Home> Sports
Advertisement

IPL 2021, RCB vs KKR: ‘ಈ ಸಲ ಕಪ್ ನಮ್ದೇ’ ಎನ್ನುತ್ತಿರುವ ವಿರಾಟ್ ಕೊಹ್ಲಿ ಪಡೆ

ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಜಯಿಸಿದರೆ ಮಾತ್ರ ಆರ್‌ಸಿಬಿ(RCB)ಗೆ 2ನೇ ಕ್ವಾಲಿಫೈಯರ್‌ಗೆ ಅವಕಾಶ ಸಿಗಲಿದೆ

IPL 2021, RCB vs KKR: ‘ಈ ಸಲ ಕಪ್ ನಮ್ದೇ’ ಎನ್ನುತ್ತಿರುವ ವಿರಾಟ್ ಕೊಹ್ಲಿ ಪಡೆ

ನವದೆಹಲಿ: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಮಹತ್ವದ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ. ಶಾರ್ಜಾದ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಸೋಲು ತಂಡ ಟೂರ್ನಿಯಂದಲೇ ನಿರ್ಗಮಿಸಬೇಕಾಗುತ್ತದೆ. ಗೆದ್ದ ತಂಡ ಮೊದಲ ಕ್ವಾಲಿಫೈಯರ್ ನಲ್ಲಿ ಸೋತಿರುವ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಡಲಿವೆ. ಮುಂದಿನ ವರ್ಷದಿಂದ ಟೀಂ ಇಂಡಿಯಾದ ಟಿ-20 ತಂಡ ಮತ್ತು ಆರ್‌ಸಿಬಿ ನಾಯಕತ್ವದಿಂದ ಕೆಳಗಿಳಿಯುವುದಾಗಿ ವಿರಾಟ್ ಕೊಹ್ಲಿ ಈಗಾಗಲೇ ಘೋಷಿಸಿದ್ದಾರೆ. ಹೀಗಾಗಿ ಈ ಪಂದ್ಯ ಭಾರೀ ಕುತೂಹಲ ಮೂಡಿಸಿದೆ.

ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿ(IPL 2021)ಯಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ 3ನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿರುವ ಕೊಹ್ಲಿ ಪಡೆ ‘ಈ ಸಲ ಕಪ್ ನಮ್ದೇ’ ಎನ್ನುವ ಉತ್ಸಾಹದಲ್ಲಿದೆ. ಹೀಗಾಗಿ ಕೋಲ್ಕತ್ತಾ(Kolkata Knight Riders) ತಂಡದ ವಿರುದ್ಧ ಗೆಲ್ಲುವ ಉತ್ಸಾಹದಲ್ಲಿದೆ. ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳ ಪೈಕಿ 9 ಗೆಲುವು ಹಾಗೂ 5 ಸೋಲು ಕಂಡಿರುವ ಆರ್‌ಸಿಬಿ 18 ಅಂಕಗಳೊಂದಿಗೆ ಪ್ಲೇ ಆಫ್ ಪ್ರವೇಶಿಸಿತ್ತು. ಈ ಬಾರಿ ಹೇಗಾದರೂ ಮಾಡಿ ಐಪಿಎಲ್ ಟ್ರೋಫಿಯನ್ನು ತನ್ನದಾಗಿಸಿಕೊಳ್ಳುವ ಮೂಲಕ ಲಕ್ಷಾಂತರ ಅಭಿಮಾನಿಗಳ ಕನಸು ನನಸು ಮಾಡುವ ನಿಟ್ಟಿನಲ್ಲಿ ಕೊಹ್ಲಿ ಬಾಯ್ಸ್ ಸಜ್ಜಾಗಿದ್ದಾರೆ. ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಜಯಿಸಿದರೆ ಮಾತ್ರ 2ನೇ ಕ್ವಾಲಿಫೈಯರ್‌ಗೆ ಅವಕಾಶ ಸಿಗಲಿದೆ. ಡೆಲ್ಲಿ ವಿರುದ್ಧವೂ ಗೆದ್ದರೆ ಫೈನಲ್‌ನಲ್ಲಿ ಚೆನ್ನೈ ವಿರುದ್ಧ ಸೆಣಸಾಡಲಿದೆ.

ಇದನ್ನೂ ಓದಿ: IPL: ಧೋನಿ ವಿನ್ನಿಂಗ್ ಶಾಟ್ ಕಂಡು ಪತ್ನಿ ಸಾಕ್ಷಿ ಪ್ರತಿಕ್ರಿಯೆ, ವಿಡಿಯೋ ವೈರಲ್

2009, 2011 ಮತ್ತು 2016ರಲ್ಲಿ ಫೈನಲ್ ತಲುಪಿದ್ದ ಆರ್‌ಸಿಬಿ(RCB)ಗೆ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಕಳೆದ ಟೂರ್ನಿಯಲ್ಲಿ ಪ್ಲೇ ಪ್ಲೇ ಆಫ್‌ನಲ್ಲಿ ಮುಗ್ಗರಿಸುವ ಮೂಲಕ ಅಭಿಮಾನಿಗಳಿಗೆ ಬಹುದೊಡ್ಡ ನಿರಾಸೆ ಮೂಡಿಸಿತ್ತು. 2008ರಿಂದಲೂ ಐಪಿಎಲ್ ಕಣದಲ್ಲಿರುವ ತಮ್ಮ ತಂಡ ಒಂದು ಬಾರಿಯಾದರೂ ಐಪಿಎಲ್ ಟ್ರೋಫಿ ಎತ್ತಿಹಿಡಿಯಲಿ ಎಂಬುದು ಅಭಿಮಾನಿಗಳ ಕನಸಾಗಿದೆ. ಅದನ್ನು ಕೊಹ್ಲಿ ಬಾಯ್ಸ್ ಈ ಬಾರಿ ನನಸು ಮಾಡುತ್ತಾರಾ..? ಎಂಬ ಪ್ರಶ್ನೆ ಮೂಡಿದೆ.

ನಾಯಕ ಕೊಹ್ಲಿ(Virat Kohli), ಎಬಿ ಡಿ ವಿಲಿಯರ್ಸ್, ದೇವದತ್ತ್ ಪಡಿಕ್ಕಲ್, ಶ್ರೀಕರ್ ಭರತ್ ಹಾಗೂ ಗ್ಲೇನ್ ಮ್ಯಾಕ್ಸ್ ವೆಲ್ ಆರ್‌ಸಿಬಿಯ ಬ್ಯಾಟಿಂಗ್ ಬಲವಾಗಿದ್ದಾರೆ. ಬೌಲಿಂಗ್ ನಲ್ಲಿ ಎದುರಾಳಿ ತಂಡವನ್ನು ಕಟ್ಟಿಹಾಕಲು ಹರ್ಷಲ್ ಪಟೇಲ್, ಯಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್ ಸೇರಿ ಇನ್ನಿತರರು ತಂತ್ರ ರೂಪಿಸುತ್ತಿದ್ದಾರೆ. ಹೀಗಾಗಿ ಕೊಹ್ಲಿ ಪಡೆ ಗೆಲುವಿನ ಉತ್ಸಾಹದಲ್ಲಿದೆ.

ಇದನ್ನೂ ಓದಿ: Delhi vs Chennai, Qualifier 1: ಫೈನಲ್ ಗೆ ಲಗ್ಗೆ ಇಟ್ಟ ಚೆನ್ನೈ ಸೂಪರ್ ಕಿಂಗ್ಸ್

ಇಯಾನ್ ಮಾರ್ಗನ್(Eoin Morgan) ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕೂಡ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಬಲಿಷ್ಠವಾಗಿದೆ. ದಿನೇಶ್ ಕಾರ್ತಿಕ್, ಶುಭಮನ್ ಗಿಲ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ ಮತ್ತು ವೆಂಕಟೇಶ್ ಅಯ್ಯರ್ ಕೋಲ್ಕತ್ತಾದ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಸುನೀಲ್ ನರೇನ್, ಶಿವಂ ದುಬೆ ಆಲ್‌ರೌಂಡ್ ಆಟ ಕೂಡ ತಂಡಕ್ಕೆ ಬೆನ್ನೆಲುಬಾಗಿದೆ. ಪ್ರಶಸ್ತಿ ಗೆಲ್ಲುವ ಕನಸು ಜೀವಂತವಾಗಿರಬೇಕಾದರೆ ಉಭಯ ತಂಡಗಳಿಗೂ ಗೆಲುವು ಅನಿವಾರ್ಯವಾಗಿದೆ. ಹೀಗಾಗಿ ಇಂದಿನ ಪಂದ್ಯ ಭಾರೀ ಕುತೂಹಲ ಕೆರಳಿಸಿದ್ದು, ಭರ್ಜರಿ ಪೈಪೋಟಿ ನಡೆಯುವ ನಿರೀಕ್ಷೆ ಇದೆ.

ಎರಡೂ ತಂಡಗಳ ಸ್ಕ್ವಾಡ್ ಈ ರೀತಿ ಇದೆ:

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (ನಾಯಕ), ದೇವದತ್ತ್ ಪಡಿಕ್ಕಲ್, ಶ್ರೀಕರ್ ಭರತ್, ಗ್ಲೆನ್ ಮ್ಯಾಕ್ಸ್‌ ವೆಲ್, ಎಬಿ ಡಿ ವಿಲಿಯರ್ಸ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಾಹಲ್, ಶಾಬಾಜ್ ಅಹಮದ್, ಡ್ಯಾನ್ ಕ್ರಿಸ್ಟಿಯನ್, ಸಚಿನ್ ಬೇಬಿ, ಟಿಮ್ ಡೇವಿಡ್.

ಕೋಲ್ಕತ್ತ ನೈಟ್‌ ರೈಡರ್ಸ್‌: ಇಯಾನ್ ಮಾರ್ಗನ್ (ನಾಯಕ), ವೆಂಕಟೇಶ್ ಅಯ್ಯರ್, ದಿನೇಶ್ ಕಾರ್ತಿಕ್, ರಾಹುಲ್ ತ್ರಿಪಾಠಿ, ಶುಭಮನ್ ಗಿಲ್, ಹರಭಜನ್ ಸಿಂಗ್, ಕಮಲೇಶ್ ನಾಗರಕೋಟಿ, ಕುಲದೀಪ್ ಯಾದವ್, ಲಾಕಿ ಫರ್ಗ್ಯುಸನ್, ಶಿವಂ ದುಬೆ, ವರುಣ ಚಕ್ರವರ್ತಿ, ಆಂಡ್ರೂ ರಸೆಲ್, ನಿತೀಶ್ ರಾಣಾ, ಗುರುಕೀರತ್ ಸಿಂಗ್ ಮಾನ್, ಸುನೀಲ್ ನರೇನ್.

ಐಪಿಎಲ್‌ ಪಂದ್ಯ:  ಎಲಿಮೇಟನರ್ ಪಂದ್ಯ

ರಾಯಲ್ ಚಾಲೆಂಜರ್ಸ್ ಬೆಂಗಳುರು vs ಕೋಲ್ಕತ್ತಾ ನೈಟ್ ರೈಡರ್ಸ್

ದಿನಾಂಕ: ಅಕ್ಟೋಬರ್ 11, ಸೋಮವಾರ

ಸ್ಥಳ: ಶಾರ್ಜಾ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ

ಸಮಯ: ಸಂಜೆ 7.30ಕ್ಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More