Home> Sports
Advertisement

Ind Vs SL 2nd T20 Match: ನಿಗದಿತ ವೇಳಾಪಟ್ಟಿಯಂತೆಯೇ ನಡೆಯಲಿದೆ ಎರಡನೇ T20 ಪಂದ್ಯ, ಸೀಜನ್ ನಿಂದ ಹೊರಬಿದ್ದ 8 ಆಟಗಾರರು

Ind Vs SL 2nd T20 Match - ಭಾರತ ಮತ್ತು ಶ್ರೀಲಂಕಾ ನಡುವಿನ ಟಿ 20i ಸರಣಿಯ ಕೊನೆಯ ಎರಡು ಪಂದ್ಯಗಳು ನಡೆಯಲಿವೆಯೇ ಅಥವಾ ಇಲ್ಲವೇ ಎಂಬುದರ ಕುರಿತಾದ ಸಸ್ಪೆನ್ಸ್ ಇದೀಗ ದೂರಾಗಿದೆ.

Ind Vs SL 2nd T20 Match: ನಿಗದಿತ ವೇಳಾಪಟ್ಟಿಯಂತೆಯೇ ನಡೆಯಲಿದೆ ಎರಡನೇ T20 ಪಂದ್ಯ, ಸೀಜನ್ ನಿಂದ ಹೊರಬಿದ್ದ 8 ಆಟಗಾರರು

Ind Vs SL 2nd T20 Match - ಭಾರತ ಮತ್ತು ಶ್ರೀಲಂಕಾ ನಡುವಿನ ಟಿ 20i ಸರಣಿಯ ಕೊನೆಯ ಎರಡು ಪಂದ್ಯಗಳು ನಡೆಯಲಿವೆಯೇ ಅಥವಾ ಇಲ್ಲವೇ ಎಂಬುದರ ಕುರಿತಾದ ಸಸ್ಪೆನ್ಸ್ ಇದೀಗ ದೂರಾಗಿದೆ. ಇದರೊಂದಿಗೆ ಉಭಯ ತಂಡಗಳ ನಡುವಿನ ಟಿ 20 ಸರಣಿಯ (India Vs Sri Lanka T20 Series) ಎರಡನೇ ಪಂದ್ಯ ಈ ಮೊದಲೇ ನಿಗದಿಯಾದಂತೆ ಇಂದೇ ನಡೆಯಲಿದೆ. ಎಎನ್‌ಐ ಸುದ್ದಿ ಸಂಸ್ಥೆ ಪ್ರಕಟಿಸಿರುವ ವರದಿಯ ಪ್ರಕಾರ, ಕರೋನಾ ಪಾಸಿಟಿವ್ ಕಂಡು ಬಂದ ಕ್ರುನಾಲ್ ಪಾಂಡ್ಯ (Krunal Pandya) ಅವರ ನಿಕಟ ಸಂಪರ್ಕಕ್ಕೆ ಬಂದ ಎಲ್ಲ ಆಟಗಾರರಿಗೂ ಈ ಪಂದ್ಯ ಮತ್ತು ಮುಂದಿನ ಪಂದ್ಯಗಳಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಇದರಲ್ಲಿ ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಾಹುಲ್ ಚಹರ್, ಮನೀಶ್ ಪಾಂಡೆ, ಇಶಾನ್ ಕಿಶನ್ ಮತ್ತು ಕೃಷ್ಣಪ್ಪ ಗೌತಮ್ ಅವರ ಹೆಸರುಗಳು ಶಾಮೀಲಾಗಿವೆ.

ಇದನ್ನೂ ಓದಿ-IPL 2021: ಇನ್ನುಳಿದ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ, ಫೈನಲ್ ಯಾವಾಗ ಗೊತ್ತಾ..?

ಟಿ 20 ಸರಣಿಯ ಎರಡನೇ ಪಂದ್ಯವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿರುವ ಹಿನ್ನೆಲೆ  ಉಭಯ ತಂಡಗಳ ನಡುವಿನ ಎರಡನೇ ಮತ್ತು ಮೂರನೇ ಟಿ 20 ಪಂದ್ಯಗಳ ನಡುವೆ ಯಾವುದೇ ಅಂತರವಿರುವುದಿಲ್ಲ. ಈ ಪಂದ್ಯದಿಂದ ಕ್ರುನಾಲ್ ಸೇರಿದಂತೆ ಎಂಟು ಆಟಗಾರರನ್ನು ಹಿಂದಕ್ಕೆ ಕರೆಯಿಸಲಾದ ಕಾರಣ ಇದೀಗ, ಟೀಮ್ ಇಂಡಿಯಾ ಎರಡನೇ ಪಂದ್ಯವಾಡುವ XI ಸದಸ್ಯರ ಆಯ್ಕೆ ಮಾಡಲು ಹೆಚ್ಚಿನ ಆಯ್ಕೆ ಉಳಿದಿಲ್ಲ. ಶಿಖರ್ ಧವನ್ ನಾಯಕತ್ವದಲ್ಲಿ ಭಾರತ ತಂಡವು ಈ ಪ್ರವಾಸದಲ್ಲಿ 20 ಆಟಗಾರರೊಂದಿಗೆ ತಲುಪಿದೆ ಇದಲ್ಲದೆ, ನಾಲ್ಕು ಸ್ಟ್ಯಾಂಡ್‌ಬೈ ನೆಟ್ ಬೌಲರ್‌ಗಳು ಸಹ ತಂಡದಲ್ಲಿದ್ದಾರೆ.

ಇದನ್ನೂ ಓದಿ-India vs England 2021: ಬೆರಳಿನ ಗಾಯದಿಂದಾಗಿ ಟೆಸ್ಟ್ ಸರಣಿಯಿಂದ ವಾಷಿಂಗ್ಟನ್ ಸುಂದರ್ ಹೊರಕ್ಕೆ

ಇದಲ್ಲದೆ ಕ್ರುನಾಲ್ ಉಳಿದೆಲ್ಲ ಸದಸ್ಯರ ಜೊತೆಗೆ ಜುಲೈ 30ರಂದು ಸ್ವದೇಶಕ್ಕೆ ಮರಳುವುದು ಸಾಧ್ಯವಿಲ್ಲ ಎಂದು ನಿರ್ಧರಿಸಲಾಗಿದೆ. ಸೂರ್ಯ ಕುಮಾರ್ ಯಾದವ್ (Suryakumar Yadav) ಹಾಗೂ ಪೃಥ್ವಿ ಷಾ (Prithvi Shaw) ಅವರು ಇಂಗ್ಲೆಂಡ್ ಗೆ ರವಾನೆಯಾಗುವುದರ ಮೇಲೂ ಕೂಡ ಶಂಕೆ ವ್ಯಕ್ತಪಡಿಸಲಾಗುತ್ತಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಈ ಇಬ್ಬರನ್ನು ರಿಪ್ಲೇಸ್ಮೆಂಟ್ ಆಗಿ ಆಯ್ಕೆ ಮಾಡಲಾಗಿತ್ತು ಹಾಗೂ ಶ್ರೀಲಂಕಾ ವಿರುದ್ಧದ ಟಿ20 ಸರಣಿ ಮುಗಿಯುತ್ತಿದ್ದಂತೆ ಅವರು ಇಂಗ್ಲೆಂಡ್ ಗೆ ತೆರಳಬೇಕಿತ್ತು. ಇಂತಹ ಸಂದರ್ಭದಲ್ಲಿ ಈ ಇಬ್ಬರು ಆಟಗಾರರು ಯಾವಾಗ ಇಂಗ್ಲೆಂಡ್ ಗೆ ತೆರಳಲಿದ್ದಾರೆ ಕಾದುನೋಡಬೇಕು.

ಇದನ್ನೂ ಓದಿ-"ಜನರು ನಿವೃತ್ತರಾದಾಗ ದಂತಕಥೆಗಳಾಗುತ್ತಾರೆ. ಕೊಹ್ಲಿ 30 ನೇ ವಯಸ್ಸಿನಲ್ಲಿಯೇ ದಂತಕಥೆ"

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More