Home> Sports
Advertisement

India vs Bangladesh 1st Test: ಟೀ ಇಂಡಿಯಾಗೆ 10 ತಿಂಗಳ ಬಳಿಕ ಎಂಟ್ರಿ ಕೊಟ್ಟು 5 ವಿಕೆಟ್ ಕಬಳಿಸಿದ ಸ್ಟಾರ್ ಆಟಗಾರ

India vs Bangladesh 1st Test: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 404 ರನ್ ಗಳಿಸಿತ್ತು. ಇದಕ್ಕೆ ಪ್ರತ್ಯುತ್ತರ ನೀಡಲೆಂದು ಕಣಕ್ಕಿಳಿದ ಬಾಂಗ್ಲಾದೇಶ ಬ್ಯಾಟ್ಸ್‌ಮನ್‌ಗಳು ಸಂಪೂರ್ಣ ಸೋಲು ಕಂಡರ. ಚೈನಾಮನ್ ಬೌಲರ್ ಕುಲದೀಪ್ ಯಾದವ್ ಟೀಂ ಇಂಡಿಯಾದ ಅತ್ಯಂತ ಯಶಸ್ವಿ ಬೌಲರ್. 10 ತಿಂಗಳ ನಂತರ ಮರಳಿದ ಅವರು ಅರ್ಧದಷ್ಟು ಬಾಂಗ್ಲಾದೇಶ ತಂಡವನ್ನು ಪೆವಿಲಿಯನ್‌ಗೆ ಕಳುಹಿಸುವ ಕೆಲಸ ಮಾಡಿದ್ದಾರೆ.

India vs Bangladesh 1st Test: ಟೀ ಇಂಡಿಯಾಗೆ 10 ತಿಂಗಳ ಬಳಿಕ ಎಂಟ್ರಿ ಕೊಟ್ಟು 5 ವಿಕೆಟ್ ಕಬಳಿಸಿದ ಸ್ಟಾರ್ ಆಟಗಾರ

India vs Bangladesh 1st Test: ಬಾಂಗ್ಲಾದೇಶ ವಿರುದ್ಧದ 2 ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿದೆ. ಈ ಪಂದ್ಯದಲ್ಲಿ ತಂಡದ ನಾಯಕರಾಗಿದ್ದ ಕೆಎಲ್ ರಾಹುಲ್ 10 ತಿಂಗಳಿಂದ ಯಾವುದೇ ಟೆಸ್ಟ್ ಪಂದ್ಯ ಆಡದ ಆಟಗಾರನಿಗೆ ಪ್ಲೇಯಿಂಗ್ 11ರಲ್ಲಿ ಅವಕಾಶ ನೀಡಿದ್ದರು. ನಾಯಕನ ನಂಬಿಕೆಗೆ ತಕ್ಕಂತೆ ನಡೆದುಕೊಂಡ ಈ ಆಟಗಾರ 5 ವಿಕೆಟ್ ಪಡೆಯುವ ಮೂಲಕ ಆಯ್ಕೆದಾರರಿಗೆ ತಕ್ಕ ಉತ್ತರ ನೀಡಿದರು.

ಇದನ್ನೂ ಓದಿ: FIFA World Cup 2022: ಫಿಫಾ ಫೈನಲ್ ಗೂ ಮುನ್ನ ಅರ್ಜೆಂಟೀನಾಗೆ ಬಿಗ್ ಶಾಕ್: ಮೆಸ್ಸಿಗೆ ಗಾಯ!

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 404 ರನ್ ಗಳಿಸಿತ್ತು. ಇದಕ್ಕೆ ಪ್ರತ್ಯುತ್ತರ ನೀಡಲೆಂದು ಕಣಕ್ಕಿಳಿದ ಬಾಂಗ್ಲಾದೇಶ ಬ್ಯಾಟ್ಸ್‌ಮನ್‌ಗಳು ಸಂಪೂರ್ಣ ಸೋಲು ಕಂಡರ. ಚೈನಾಮನ್ ಬೌಲರ್ ಕುಲದೀಪ್ ಯಾದವ್ ಟೀಂ ಇಂಡಿಯಾದ ಅತ್ಯಂತ ಯಶಸ್ವಿ ಬೌಲರ್. 10 ತಿಂಗಳ ನಂತರ ಮರಳಿದ ಅವರು ಅರ್ಧದಷ್ಟು ಬಾಂಗ್ಲಾದೇಶ ತಂಡವನ್ನು ಪೆವಿಲಿಯನ್‌ಗೆ ಕಳುಹಿಸುವ ಕೆಲಸ ಮಾಡಿದ್ದಾರೆ. ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಕುಲದೀಪ್ ಯಾದವ್ ತಂಡದ ಭಾಗವಾಗಿದ್ದರು ಮತ್ತು ಕೆಎಲ್ ರಾಹುಲ್ ಅವರನ್ನು ಟೆಸ್ಟ್ ಪಂದ್ಯದಲ್ಲೂ ಕಣಕ್ಕಿಳಿಸಿದರು.

ಕುಲದೀಪ್ ಯಾದವ್ ಬಹಳ ದಿನಗಳಿಂದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಆದರೆ ಈ ಬಾರಿ ಅವಕಾಶ ಸಿಕ್ಕ ತಕ್ಷಣ ಅದ್ಭುತ ಪ್ರದರ್ಶನ ನೀಡಿದರು. ಈ ಪಂದ್ಯಕ್ಕೂ ಮುನ್ನ ಅವರು ಫೆಬ್ರವರಿ 13 ರಂದು ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಪರ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಯಾಸಿರ್ ಅಲಿ, ಮುಶ್ಫಿಕರ್ ರಹೀಮ್ ಮತ್ತು ಶಕೀಬ್ ಅಲ್ ಹಸನ್ ಅವರಂತಹ ದೊಡ್ಡ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುವ ಮೂಲಕ 5 ವಿಕೆಟ್ ಕಬಳಿಸಿದ್ದಾರೆ.

ಇದನ್ನೂ ಓದಿ: Chris Gayle in IPL: IPL-2023ರಲ್ಲಿ ಕ್ರಿಸ್ ಗೇಲ್ ಎಂಟ್ರಿ: ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ‘ಯೂನಿವರ್ಸ್ ಬಾಸ್'

27 ವರ್ಷದ ಕುಲದೀಪ್ ಯಾದವ್ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದ ಏಳನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಾಂಗ್ಲಾದೇಶ ತಂಡವು ಈ ಇನ್ನಿಂಗ್ಸ್‌ನಲ್ಲಿ 150 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಇನ್ನಿಂಗ್ಸ್‌ನಲ್ಲಿ ಕುಲದೀಪ್ ಯಾದವ್ ಹೊರತುಪಡಿಸಿ, ಮೊಹಮ್ಮದ್ ಸಿರಾಜ್ 3 ವಿಕೆಟ್ ಮತ್ತು ಉಮೇಶ್ ಯಾದವ್-ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More