Home> Sports
Advertisement

ರಾಬಿನ್ ಉತ್ತಪ್ಪ, ರಾಣಾ ಭರ್ಜರಿ ಅರ್ಧಶತಕ; ಕೊಲ್ಕತ್ತಾಗೆ ಗೆಲುವು

ಇಲ್ಲಿನ ಈಡನ್ ಗಾರ್ಡನ್ ನಲ್ಲಿ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಪಂಜಾಬ್ ತಂಡದ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಗೆಲುವು ಸಾಧಿಸಿದೆ.

ರಾಬಿನ್ ಉತ್ತಪ್ಪ, ರಾಣಾ ಭರ್ಜರಿ ಅರ್ಧಶತಕ; ಕೊಲ್ಕತ್ತಾಗೆ ಗೆಲುವು

ಕೊಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ ನಲ್ಲಿ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಪಂಜಾಬ್ ತಂಡದ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಗೆಲುವು ಸಾಧಿಸಿದೆ.

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಗೆ ಇಳಿದ ಪಂಜಾಬ್ ತಂಡವು ಕೊಲ್ಕತ್ತಾ ತಂಡದ ರನ್ ವೇಗಕ್ಕೆ ಕಡಿವಾಣ ಹಾಕುವಲ್ಲಿ ವಿಫಲವಾಯಿತು.ಕೊಲ್ಕತ್ತಾ ತಂಡವು 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು.ರಾಬಿನ್ ಉತ್ತಪ್ಪ 67 ಹಾಗೂ ನಿತೀಶ್ ರಾಣಾ 63 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು.

ಕೊನೆಯಲ್ಲಿ ಬಂದಂತಹ ಆಂಡ್ರೆ ರಸೆಲ್ ಕೇವಲ 17 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 3 ಬೌಂಡರಿ ಗಳನ್ನು ಬಾರಿಸುವುದರ ಮೂಲಕ 48 ರನ್ ಗಳಿಸಿದರು. ಆ ಮೂಲಕ ತಂಡ 200 ರ ಗಡಿ ದಾಟುವಂತೆ ನೋಡಿಕೊಂಡರು. 

ಈ ಗುರಿಯನ್ನು ಬೆನ್ನತ್ತಿದ್ದ ಪಂಜಾಬ್ ತಂಡವು 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 190 ರನ್ ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.ಮಾಯಾಂಕ ಅಗರವಾಲ್ 58, ಡೇವಿಡ್ ಮಿಲ್ಲರ್ 59 ಗಳಿಸಿದರೂ ಕೂಡ ತಂಡ ಗೆಲುವು ಸಾಧಿಸುವಲ್ಲಿ ವಿಫಲವಾಯಿತು.

 

Read More