Home> Sports
Advertisement

14 ರನ್‌ʼಗೆ 7 ವಿಕೆಟ್‌ ಢಮಾರ್!‌ ಬ್ಯಾಟರ್‌ ಸುತ್ತುವರೆದ 10 ಆಟಗಾರರು... ಹತ್ತೇ ನಿಮಿಷಕ್ಕೆ ಮುಗಿಯಿತು ಮ್ಯಾಚ್!!‌ ಕ್ರಿಕೆಟ್‌ ಲೋಕದ ಅದ್ಭುತ ಘಟನೆಯಿದು

County Championship: ಈ ದೃಶ್ಯ ಕಂಡು ಬಂದಿದ್ದು ಸೋಮರ್‌ಸೆಟ್ ಮತ್ತು ಸರ್ರೆ ತಂಡಗಳ ನಡುವಿನ ಪಂದ್ಯದಲ್ಲಿ. ಸೋಮರ್‌ಸೆಟ್‌ ತಂಡ 111 ರನ್‌ʼಗಳ ಭರ್ಜರಿ ಜಯ ದಾಖಲಿಸಿತು.  

14 ರನ್‌ʼಗೆ 7 ವಿಕೆಟ್‌ ಢಮಾರ್!‌ ಬ್ಯಾಟರ್‌ ಸುತ್ತುವರೆದ 10 ಆಟಗಾರರು... ಹತ್ತೇ ನಿಮಿಷಕ್ಕೆ ಮುಗಿಯಿತು ಮ್ಯಾಚ್!!‌ ಕ್ರಿಕೆಟ್‌ ಲೋಕದ ಅದ್ಭುತ ಘಟನೆಯಿದು

County Championship: ದೀರ್ಘ ಸ್ವರೂಪದ ಕ್ರಿಕೆಟ್‌ ಪಂದ್ಯಗಳಲ್ಲಿ ಅನೇಕ ಬಾರಿ, ಬೌಲರ್‌ʼಗಳು ಬ್ಯಾಟ್ಸ್‌ಮನ್‌ʼಗಳನ್ನು ಔಟ್ ಮಾಡಲು ಹೆಣಗಾಡುತ್ತಾರೆ. ಸ್ಪಿನ್ನರ್‌ʼಗಳು ವಿವಿಧ ರೀತಿಯ ಫೀಲ್ಡಿಂಗ್ ಹೊಂದಿಸುವ ಮೂಲಕ ಬ್ಯಾಟ್ಸ್‌ಮನ್‌ʼಗೆ ಬಲೆ ಬೀಸುತ್ತಾರೆ. ಆದರೆ ಕೌಂಟಿ ಚಾಂಪಿಯನ್‌ಶಿಪ್‌ʼನಲ್ಲಿ ಬ್ಯಾಟ್ಸ್‌ʼಮನ್ ಎಲ್ಲಾ 11 ಆಟಗಾರರಿಂದ ಸುತ್ತುವರೆದಿರುವ ಅದ್ಭುತ ದೃಶ್ಯ ಕಂಡುಬಂದಿತು.

ಇದನ್ನೂ ಓದಿ:  ಈ ಹಣ್ಣು ತಿಂದರೆ ಸಾಕು ಎಷ್ಟೇ ಮಂದದೃಷ್ಟಿಯಿದ್ದರೂ ಕಣ್ಣು ಶಾರ್ಪ್‌ ಆಗುತ್ತೆ!

ಅಂದಹಾಗೆ ಈ ದೃಶ್ಯ ಕಂಡು ಬಂದಿದ್ದು ಸೋಮರ್‌ಸೆಟ್ ಮತ್ತು ಸರ್ರೆ ತಂಡಗಳ ನಡುವಿನ ಪಂದ್ಯದಲ್ಲಿ. ಸೋಮರ್‌ಸೆಟ್‌ ತಂಡ 111 ರನ್‌ʼಗಳ ಭರ್ಜರಿ ಜಯ ದಾಖಲಿಸಿತು.

ಸೋಮರ್ ಸೆಟ್ ತಂಡ ಅತ್ಯುತ್ತಮ ಪ್ರದರ್ಶನ ತೋರಿ ಸರ್ರೆ ತಂಡಕ್ಕೆ 221 ರನ್ʼಗಳ ಗುರಿ ನೀಡಿದೆ. ಇದಕ್ಕೆ ಪ್ರತೀಕಾರ ತೀರಿಸಲು ಕಣಕ್ಕಿಳಿದ ಸರ್ರೆ ತಂಡವು ಕೇವಲ 109 ಸ್ಕೋರ್‌ʼಗೆ ಕುಸಿಯಿತು. ಸೆ.12ರಂದು ನಡೆದ ಪಂದ್ಯದಲ್ಲಿ ಬೌಲರ್ ಜಾಕ್ ಲೀಚ್ ವಿಚಿತ್ರ ತಂತ್ರಗಾರಿಕೆ ನಡೆಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ವಿಕೆಟ್ ಕೀಪರ್ ಸೇರಿದಂತೆ 10 ಆಟಗಾರರೊಂದಿಗೆ ಬ್ಯಾಟಿಂಗ್ ಮಾಡುತ್ತಿದ್ದ ಡೇನಿಯಲ್ ವೊರೆಲ್ ಅವರನ್ನು ಸುತ್ತುವರೆದಿದ್ದಾರೆ. ಇದರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿತ್ತು.

ಸರ್ರೆ ತಂಡ ಕೇವಲ 14 ಸ್ಕೋರ್‌ʼಗೆ 7 ವಿಕೆಟ್‌ ಬಿಟ್ಟುಕೊಟ್ಟಿತು. ಒಟ್ಟಾರೆಯಾಗಿ 109 ರನ್‌ ಕಲೆ ಹಾಕಿದ್ದ ಸರ್ರೆ ತಂಡ ಕೊನೆಗೂ ವಿಫಲವಾಗಿ, 111 ರನ್‌ʼಗಳ ಅಂತರದಿಂದ ಸೋಲು ಕಂಡಿತು.

ಇದನ್ನೂ ಓದಿ:  ಎಷ್ಟೇ ಇಷ್ಟ ಇದ್ದರೂ ಸಹ... ಈ ಆರೋಗ್ಯ ಸಮಸ್ಯೆ ಇದ್ದವರು ಸೀತಾಫಲ ಹಣ್ಣು ತಿನ್ನಲೇಬಾರದು!

ಆಗಿದ್ದಿಷ್ಟು..

ಪಂದ್ಯ ಮುಗಿಯಲು 10 ನಿಮಿಷ ಉಳಿದಿತ್ತು. ಪಂದ್ಯ ಗೆಲ್ಲಬೇಕಾದರೆ ಸೋಮರ್‌ʼಸೆಟ್‌ ತಂಡಕ್ಕೆ ಒಂದು ವಿಕೆಟ್ ಬೇಕಿತ್ತು. ಹೀಗಾಗು ಸೋಮರ್‌ಸೆಟ್ ನಾಯಕ ಲೂಯಿಸ್ ಗ್ರೆಗೊರಿ ತನ್ನ ಎಲ್ಲಾ 10 ಫೀಲ್ಡರ್‌ʼಗಳನ್ನು ಕ್ರೀಸ್ ಬಳಿ ಕರೆದು, ಸರ್ರೆ ತಂಡದ ಬ್ಯಾಟ್ಸ್‌ಮನ್ ಡೇನಿಯಲ್ ವೊರಾಲ್ ಮೇಲೆ ಒತ್ತಡ ಹೇರುವಂತೆ ಮಾಡಿದರು. ಕೊನೆಗೂ ಸೋಮರ್‌ಸೆಟ್ ನಾಯಕ ಲೂಯಿಸ್ ಗ್ರೆಗೊರಿ ತಂತ್ರವು ಫಲಿಸಿತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More