Home> Sports
Advertisement

India vs England: ವಿರಾಟ್ ಕೊಹ್ಲಿ ಪ್ರದರ್ಶನದ ಬಗ್ಗೆ ಸಂಜಯ್ ಮಾಂಜ್ರೇಕರ್ ಹೇಳಿದ್ದೇನು ಗೊತ್ತಾ..?

ವಿರಾಟ್ ಕೊಹ್ಲಿ ಕಳೆದ 2 ವರ್ಷಗಳಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದರೂ ಟೆಸ್ಟ್‌ ನಲ್ಲಿ ಅವರ ಯಶಸ್ಸು ಸ್ಥಿರವಾಗಿಲ್ಲ.

India vs England: ವಿರಾಟ್ ಕೊಹ್ಲಿ ಪ್ರದರ್ಶನದ ಬಗ್ಗೆ ಸಂಜಯ್ ಮಾಂಜ್ರೇಕರ್ ಹೇಳಿದ್ದೇನು ಗೊತ್ತಾ..?

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ(Virat Kohli) ಕಳೆದ ಕೆಲವು ತಿಂಗಳುಗಳಿಂದ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಗಮನಿಸಬೇಕಾದ ಸಂಗತಿಯೆಂದರೆ ಕೊಹ್ಲಿ 2019ರ ನವೆಂಬರ್‌ನಲ್ಲಿ ಕೊನೆಯ ಶತಕ ಭಾರಿಸಿದ್ದರು. 32 ವರ್ಷದ ಕೊಹ್ಲಿ ಕಳೆದ 2 ವರ್ಷಗಳಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದರೂ ಟೆಸ್ಟ್‌ ನಲ್ಲಿ ಅವರ ಯಶಸ್ಸು ಸ್ಥಿರವಾಗಿಲ್ಲ. 2020ರಲ್ಲಿ ಆಡಿರುವ ಟೆಸ್ಟ್‌ ಪಂದ್ಯಗಳಿಂದ ಕೊಹ್ಲಿ ಕೇವಲ 19.33 ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಅದರಂತೆ ಪ್ರಸ್ತುತ ಕ್ಯಾಲೆಂಡರ್ ವರ್ಷದಲ್ಲಿ ಅವರ ಸರಾಸರಿ 27.15 ಆಗಿದೆ.

ಸದ್ಯ ಇಂಗ್ಲೆಂಡ್ ಪ್ರವಾಸ(India tour of England 2021)ದಲ್ಲಿ ಕೊಹ್ಲಿ ಒಂದು ಬಾರಿ ಮಾತ್ರ 50 ರನ್ ಗಡಿ ದಾಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಇದುವರೆಗಿನ 3 ಟೆಸ್ಟ್ ಪಂದ್ಯಗಳ 6 ಇನ್ನಿಂಗ್ಸ್ ಗಳಲ್ಲಿ ಅವರ ಸ್ಕೋರ್ ಗಳು: 0, DNB, 42, 20, 7, 55 ಆಗಿವೆ. ಉತ್ತಮ ಪ್ರದರ್ಶನ ನೀಡುವಲ್ಲಿ ಪದೇ ಪದೇ ವಿಫಲವಾಗುತ್ತಿರುವ ವಿರಾಟ್ ಕೊಹ್ಲಿ ಇನ್ನುಳಿದ ಪಂದ್ಯಗಳಲ್ಲಿ ಹೆಚ್ಚು ತೊಂದರೆ ಎದುರಿಸಲಿದ್ದಾರೆ ಎಂದು ಇಂಗ್ಲೆಂಡ್ ನ ಮಾಜಿ ನಾಯಕ ನಾಸರ್ ಹುಸೇನ್(Nasser Hussain) ಹೇಳಿದ್ದಾರೆ. ಹುಸೇನ್ ಪ್ರಕಾರ, ಕೊಹ್ಲಿ 4 ಮತ್ತು 5ನೇ ಸ್ಟಂಪ್-ಲೈನ್‌ನಲ್ಲಿ ಎಸೆತಗಳ ವಿರುದ್ಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರಂತೆ.

ಇದನ್ನೂ ಓದಿ: IPL 15th Season Update: IPL ಹೊಸ ತಂಡಗಳಿಗಾಗಿ Tender ಜಾರಿ, BCCI ಷರತ್ತುಗಳೇನು? ಇಲ್ಲಿದೆ ವರದಿ

ಈ ಮಧ್ಯೆ ವಿರಾಟ್ ಕೊಹ್ಲಿ ತನ್ನ ತಂತ್ರಗಾರಿಕೆಯಲ್ಲಿ ಬದಲಾವಣೆ ಮಾಡದಿದ್ದರೆ ಇಂಗ್ಲೆಂಡಿನಲ್ಲಿ ತೊಂದರೆ ಎದುರಿಸುತ್ತಲೇ ಇರುತ್ತಾರೆ ಎಂದು ಭಾರತದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್(Sanjay Manjrekar) ಹೇಳಿದ್ದಾರೆ. ‘ವಿರಾಟ್ ಪ್ರಸ್ತುತ ತಮ್ಮ ಸಮಸ್ಯೆಯಿಂದ ಹೊರಗುಳಿದಿದ್ದಾರೆ. 2014 ಮತ್ತೆ ವಿರಾಟ್ ಅನ್ನು ಕಾಡುತ್ತಿದೆ. 2018 ರಲ್ಲಿ ಮಾಡಿದಂತೆ ಅವರು ಮತ್ತೆ ಮಾಡಿದರೆ ಇಡೀ ಸರಣಿಯಲ್ಲಿ ತೊಂದರೆ ಅನುಭವಿಸುವ ಸಾಧ್ಯತೆ ಇದೆ ಅಂತಾ ಹೇಳಿದ್ದಾರೆ.  

ಸಮಸ್ಯೆಗಳು ಏನೇ ಇರಲಿ ವಿರಾಟ್ ಕೊಹ್ಲಿ ತಮ್ಮ ಮೊದಲಿನ ಫಾರ್ಮ್ ಗೆ ಮರಳಬೇಕು. ಎದುರಾಳಿ ಬೌಲರ್‌ಗಳಿಗೆ ನಡುಕಹುಟ್ಟುವಂತೆ ಅವರು ಆಡಬೇಕು. ಇಲ್ಲದಿದ್ದರೆ ಇಂಗ್ಲೆಂಡ್ ಸರಣಿಯುದ್ದಕ್ಕೂ ಅವರು ಇದೇ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಶೀಘ್ರವೇ ಅವರು ಬ್ಯಾಟಿಂಗ್ ಲಯಕ್ಕೆ ಮರಳಬೇಕು. ತಮ್ಮ ಬ್ಯಾಟಿಂಗ್‌ನಲ್ಲಿರುವ ದೌರ್ಬಲ್ಯವನ್ನು ಸರಿಪಡಿಸಿಕೊಂಡು ಆಡಬೇಕಿದೆ ಎಂದು ಮಾಂಜ್ರೇಕರ್ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ತಾಲಿಬಾನ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರೀದಿ..!

ಟೀಂ ಇಂಡಿಯಾ(Team India) ಸದ್ಯ ಬ್ಯಾಟಿಂಗ್ ವೈಫಲ್ಯಕ್ಕೆ ತುತ್ತಾಗುತ್ತಿದೆ. ಆಂಗ್ಲರ ವಿರುದ್ಧ ನಡೆದ 3ನೇ ಪಂದ್ಯದಲ್ಲಿ ಇನ್ನಿಂಗ್ಸ್ ಸೋಲು ಅನುಭವಿಸುವ ಮೂಲಕ ಭಾರತ ತಂಡ ಭಾರೀ ಮುಖಭಂಗ ಅನುಭವಿಸಿದೆ. ಸೆಪ್ಟೆಂಬರ್ 2 ರಿಂದ ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ 4ನೇ ಟೆಸ್ಟ್ ಆರಂಭವಾಗಲಿದೆ. ಭಾರತವು ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಲು ಸರ್ವಪ್ರಯತ್ನಗಳನ್ನು ಮಾಡುತ್ತಿದೆ. ಈಗಾಗಲೇ ಬ್ಯಾಟಿಂಗ್ ನಲ್ಲಿ ಹೀನಾಯ ಪ್ರದರ್ಶನ ತೋರಿರುವ ಟೀಂ ಇಂಡಿಯಾ ಮೊದಲಿನ ಲಯಕ್ಕೆ ಮರಳಬೇಕಾಗಿದೆ. ಬ್ಯಾಟಿಂಗ್ ದೌರ್ಬಲ್ಯವನ್ನು ಸುಧಾರಿಸಿಕೊಂಡು ಆಂಗ್ಲರ ವಿರುದ್ಧ ಕಣಕ್ಕಿಳಿಯಬೇಕಿದೆ.

ಆಂಗ್ಲರ ವಿರುದ್ಧದ 5 ಟೆಸ್ಟ್ ಸರಣಿಯು ಪ್ರಸ್ತುತ 1-1ರಲ್ಲಿ ಸಮವಾಗಿದೆ. ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆದಿದ್ದ 2ನೇ ಟೆಸ್ಟ್ ನಲ್ಲಿ ಭಾರತ  ಗೆಲುವು ಸಾಧಿಸಿದ್ದರೆ, ಲೀಡ್ಸ್ ನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಜಯಭೇರಿ ಭಾರಿಸಿತ್ತು. ಮೊದಲ ಟೆಸ್ಟ್ ಡ್ರಾನಲ್ಲಿ ಅಂತ್ಯವಾಗಿತ್ತು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More