Home> Sports
Advertisement

Legends League 2022: ಭಿಲ್ವಾರ ಕಿಂಗ್ಸ್- ಇಂಡಿಯಾ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಗೆಲುವು ಈ ತಂಡಕ್ಕೆ ಪಕ್ಕಾ!

ಇನ್ನು ಮುಂದಿನ ಪಂದ್ಯ ಸೆಪ್ಟೆಂಬರ್ 24ರಂದು ನಡೆಯಲಿದ್ದು, ಯಾರು ಗೆಲುವಿನ ಗುರಿ ತಲುಪಲಿದ್ದಾರೆ ಎಂದು ಕಾದು ನೋಡಬೇಕಿದೆ.

Legends League 2022: ಭಿಲ್ವಾರ ಕಿಂಗ್ಸ್- ಇಂಡಿಯಾ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಗೆಲುವು ಈ ತಂಡಕ್ಕೆ ಪಕ್ಕಾ!

ಲೆಜೆಂಡ್ಸ್ ಲೀಗ್ ಕ್ರಿಕೆಟ್ 2022ರ ಆರನೇ ಪಂದ್ಯ ಗೌತಮ್ ಗಂಭೀರ್ ಅವರ ಇಂಡಿಯಾ ಕ್ಯಾಪಿಟಲ್ಸ್ ಮತ್ತು ಇರ್ಫಾನ್ ಪಠಾಣ್ ಅವರ ಭಿಲ್ವಾರಾ ಕಿಂಗ್ಸ್ ನಡುವೆ ನಡೆಯಲಿದೆ. ಉಭಯ ತಂಡಗಳ ಮಧ್ಯೆ ಈಗಾಗಲೇ ಎರಡು ಪಂದ್ಯಗಳು ನಡೆದಿದ್ದು, ತಲಾ ಒಂದೊಂದು ಪಂದ್ಯ ಗೆದ್ದಿದೆ.

ಇನ್ನು ಮುಂದಿನ ಪಂದ್ಯ ಸೆಪ್ಟೆಂಬರ್ 24ರಂದು ನಡೆಯಲಿದ್ದು, ಯಾರು ಗೆಲುವಿನ ಗುರಿ ತಲುಪಲಿದ್ದಾರೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ: Pro Kabaddi League 9 : ರಾಕೇಶ್ ಗೌಡನನ್ನು ಭರ್ಜರಿಯಾಗಿ ಸ್ವಾಗತಿಸಿದ ಬೆಂಗಳೂರು ಬುಲ್ಸ್ ಟೀಂ!

ಸೆಪ್ಟೆಂಬರ್ 21 ಎಂದು ನಡೆದ LLC 2022 ರಲ್ಲಿ ಇರ್ಫಾನ್ ಪಠಾಣ್ ಅವರ ಭಿಲ್ವಾರಾ ಕಿಂಗ್ಸ್ ಅನ್ನು ಸೋಲಿಸಿ ಸೀಸನ್ ನ ಮೊದಲ ಜಯವನ್ನು ಇಂಡಿಯಾ ಕ್ಯಾಪಿಟಲ್ಸ್ ತಂಡವು ಸಾಧಿಸಿತು. ಮೊದಲು ಟಾಸ್ ಸೋತ ಕ್ಯಾಪಿಟಲ್ಸ್, ಇರ್ಫಾನ್ ಅವರ ತಂಡ ಮೊದಲು ಬ್ಯಾಟಿಂಗ್ ಮಾಡುವಂತೆ ಮಾಡಿತು. ಆದರೆ ಬಿಲ್ವಾರ ಕಿಂಗ್ಸ್ 19.2 ಓವರ್‌ಗಳಲ್ಲಿ 120 ರನ್‌ಗಳಿಗೆ ಆಲೌಟ್ ಆಗಿ 78 ರನ್‌ಗಳಿಂದ ಸೋಲನುಭವಿಸಿತು.

ಈ ಲೀಗ್ ನಲ್ಲಿ ಗುಜರಾತ್ ಜೈಂಟ್ಸ್, ಇಂಡಿಯಾ ಕ್ಯಾಪಿಟಲ್ಸ್, ಭಿಲ್ವಾರ ಕಿಂಗ್ಸ್, ಮಣಿಪಾಲ್ ಟೈಗರ್ಸ್ ಎಂಬ ನಾಲ್ಕು ತಂಡಗಳಿವೆ. ಈಗಾಗಲೇ ಗುಜರಾತ್ ಜೈಂಟ್ಸ್ ತಂಡವು ಮೂರು ಪಂದ್ಯಗಳನ್ನು ಆಡಿದ್ದು, ಒಂದರಲ್ಲಿ ಡ್ರಾ ಆಗಿದ್ದು, ಇನ್ನೆರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

ಇದನ್ನೂ ಓದಿ: Road Safety World Series: ಅಬ್ಬರಿಸಿದ ಸಚಿನ್, ಯುವರಾಜ್ ಸಿಂಗ್, ಇಂಡಿಯಾ ಲೆಜೆಂಡ್ಸ್ ಗೆ ಭರ್ಜರಿ ಗೆಲುವು

ಇನ್ನೊಂದೆಡೆ ಮಣಿಪಾಲ್ ಟೈಗರ್ಸ್ ತಂಡವು ಮೊದಲ ಪಂದ್ಯದಲ್ಲಿ ಡ್ರಾ ಕಂಡುಕೊಂಡಿದ್ದು, ಇನ್ನುಳಿದ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಈ ಮೂಲಕ ಕೊನೆಯ ಸ್ಥಾನದಲ್ಲಿದೆ. ಸದ್ಯ ಇಂಡಿಯಾ ಕ್ಯಾಪಿಟಲ್ಸ್ ಮತ್ತು ಭಿಲ್ವಾರ ಕಿಂಗ್ಸ್ ನಡುವೆ ಪಂದ್ಯ ನಡೆಯಲಿದ್ದು, ಯಾರು ಗೆಲುವಿನ ಹಾದಿ ಹಿಡಿಯಲಿದ್ದಾರೆ ಎಂದು ಕಾದುನೋಡಬೇಕಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More