Home> Sports
Advertisement

IND vs PAK: ಬಾಬರ್ ಅಜಮ್‍ಗೆ ಮದುವೆಯಾಗು ಎಂದ ರೋಹಿತ್ ಶರ್ಮಾ!

ಏಷ್ಯಾಕಪ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಇಂದು ಪಾಕಿಸ್ತಾನವನ್ನು ಎದುರಿಸಲಿದೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಜೊತೆ ತಮಾಷೆ ಮಾಡಿರುವ ವಿಡಿಯೋ ವೈರಲ್ ಆಗಿದೆ.

IND vs PAK: ಬಾಬರ್ ಅಜಮ್‍ಗೆ ಮದುವೆಯಾಗು ಎಂದ ರೋಹಿತ್ ಶರ್ಮಾ!

ನವದೆಹಲಿ: ಈ ಬಾರಿಯ ಏಷ್ಯಾಕಪ್ ಗೆಲ್ಲಲು ಭಾರತ ತಂಡ ಪ್ರಬಲ ಸ್ಪರ್ಧಿ ಎನಿಸುತ್ತಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಅಮೋಘ ಫಾರ್ಮ್‌ನಲ್ಲಿ ಸಾಗುತ್ತಿದೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಇಂದು ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನ ಎಂದಿನಂತೆ ಮೈದಾನದ ಹೊರಗಿನ ವಾತಾವರಣ ತುಂಬಾ ಬಿಸಿಯಾಗಿದೆ. ಎರಡೂ ತಂಡಗಳ ಆಟಗಾರರು ಪರಸ್ಪರ ಕೂಲಾಗಿದ್ದರೂ ಹೊರಗಡೆ ಅಭಿಮಾನಿಗಳು ಈ ಪಂದ್ಯವನ್ನು ಬೇರೆ ರೀತಿ ನೋಡುತ್ತಿದ್ದಾರೆ.

ಪಂದ್ಯಕ್ಕೂ ಮುನ್ನ ಭಾರತ ಮತ್ತು ಪಾಕಿಸ್ತಾನ ಆಟಗಾರರು ಪರಸ್ಪರ ಸಂದೇಶ ವಿನಿಮಯ ಮಾಡಿಕೊಂಡಿದ್ದಾರೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಾಕ್ ನಾಯಕ ಬಾಬರ್ ಅಜಮ್ ಜೊತೆ ತಮಾಷೆಯಾಗಿ ಮಾತನಾಡಿದ್ದಾರೆ. ಈ ವೇಳೆ ಬಾಬರ್‍ಗೆ ರೋಹಿತ್ ನೀಡಿರುವ ಸಲಹೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.    

ಇದನ್ನೂ ಓದಿ: Ind vs Pak ಪಂದ್ಯದಲ್ಲಿ ಕ್ಯಾಪ್ಟನ್ ಶರ್ಮಾಗೆ ಅಸ್ತ್ರವಾಗಲಿದ್ದಾರೆ ಈ 3 ಬೌಲರ್‌ಗಳು! 

ಪಾಕ್ ನಾಯಕನ ಭೇಟಿಯಾದ ರೋಹಿತ್

ಭಾನುವಾರ ನಡೆಯಲಿರುವ ಮೆಗಾ-ಪಂದ್ಯಕ್ಕೂ ಮೊದಲು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಕ್ರಿಕೆಟ್ ಮೈದಾನದಲ್ಲಿ ಮಾತುಕತೆ ನಡೆಸಿದ್ದಾರೆ. ಉಭಯ ತಂಡಗಳ ತರಬೇತಿ ಅವಧಿಯಲ್ಲಿ ಇಬ್ಬರೂ ಅನುಭವಿ ಬ್ಯಾಟ್ಸ್‌ಮನ್‌ಗಳಿಗೆ ಚಿಟ್-ಚಾಟ್ ಮಾಡುವ ಅವಕಾಶ ಸಿಕ್ಕಿತು. ಬಾಬರ್ ಮತ್ತು ರೋಹಿತ್ ನಡುವಿನ ಸಂಭಾಷಣೆಯ ವಿಡಿಯೋವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಬಾಬರ್ ಅಜಮ್‍ಗೆ ಮದುವೆಯಾಗು ಅಂತಾ ರೋಹಿತ್ ಶರ್ಮಾ ಹೇಳಿರುವುದು ಫನ್ನಿಯಾಗಿದೆ.

ರೋಹಿತ್ ಸಲಹೆಗೆ ಜೋರಾಗಿ ನಕ್ಕ ಬಾಬರ್!

ಬಾಬರ್ ಅಜಮ್‌ ಜೊತೆಗೆ ಮಾತನಾಡುತ್ತಾ ರೋಹಿತ್ ಶರ್ಮಾ, ‘ಸಹೋದರ ಬೇಗನೆ ಮದುವೆಯಾಗು’ ಎಂದು ಹೇಳಿದ್ದಾರೆ. ಈ ಸಲಹೆ ಕೇಳಿ ಬಾಬರ್ ಜೋರಾಗಿ ನಗಲು ಪ್ರಾರಂಭಿಸಿದರು. ‘ಈಗ ನಾನು ಮದುವೆಯಾಗಲ್ಲ, ಅದಕ್ಕೆ ಇನ್ನು ಟೈಂ ಇದೆ’ ಅಂತಾ ಉತ್ತರಿಸಿದ್ದಾನೆ. ಉಭಯ ತಂಡಗಳ ನಾಯಕರ ನಡುವೆ ಸಾಕಷ್ಟು ಮೋಜು ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: Team India : ಪಾಕ್​ಗೆ ಶತ್ರುವಾಗಿ ಕಾಡಲಿದ್ದಾರೆ ಟೀಂ ಇಂಡಿಯಾದ ಈ 3 ಬ್ಯಾಟ್ಸ್‌ಮನ್‌ಗಳು!

ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯ

ಭಾನುವಾರ ನಡೆಯಲಿರುವ ಪಂದ್ಯವು ಕಳೆದ ವರ್ಷದ ಟಿ-20 ವಿಶ್ವಕಪ್ ನಂತರ ಉಭಯ ತಂಡಗಳ ನಡುವಿನ ಮೊದಲ ಮುಖಾಮುಖಿಯಾಗಿದೆ. ಕಳೆದ ವರ್ಷ ಇದೇ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬಾಬರ್ ಅಜಮ್ ನೇತೃತ್ವದ ತಂಡ 10 ವಿಕೆಟ್‌ಗಳಿಂದ ಗೆದ್ದು ಬೀಗಿತ್ತು. ವಿಶ್ವಕಪ್ ಪಂದ್ಯದಲ್ಲಿ ಮೆನ್ ಇನ್ ಬ್ಲೂ ವಿರುದ್ಧ ತಮ್ಮ ಮೊದಲ ಗೆಲುವು ಸಾಧಿಸಿದ ಪಾಕಿಸ್ತಾನಕ್ಕೆ ಇದು ಪ್ರಮುಖ ಸಾಧನೆಯಾಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More