Home> IPL 2023
Advertisement

Team India: ಈ ಸ್ಟಾರ್ ಆಟಗಾರನಿಗೆ ಟೀಂ ಇಂಡಿಯಾದ ಬಾಗಿಲು ಬಂದ್! IPLನಲ್ಲೂ ಹೊರಬೀಳುವ ಸಾಧ್ಯತೆ

Team India: ಟೀಂ ಇಂಡಿಯಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಸತತ ಪ್ರಯತ್ನ ನಡೆಸುತ್ತಿರುವ ಕ್ರಿಕೆಟಿಗ ಪೃಥ್ವಿ ಶಾ ಮುಂಬೈ ವಿರುದ್ಧವೂ ಸೋಲು ಕಂಡಿದ್ದಾರೆ. 10 ಎಸೆತಗಳನ್ನು ಆಡಿ 15 ರನ್ ಗಳಿಸಿ ಹೃತಿಕ್ ಶೋಕೀನ್ ಎಸೆತದಲ್ಲಿ ಕ್ಯಾಮರೂನ್ ಗ್ರೀನ್‌ಗೆ ಕ್ಯಾಚಿತ್ತು ಔಟಾದರು.

Team India: ಈ ಸ್ಟಾರ್ ಆಟಗಾರನಿಗೆ ಟೀಂ ಇಂಡಿಯಾದ ಬಾಗಿಲು ಬಂದ್! IPLನಲ್ಲೂ ಹೊರಬೀಳುವ ಸಾಧ್ಯತೆ

Team India: ಇಂಡಿಯನ್ ಪ್ರೀಮಿಯರ್ ಲೀಗ್‌’ನಲ್ಲಿ ಮಂಗಳವಾರ (ಏಪ್ರಿಲ್ 11) ದೆಹಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಹಣಾಹಣಿ ನಡೆದಿತ್ತು. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್ ಮತ್ತೊಮ್ಮೆ ಕಳಪೆ ಬ್ಯಾಟಿಂಗ್ ಮಾಡುವ ಮೂಲಕ ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯಲು ಅಡ್ಡಿ ಮಾಡಿಕೊಂಡಿದ್ದಾರೆ. ಐಪಿಎಲ್ ಪಂದ್ಯದಲ್ಲಿ ಇದುವರೆಗೆ ಆಡಿದ ಎಲ್ಲಾ ಪಂದ್ಯಗಳಲ್ಲಿ ಈ ಆಟಗಾರನ ಕಳಪೆ ಪ್ರದರ್ಶನ ನೀಡಿದ್ದಾನೆ. ಈ ಆಟಗಾರ ಇದೇ ರೀತಿ ಪ್ರದರ್ಶನ ನೀಡಿದರೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವುದು ತುಂಬಾ ಕಷ್ಟ ಎಂಬುದು ಸ್ಪಷ್ಟವಾಗುತ್ತಿದೆ.

ಇದನ್ನೂ ಓದಿ: Poor Look of Billionaires: ಅಂಬಾನಿ, ಟ್ರಂಪ್, ಬಿಲ್ ಗೇಟ್ಸ್ ಕಡುಬಡವರಾಗಿದ್ರೆ ಹೇಗೆ ಕಾಣಿಸ್ಬೋದು? ಈ ಫೋಟೋಸ್ ನೋಡಿ

ಟೀಂ ಇಂಡಿಯಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಸತತ ಪ್ರಯತ್ನ ನಡೆಸುತ್ತಿರುವ ಕ್ರಿಕೆಟಿಗ ಪೃಥ್ವಿ ಶಾ ಮುಂಬೈ ವಿರುದ್ಧವೂ ಸೋಲು ಕಂಡಿದ್ದಾರೆ. 10 ಎಸೆತಗಳನ್ನು ಆಡಿ 15 ರನ್ ಗಳಿಸಿ ಹೃತಿಕ್ ಶೋಕೀನ್ ಎಸೆತದಲ್ಲಿ ಕ್ಯಾಮರೂನ್ ಗ್ರೀನ್‌ಗೆ ಕ್ಯಾಚಿತ್ತು ಔಟಾದರು.

ಪೃಥ್ವಿ ಶಾ ಅವರು 2020 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದರೆ, 2021 ರಲ್ಲಿ ಟೀಮ್ ಇಂಡಿಯಾ ಪರ ಕೊನೆಯ ODI ಮತ್ತು ಏಕೈಕ T20 ಪಂದ್ಯವನ್ನು ಆಡಿದ್ದರು. ಟೀಂ ಇಂಡಿಯಾ ಪರ ಹೆಚ್ಚು ಪಂದ್ಯಗಳನ್ನು ಆಡಿಲ್ಲ. ಶಾ 5 ಟೆಸ್ಟ್‌’ಗಳಲ್ಲಿ 1 ಶತಕ ಮತ್ತು 2 ಅರ್ಧಶತಕ ಸೇರಿದಂತೆ 339 ರನ್ ಗಳಿಸಿದ್ದಾರೆ. ಇನ್ನೊಂದೆಡೆ 6 ODIಗಳಲ್ಲಿ 189 ರನ್ ಗಳಿಸಿದ್ದಾರೆ. ಆಡಿದ ಏಕೈಕ ಟಿ20 ಪಂದ್ಯದಲ್ಲೂ ಶಾ ಖಾತೆ ತೆರೆಯಲು ವಿಫಲರಾಗಿದ್ದರು.

ಇದನ್ನೂ ಓದಿ: KGF ಜೋಡಿಯ ಸ್ಪೋಟಕ ಬ್ಯಾಟಿಂಗ್ ವ್ಯರ್ಥ: ಬೃಹತ್ ಗುರಿ ತಲುಪಿ ‘ಸೂಪರ್’ ಗೆಲುವು ಸಾಧಿಸಿದ ಲಕ್ನೋ

ಐಪಿಎಲ್ 2023ರಲ್ಲಿ ಫ್ಲಾಪ್ ಶೋ:

ಡೆಲ್ಲಿ ಕ್ಯಾಪಿಟಲ್ಸ್‌’ನ ಪರವಾಗಿ ಆಡಿದ್ದ ಪೃಥ್ವಿ ಶಾ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 12 ರನ್, ಗುಜರಾತ್ ಟೈಟಾನ್ಸ್ ವಿರುದ್ಧ 7 ರನ್, ರಾಜಸ್ಥಾನ್ ರಾಯಲ್ಸ್ ವಿರುದ್ಧ ಖಾತೆ ತೆರೆಯಲು ವಿಫಲವಾಗಿದ್ದರು. ಇದೀಗ ಮುಂಬೈ ವಿರುದ್ಧವೂ ಕೇವಲ 15 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More