Home> Sports
Advertisement

IND vs ENG: ಟೆಸ್ಟ್ ಆರಂಭಕ್ಕೂ ಒಂದು ದಿನ ಮುಂಚಿತವಾಗಿ ಪ್ಲೇಯಿಂಗ್ 11 ಪ್ರಕಟ: ಈ ಆಟಗಾರರಿಗೆ ಅಧಿಕೃತ ಸ್ಥಾನ ನೀಡಿದ ಸಮಿತಿ

England Playing 11 For Rajkot Test: ಹೈದರಾಬಾದ್‌’ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವೇಗಿ ಮಾರ್ಕ್ ವುಡ್ ಆರಂಭಿಕ ಟೆಸ್ಟ್ ಆಡಿದ್ದರು. ಆದರೆ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ. ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಟೆಸ್ಟ್‌’ನಿಂದ ವುಡ್ ಅವರನ್ನು ಹೊರಗಿಡಲಾಗಿತ್ತು.

IND vs ENG: ಟೆಸ್ಟ್ ಆರಂಭಕ್ಕೂ ಒಂದು ದಿನ ಮುಂಚಿತವಾಗಿ ಪ್ಲೇಯಿಂಗ್ 11 ಪ್ರಕಟ: ಈ ಆಟಗಾರರಿಗೆ ಅಧಿಕೃತ ಸ್ಥಾನ ನೀಡಿದ ಸಮಿತಿ

England Playing 11 For Rajkot Test: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯ ಮೂರನೇ ಪಂದ್ಯ ಫೆಬ್ರವರಿ 15 ರಿಂದ ಅಂದರೆ ನಾಳೆಯಿಂದ ರಾಜ್‌’ಕೋಟ್‌ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ನಡೆಯಲಿದೆ. ಇದಕ್ಕಾಗಿ ಇಂಗ್ಲೆಂಡ್ ತನ್ನ ಪ್ಲೇಯಿಂಗ್-11 ಅನ್ನು ಪ್ರಕಟಿಸಿದೆ.

 ಇದನ್ನೂ ಓದಿ: ಉತ್ಸವ್ ಗೋನವಾರ ಕನಸಿಗೆ ಜೊತೆಯಾದ ಬಹುಭಾಷಾ ಕಲಾವಿದ

ಈ ಪಂದ್ಯದಲ್ಲಿ ವೇಗದ ಬೌಲರ್ ಮಾರ್ಕ್ ವುಡ್ ಮರಳಿದ್ದರೆ, ಯುವ ಸ್ಪಿನ್ನರ್ ಶೋಯೆಬ್ ಬಶೀರ್ ಅವರನ್ನು ಕೈಬಿಡಲಾಗಿದೆ. ಸರಣಿಯ ಎರಡು ಪಂದ್ಯಗಳು ನಡೆದಿದ್ದು, ಮೊದಲ ಪಂದ್ಯವನ್ನು ಇಂಗ್ಲೆಂಡ್ ಮತ್ತು ಎರಡನೇ ಪಂದ್ಯವನ್ನು ಭಾರತ ಗೆದ್ದಿದೆ.

ಹೈದರಾಬಾದ್‌’ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವೇಗಿ ಮಾರ್ಕ್ ವುಡ್ ಆರಂಭಿಕ ಟೆಸ್ಟ್ ಆಡಿದ್ದರು. ಆದರೆ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ. ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಟೆಸ್ಟ್‌’ನಿಂದ ವುಡ್ ಅವರನ್ನು ಹೊರಗಿಡಲಾಗಿತ್ತು. ಬದಲಾಗಿ 41 ವರ್ಷದ ಅನುಭವಿ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಈ ಪಂದ್ಯದಲ್ಲಿ ಪುನರಾಗಮನ ಮಾಡಿದರು. ಬಶೀರ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡುವ ಅವಕಾಶ ಪಡೆದರೆ, ಈ ಯುವ ಸ್ಪಿನ್ನರ್ ಚೊಚ್ಚಲ ಪಂದ್ಯದಲ್ಲೇ 4 ವಿಕೆಟ್ ಕಬಳಿಸಿ ಯಶಸ್ವಿಯಾಗಿದ್ದರು.

ಅಂದಹಾಗೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್‌’ಗೆ ರಾಜ್‌’ಕೋಟ್ ಟೆಸ್ಟ್ ವಿಶೇಷವಾಗಲಿದೆ. ಏಕೆಂದರೆ ಈ ಅನುಭವಿ ಆಟಗಾರ ತಮ್ಮ ಟೆಸ್ಟ್ ವೃತ್ತಿಜೀವನದ 100 ನೇ ಪಂದ್ಯವನ್ನು ಆಡಲು ಸಿದ್ಧರಾಗಿದ್ದಾರೆ. ಸ್ಟೋಕ್ಸ್ ಬಗ್ಗೆ ಅವರ ಸಹ ಆಟಗಾರ ಓಲಿ ಪೋಪ್ ಮಾತನಾಡಿ, “100 ಟೆಸ್ಟ್ ಪಂದ್ಯಗಳನ್ನು ಆಡೋದು ಅದ್ಭುತ ಸಾಧನೆ. ಅವರು ನಾಯಕರಾಗಿದ್ದಾಗಿನಿಂದ ಅನೇಕ ವಿಶೇಷ ಕ್ಷಣಗಳು ಮುನ್ನೆಲೆಗೆ ಬಂದಿವೆ” ಎಂದಿದ್ದಾರೆ.

 ಇದನ್ನೂ ಓದಿ:  ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್: ಸೋನಿಯಾ ಗಾಂಧಿ ಸೇರಿ 4 ಮಂದಿ ಹೆಸರು ಘೋಷಣೆ

ಮೂರನೇ ಟೆಸ್ಟ್‌’ಗೆ ಇಂಗ್ಲೆಂಡ್‌ನ ಪ್ಲೇಯಿಂಗ್-11

ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಆಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್, ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ, ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ್.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Read More