್ಟ್ ಜೇ ಅವರಿದ್ದ ಪೀಠ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ಅರ್ಜಿದಾರರ (ನೀರವ್ ಮೋದಿ) ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: WhatsApp Pay ಗೆ ರಾಜೀನಾಮೆ ನೀಡಿದ ಮುಖ್ಯಸ್ಥ ವಿನಯ್ ಚೋಲೆಟ್ಟಿ...!

ಕಳೆದ ತಿಂಗಳು, 51 ವರ್ಷದ ವಜ್ರದ ವ್ಯಾಪಾರಿ ತನ್ನ ಮಾನಸಿಕ ಆರೋಗ್ಯದ ಆಧಾರದ ಮೇಲೆ ಸಲ್ಲಿಸಿದ ಮೇಲ್ಮನವಿಯನ್ನು ತಿರಸ್ಕರಿಸಲಾಗಿದೆ.

2018ರಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ನೀರವ್ ಮೋದಿ ಭಾರತದಿಂದ ಪರಾರಿಯಾಗಿದ್ದರು. ಅವರನ್ನು ಹಸ್ತಾಂತರಿಸಿದರೆ ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂದು ವಾದಿಸಿದ್ದಾರೆ. ನೀರವ್ ಮೋದಿ ಸದ್ಯ ಲಂಡನ್‌ನ ವಾಂಡ್ಸ್‌ವರ್ತ್ ಜೈಲಿನಲ್ಲಿದ್ದಾರೆ. ಈಗ ಅವರಿಗೆ ಬ್ರಿಟನ್‌ನಲ್ಲಿ ಯಾವುದೇ ಕಾನೂನು ಅವಕಾಶವಿಲ್ಲ.

ವಂಚನೆ, ಮನಿ ಲಾಂಡರಿಂಗ್, ಸಾಕ್ಷ್ಯ ನಾಶ ಮತ್ತು ಸಾಕ್ಷಿಗಳ ಬೆದರಿಕೆಯನ್ನು ಎದುರಿಸಲು ಭಾರತೀಯ ಅಧಿಕಾರಿಗಳು ನೀರವ್ ಮೋದಿಯನ್ನು ಬ್ರಿಟನ್‌ನಿಂದ ಹಸ್ತಾಂತರಿಸಲು ಪ್ರಯತ್ನಿಸುತ್ತಿದ್ದಾರೆ. ನೀರವ್ ಮೋದಿ ಅವರ ತಾಯಿಯ ಚಿಕ್ಕಪ್ಪ ಮೆಹುಲ್ ಚೋಕ್ಸಿ ಕೂಡ ಪಿಎನ್‌ಬಿಗೆ ವಂಚಿಸಿದ ಆರೋಪ ಹೊತ್ತಿದ್ದಾರೆ. ಭಾರತೀಯ ಏಜೆನ್ಸಿಗಳಿಗೆ ಅವರು ಅವಶ್ಯಕವಾಗಿ ಬೇಕಾಗಿದ್ದಾರೆ. ಸದ್ಯ ಈತ ಆಂಟಿಗುವಾ ಮತ್ತು ಬಾರ್ಬುಡಾದ ಪೌರತ್ವವನ್ನು ತೆಗೆದುಕೊಂಡಿದ್ದಾರೆ.

ಹೈಕೋರ್ಟ್ ಮೇಲ್ಮನವಿ ವಜಾ:

ಇದಕ್ಕೂ ಮುನ್ನ ನೀರವ್ ಮೋದಿ ಅವರ ಮನವಿಯನ್ನು ಯುಕೆ ಹೈಕೋರ್ಟ್ ತಿರಸ್ಕರಿಸಿತ್ತು. ಲಾರ್ಡ್ ಜಸ್ಟೀಸ್ ಜೆರೆಮಿ ಸ್ಟುವರ್ಟ್-ಸ್ಮಿತ್ ಮತ್ತು ನ್ಯಾಯಮೂರ್ತಿ ರಾಬರ್ಟ್ ಜೇ ಅವರು ಪರಾರಿಯಾಗಿರುವ ಉದ್ಯಮಿಯನ್ನು ಭಾರತಕ್ಕೆ ಹಸ್ತಾಂತರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಇಬ್ಬರೂ ನ್ಯಾಯಾಧೀಶರು ಈ ವರ್ಷದ ಆರಂಭದಲ್ಲಿ ಮೇಲ್ಮನವಿಯನ್ನು ಆಲಿಸಿದ್ದರು.

ಇದನ್ನೂ ಓದಿ: “ ಮುಂದಿನ ವರ್ಷ ಭಾರತ ಶೇ 5 ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸಿದರೆ ಅದೇ ಅದೃಷ್ಟ"

ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ ಸಾಲ ಪಡೆದು ಬಳಿಕ 11,000 ಕೋಟಿ ರೂ. ವಂಚನೆ ಮಾಡಿರುವ ನೀರವ್ ಮೋದಿ 2018ರಲ್ಲಿ ಭಾರತದಿಂದ ಪಲಾಯನ ಮಾಡಿದ್ದರು. ಗುಜರಾತ್‌ನ 51 ವರ್ಷದ ವಜ್ರದ ಉದ್ಯಮಿ ನೀರವ್ ಮೋದಿನ್ನು ಭಾರತಕ್ಕೆ ಹಸ್ತಾಂತರಿಸಿದರೆ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯ ಇದೆ ಎಂದು ಅವರ ಪರ ವಕೀಲರು ವಾದಿಸಿದ್ದರು. ಆದರೆ ಹೈಕೋರ್ಟ್ ಮಾತ್ರ ಈ ವಾದವನ್ನು ತಳ್ಳಿ ಹಾಕಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More