Home> Sports
Advertisement

IND vs WI: ನಡೆಯುವುದಿಲ್ಲ ಭಾರತ-ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ! ಹೊರಬಿತ್ತು ಆಘಾತಕಾರಿ ಅಪ್ಡೇಟ್

India vs West Indies, Test Series 2023: ವೆಸ್ಟ್ ಇಂಡೀಸ್ ತಂಡವು ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ವಿಶ್ವಕಪ್ ಅರ್ಹತಾ ಪಂದ್ಯಗಳ ಭಾಗವಾಗಿದೆ. ಈ ವರ್ಷ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ ಗೆ ಅರ್ಹತೆ ಪಡೆಯುವ ಸಂಪೂರ್ಣ ಭರವಸೆಯೊಂದಿಗೆ ತಂಡ ಆಡುತ್ತಿದೆ. ಆದರೆ ಈ ವೇಳೆ ವೆಸ್ಟ್ ಇಂಡೀಸ್ ಆಟಗಾರರು ಭಾರತದ ಟೆಸ್ಟ್ ಸರಣಿಯ ಭಾಗವಾಗಬಹುದೇ ಅಥವಾ ಇಲ್ಲವೇ ಎಂಬ ದೊಡ್ಡ ಪ್ರಶ್ನೆ ಉದ್ಭವಿಸಿದೆ.

IND vs WI: ನಡೆಯುವುದಿಲ್ಲ ಭಾರತ-ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ! ಹೊರಬಿತ್ತು ಆಘಾತಕಾರಿ ಅಪ್ಡೇಟ್

India vs West Indies, Test Series 2023: ಭಾರತ ತಂಡವು ಪ್ರಸ್ತುತ ಒಂದು ತಿಂಗಳ ವಿಶ್ರಾಂತಿಯಲ್ಲಿದೆ. ಇದಾದ ಬಳಿಕ ತಂಡವು ಜುಲೈ ಆರಂಭದಿಂದ ವರ್ಷಾಂತ್ಯದವರೆಗೂ ನಿರಂತರವಾಗಿ ಕ್ರಿಕೆಟ್ ಆಡಬೇಕಿದೆ. ತಂಡವು ಜುಲೈ 12 ರಿಂದ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಲಿದ್ದು, ಅಲ್ಲಿ 2 ಟೆಸ್ಟ್, 3 ODI ಮತ್ತು 5 T20 ಪಂದ್ಯಗಳ ಸರಣಿಯನ್ನು ಆಡಲಿದೆ. ಆದರೆ, ಇದಕ್ಕೆ ತಂಡವನ್ನು ಇನ್ನೂ ಪ್ರಕಟಿಸಿಲ್ಲ. ಇದೀಗ ಈ ಪ್ರವಾಸದಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ ಸಂಬಂಧಿಸಿದಂತೆ ದೊಡ್ಡ ಅಪ್ಡೇಟ್ ಹೊರಬಿದ್ದಿದೆ.

ಇದನ್ನೂ ಓದಿ: ಏಕದಿನದಲ್ಲಿ ತ್ರಿಶತಕ ಬಾರಿಸಬಲ್ಲರು ಈ ಮೂವರು ಬ್ಯಾಟ್ಸ್’ಮನ್’ಗಳು! ಅದರಲ್ಲಿ ಇಬ್ಬರು ಭಾರತೀಯ ದಿಗ್ಗಜರು…

ಭಾರತ-ವಿಂಡೀಸ್ ಟೆಸ್ಟ್ ನಡೆಯುವುದಿಲ್ಲವೇ?

ವೆಸ್ಟ್ ಇಂಡೀಸ್ ತಂಡವು ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ವಿಶ್ವಕಪ್ ಅರ್ಹತಾ ಪಂದ್ಯಗಳ ಭಾಗವಾಗಿದೆ. ಈ ವರ್ಷ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ ಗೆ ಅರ್ಹತೆ ಪಡೆಯುವ ಸಂಪೂರ್ಣ ಭರವಸೆಯೊಂದಿಗೆ ತಂಡ ಆಡುತ್ತಿದೆ. ಆದರೆ ಈ ವೇಳೆ ವೆಸ್ಟ್ ಇಂಡೀಸ್ ಆಟಗಾರರು ಭಾರತದ ಟೆಸ್ಟ್ ಸರಣಿಯ ಭಾಗವಾಗಬಹುದೇ ಅಥವಾ ಇಲ್ಲವೇ ಎಂಬ ದೊಡ್ಡ ಪ್ರಶ್ನೆ ಉದ್ಭವಿಸಿದೆ. ಜುಲೈ 9 ರವರೆಗೆ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದ್ದು, ಭಾರತ ಜುಲೈ 12 ರಿಂದ ಮೊದಲ ಟೆಸ್ಟ್ ಪಂದ್ಯವನ್ನು ಆಡಬೇಕಿದೆ. ಈ ಬಗ್ಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ.

ಇನ್ಸೈಡ್ ಸ್ಪೋರ್ಟ್ ವರದಿಯ ಪ್ರಕಾರ, ಕ್ರಿಕೆಟ್ ವೆಸ್ಟ್ ಇಂಡೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ಹೇಳಿದ್ದಾರೆ. "ಕ್ರಿಕೆಟ್ ವಿಶ್ವಕಪ್ ಅರ್ಹತಾ ಪಂದ್ಯದ ಅಂತಿಮ ಪಂದ್ಯವು ಅರ್ಥಹೀನವಾಗಿದೆ. ಆದ್ದರಿಂದ ನಮ್ಮ ಟೆಸ್ಟ್ ಆಟಗಾರರು ಅದರಲ್ಲಿ ಭಾಗವಹಿಸುವುದಿಲ್ಲ. ಆದರೆ ಮೊದಲು ಅಂತಿಮ ಹಂತ ತಲುಪುತ್ತೇವೆಯೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು" ಎಂದು ಹೇಳಿದ್ದಾರೆ.

ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ಜೇಸನ್ ಹೋಲ್ಡರ್, ಕೈಲ್ ಮೇಯರ್ಸ್, ರೋಸ್ಟನ್ ಚೇಸ್ ಮತ್ತು ಅಲ್ಜಾರಿ ಜೋಸೆಫ್ ತಂಡದ ಭಾಗವಾಗಿದ್ದಾರೆ.

ವೆಸ್ಟ್ ಇಂಡೀಸ್ ಪ್ರವಾಸದ ಸಂಪೂರ್ಣ ವೇಳಾಪಟ್ಟಿ

  • ಜುಲೈ 12 ರಿಂದ 16, 1 ನೇ ಟೆಸ್ಟ್, ಡೊಮಿನಿಕಾ
  • 20 ರಿಂದ 24 ಜುಲೈ, 2 ನೇ ಟೆಸ್ಟ್, ಟ್ರಿನಿಡಾಡ್
  • ಜುಲೈ 27, 1 ನೇ ODI, ಬಾರ್ಬಡೋಸ್
  • ಜುಲೈ 29, 2ನೇ ODI, ಬಾರ್ಬಡೋಸ್
  • 1 ಆಗಸ್ಟ್, 3ನೇ ODI, ಟ್ರಿನಿಡಾಡ್
  • ಆಗಸ್ಟ್ 3, 1ನೇ ಟಿ20, ಟ್ರಿನಿಡಾಡ್
  • 6 ಆಗಸ್ಟ್, 2ನೇ ಟಿ20, ಗಯಾನಾ
  • ಆಗಸ್ಟ್ 8, 3ನೇ ಟಿ20, ಗಯಾನಾ
  • ಆಗಸ್ಟ್ 12, ನಾಲ್ಕನೇ ಟಿ20, ಫ್ಲೋರಿಡಾ
  • ಆಗಸ್ಟ್ 13, ಐದನೇ ಟಿ20, ಫ್ಲೋರಿಡಾ

ಇದನ್ನೂ ಓದಿ: 150 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಈ ಕಿಲಾಡಿ Team Indiaಗೆ ಎಂಟ್ರಿ: ಬುಮ್ರಾ ಸ್ಥಾನಕ್ಕೆ ಬರುತ್ತಾ ಕುತ್ತು!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More