Home> Sports
Advertisement

ಭಾರತದ 2007 ರ ಟಿ 20 ವಿಶ್ವಕಪ್ ಹೀರೋ, ಕೊರೋನಾ ಹೋರಾಟದಲ್ಲಿ ಮತ್ತೊಮ್ಮೆ ಹೀರೋ ಆದಾಗ...!

2007 ರಲ್ಲಿ ನಡೆದ ಭಾರತದ ವಿಶ್ವ ಟಿ 20 ಗೆಲುವಿನಲ್ಲಿ ಅಂತಿಮ ಓವರ್ ಎಸೆದ ಜೋಗಿಂದರ್ ಶರ್ಮಾ ಅವರು ದೇಶಕ್ಕೆ ಸೇವೆ ಸಲ್ಲಿಸುತ್ತಲೇ ಇದ್ದಾರೆ, ಆದರೆ, ವಿಭಿನ್ನ ರೀತಿಯ ಪಿಚ್‌ನಲ್ಲಿ. ಪ್ರಸ್ತುತ ಹರಿಯಾಣದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಜೋಗಿಂದರ್ ಶರ್ಮಾ ಈಗ ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಹಾಯ ಮಾಡುತ್ತಿದ್ದಾರೆ.

ಭಾರತದ 2007 ರ ಟಿ 20  ವಿಶ್ವಕಪ್ ಹೀರೋ, ಕೊರೋನಾ ಹೋರಾಟದಲ್ಲಿ ಮತ್ತೊಮ್ಮೆ ಹೀರೋ ಆದಾಗ...!

ನವದೆಹಲಿ: 2007 ರಲ್ಲಿ ನಡೆದ ಭಾರತದ ವಿಶ್ವ ಟಿ 20 ಗೆಲುವಿನಲ್ಲಿ ಅಂತಿಮ ಓವರ್ ಎಸೆದ ಜೋಗಿಂದರ್ ಶರ್ಮಾ ಅವರು ದೇಶಕ್ಕೆ ಸೇವೆ ಸಲ್ಲಿಸುತ್ತಲೇ ಇದ್ದಾರೆ, ಆದರೆ, ವಿಭಿನ್ನ ರೀತಿಯ ಪಿಚ್‌ನಲ್ಲಿ. ಪ್ರಸ್ತುತ ಹರಿಯಾಣದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಜೋಗಿಂದರ್ ಶರ್ಮಾ ಈಗ ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಹಾಯ ಮಾಡುತ್ತಿದ್ದಾರೆ.

ಭಾರತದ ಮಾಜಿ ಆಲ್‌ರೌಂಡರ್ ಅವರ ಶ್ರಮವನ್ನು ಐಸಿಸಿ ತನ್ನ  ಟ್ವಿಟರ್‌ ಖಾತೆಯಲ್ಲಿ ಶ್ಲಾಘಿಸಿದೆ. "2007: ಟಿ 20 ವರ್ಲ್ಡ್ ಕಪ್ ಹೀರೋ 2020: ರಿಯಲ್ ವರ್ಲ್ಡ್ ಹೀರೋ' ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದೆ.ಕ್ರಿಕೆಟ್ ನಂತರ ಪೋಲಿಸ್ ಆಫೀಸರ್ ಆಗಿರುವ ಜೋಗಿಂದರ್ ಶರ್ಮಾ , ಜಾಗತಿಕ ಆರೋಗ್ಯ ಬಿಕ್ಕಟ್ಟಿನ ಮಧ್ಯೆ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿರುವವರಲ್ಲಿ ಭಾರತದ ಜೋಗಿಂದರ್ ಶರ್ಮಾ ಕೂಡ ಇದ್ದಾರೆ" ಎಂದು ಐಸಿಸಿ ಶನಿವಾರ ಟ್ವೀಟ್ ಮಾಡಿದೆ.

ಉದ್ಘಾಟನಾ ಟಿ 20 ವಿಶ್ವಕಪ್‌ನ ಅಂತಿಮ ಎಸೆತದಲ್ಲಿ ಮಿಸ್ಬಾ-ಉಲ್-ಹಕ್ ವಿಕೆಟ್ ಪಡೆದ ನಂತರ 77 ಪ್ರಥಮ ದರ್ಜೆ ಪಂದ್ಯಗಳಲ್ಲಿ ಭಾಗವಹಿಸಿ ಜೋಗಿಂದರ್ ಶರ್ಮಾ ಮಹತ್ವದ ಪಾತ್ರ ವಹಿಸಿದ್ದರು  . ಆದರೆ, ಅವರ ಕ್ರಿಕೆಟಿಂಗ್ ವೃತ್ತಿಜೀವನವು ಯೋಜಿಸಿದಂತೆ ನಡೆಯಲಿಲ್ಲ ಮತ್ತು ಅವರು ಡಿಸೆಂಬರ್ 2018 ರಲ್ಲಿ ನಿವೃತ್ತರಾದರು.

Read More