Home> Sports
Advertisement

IND vs ENG : ರೋಹಿತ್ ಕೊರೊನಾ ಪಾಸಿಟಿವ್ : ಈ ಆಟಗಾರನಿಗೆ ಒಲಿಯಲಿದೆ ಕ್ಯಾಪ್ಟನ್ ಪಟ್ಟ!

ಇದರ ಮಧ್ಯ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾಗೆ ಕರೋನಾ ಪಾಸಿಟಿವ್ ಬಂದಿದ್ದರಿಂದ ಈ ಟೆಸ್ಟ್ ನಿಂದ ಹೊರಗುಳಿಯುವ ಸಾಧ್ಯತೆ ಇದೆ. ಹಾಗಾದ್ರೆ, ಈ ಪಂದ್ಯಕ್ಕೆ ಟೀಂ ಇಂಡಿಯಾ ಕ್ಯಾಪ್ಟನ್ ಯಾರಾಗಬಹುದು? ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಉತ್ತರ ಇಲ್ಲಿದೆ. 

IND vs ENG : ರೋಹಿತ್ ಕೊರೊನಾ ಪಾಸಿಟಿವ್ : ಈ ಆಟಗಾರನಿಗೆ ಒಲಿಯಲಿದೆ ಕ್ಯಾಪ್ಟನ್ ಪಟ್ಟ!

IND vs ENG : ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಪ್ರಮುಖ ಪಂದ್ಯ ಜುಲೈ 1 ರಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ ಭಾರತ ತಂಡ 2-1 ಮುನ್ನಡೆಯಲ್ಲಿ 2007 ರ ನಂತರ ಭಾರತ, ಇಂಗ್ಲೆಂಡ್ ನೆಲದಲ್ಲಿ ಯಾವುದೇ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ, ಹೀಗಾಗಿ, ಟೀಂ ಇಂಡಿಯಾ ಈ ಕೊನೆಯ ಪಂದ್ಯವನ್ನು ಗೆದ್ದರೆ, ಭಾರತ ತಂಡ ಇತಿಹಾಸ ನಿರ್ಮಿಸಿದಂತಾಗುತ್ತದೆ.

ಇದರ ಮಧ್ಯ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾಗೆ ಕರೋನಾ ಪಾಸಿಟಿವ್ ಬಂದಿದ್ದರಿಂದ ಈ ಟೆಸ್ಟ್ ನಿಂದ ಹೊರಗುಳಿಯುವ ಸಾಧ್ಯತೆ ಇದೆ. ಹಾಗಾದ್ರೆ, ಈ ಪಂದ್ಯಕ್ಕೆ ಟೀಂ ಇಂಡಿಯಾ ಕ್ಯಾಪ್ಟನ್ ಯಾರಾಗಬಹುದು? ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಉತ್ತರ ಇಲ್ಲಿದೆ. 

ಇದನ್ನೂ ಓದಿ : ಐರ್ಲೆಂಡ್‌ ಪಂದ್ಯಕ್ಕೆ ಎಂಟ್ರಿ ನೀಡಿದ ಈ ಇಬ್ಬರು ಸ್ಪೋಟಕ ಬೌಲರ್‌ಗಳು!

ರೋಹಿತ್ ಶರ್ಮಾ ಬದಲಿಗೆ ನಾಯಕತ್ವ ಸ್ಪರ್ಧಿಯಾಗಿ ವಿರಾಟ್

ರೋಹಿತ್ ಶರ್ಮಾ ಬದಲಿಗೆ ನಾಯಕತ್ವ ಸ್ಪರ್ಧಿಯಾಗಿ ವಿರಾಟ್ ಕೊಹ್ಲಿಯನ್ನು ಪರಿಗಣಿಸಲಾಗಿದೆ. ಆದರೆ ವಿರಾಟ್ ನಾಯಕತ್ವದ ಜವಾಬ್ದಾರಿಯನ್ನು ಪಡೆಯುವುದಿಲ್ಲ. ಹಾಗಿದ್ರೆ, ರೋಹಿತ್ ಬದಲಿಗೆ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾನನ್ನ ನಾಯಕನನ್ನಾಗಿ ಮಾಡಬಹುದು. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಕಪಿಲ್ ದೇವ್ ನಂತರ, ಬುಮ್ರಾ ವೇಗದ ಬೌಲರ್ ಆಗಿರುವ ಮೊದಲ ನಾಯಕನಾಗಲಿದ್ದಾರೆ. ಈ ಹಿಂದೆ ದಕ್ಷಿಣ ಆಫ್ರಿಕಾ ಸರಣಿಯ ವೇಳೆ ಬುಮ್ರಾ ಭಾರತ ತಂಡದ ಉಪನಾಯಕರಾಗಿದ್ದರು ಎಂಬುದನ್ನು ಗಮನಿಸಬಹುದು.

ನಾಯಕತ್ವಕ್ಕೆ ಸಿದ್ಧರಾಗಿದ್ದಾರೆ ಜಸ್ಪ್ರೀತ್ ಬುಮ್ರಾ!

ಅಷ್ಟೇ ಅಲ್ಲ ಸ್ವತಃ ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾದ ನೂತನ ನಾಯಕನಾಗಲು ಸಿದ್ಧರಾಗಿದ್ದಾರೆ. ಬುಮ್ರಾ ಭಾರತ ತಂಡದ ಉಪನಾಯಕರಾದ ಸಮಯದಲ್ಲಿ, ಬುಮ್ರಾ ನಾಯಕತ್ವದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಿದ್ದೀರಾ ಎಂದು ಕೇಳಿದಾಗ, ಬುಮ್ರಾ ಭವಿಷ್ಯದಲ್ಲಿ ಈ ಜವಾಬ್ದಾರಿ ಸಿಕ್ಕರೆ ಅದಕ್ಕೆ ನಾನೂ ಸಿದ್ಧ ಎಂದು ಹೇಳಿದ್ದರು. ಈಗ ರೋಹಿತ್ ಸಮಯಕ್ಕೆ ಸರಿಯಾಗಿ ಚೇತರಿಸಿಕೊಳ್ಳದಿದ್ದರೆ, ಬುಮ್ರಾ ಅವರ ಈ ಕನಸು ನನಸಾಗಬಹುದು.

ರೋಹಿತ್‌ಗೆ ಕೊರೊನಾ ಸಂಕಷ್ಟ!

ತಂಡದ ನಾಯಕ ರೋಹಿತ್ ಶರ್ಮಾಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಶನಿವಾರ ನಡೆದ ರ್ಯಾಪಿಡ್ ಆಂಟಿಜೆನ್ ಪರೀಕ್ಷೆಯಲ್ಲಿ ರೋಹಿತ್ ಶರ್ಮಾಗೆ ಕರೋನಾ ಪಾಸಿಟಿವ್ ಕಂಡುಬಂದಿದೆ. ಬಿಸಿಸಿಐ ಟ್ವಿಟರ್ ಮೂಲಕ ಈ ಮಾಹಿತಿ ನೀಡಿದೆ. ಲೀಸೆಸ್ಟರ್‌ಶೈರ್ ವಿರುದ್ಧ ನಡೆಯುತ್ತಿರುವ 4 ದಿನಗಳ ಅಭ್ಯಾಸ ಪಂದ್ಯದಲ್ಲಿ ರೋಹಿತ್ ತಂಡದ ಭಾಗವಾಗಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿಯೂ ಬ್ಯಾಟ್ ಮಾಡಿದ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಬರಲಿಲ್ಲ. ರೋಹಿತ್ ಶರ್ಮಾ ಪ್ರಸ್ತುತ ತಂಡದ ಹೋಟೆಲ್‌ನಲ್ಲಿ ಪ್ರತ್ಯೇಕವಾಗಿದ್ದು ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ಇದನ್ನೂ ಓದಿ : IND vs ENG : ಭಾರತ vs ಇಂಗ್ಲೆಂಡ್ ಟೆಸ್ಟ್ ಮ್ಯಾಚ್ ರದ್ದಾಗುವ ಭೀತಿ!

ಕೊನೆಯ ಟೆಸ್ಟ್‌ನಲ್ಲಿ ಆಡುವ ಸಾಧ್ಯತೆ ಕಡಿಮೆ

ಈ ಕುರಿತು ಸುದ್ದಿ ಪ್ರಕಟಣೆ ನೀಡಿರುವ ಬಿಸಿಸಿಐ, 'ಶನಿವಾರ ನಡೆದ ರ್ಯಾಪಿಡ್ ರಾಪಿಡ್ ಆಂಟಿಜೆನ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅವರು ಪ್ರಸ್ತುತ ತಂಡದ ಹೋಟೆಲ್‌ನಲ್ಲಿ ಪ್ರತ್ಯೇಕವಾಗಿರುತ್ತಾರೆ ಮತ್ತು ಬಿಸಿಸಿಐ ವೈದ್ಯಕೀಯ ತಂಡದ ಆರೈಕೆಯಲ್ಲಿದ್ದಾರೆ. ಭಾನುವಾರ RT-PCR ಪರೀಕ್ಷೆಯನ್ನು ಮಾಡಲಾಗುತ್ತದೆ. ಈ ಪರೀಕ್ಷೆಯಲ್ಲೂ ಪಾಸಿಟಿವ್ ಕಂಡುಬಂದರೆ ಜುಲೈ 1ರಿಂದ ನಡೆಯಲಿರುವ ಟೆಸ್ಟ್ ಪಂದ್ಯದಿಂದ ಹೊರಗುಳಿಯಬಹುದು ಎಂದು ತಿಳಿಸಿದ್ದರು.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Read More