Home> Sports
Advertisement

ಐಪಿಎಲ್ ರದ್ದಾದಲ್ಲಿ ಧೋನಿ ಮುಂದಿನ ಭವಿಷ್ಯವೇನು? ಮಾಜಿ ಆಟಗಾರ ಹೇಳಿದ್ರು ಹೀಗೆ..!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ಎಂ.ಎಸ್ ಧೋನಿ ಪುನರಾಗಮನಕ್ಕೆ ಸೂಕ್ತ ಹಂತವೆಂದು ಬಹಳಷ್ಟು ಕ್ರಿಕೆಟ್ ಅಭಿಮಾನಿಗಳು ಪರಿಗಣಿಸಿದ್ದರು, ಆದರೆ ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಭೀತಿಯಿಂದಾಗಿ ಅದನ್ನು ಈಗ ಏಪ್ರಿಲ್ 15ಕ್ಕೆ ಮುಂದೂಡಲಾಯಿತು.  

ಐಪಿಎಲ್ ರದ್ದಾದಲ್ಲಿ ಧೋನಿ ಮುಂದಿನ ಭವಿಷ್ಯವೇನು? ಮಾಜಿ ಆಟಗಾರ ಹೇಳಿದ್ರು ಹೀಗೆ..!

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ಎಂ.ಎಸ್ ಧೋನಿ ಪುನರಾಗಮನಕ್ಕೆ ಸೂಕ್ತ ಹಂತವೆಂದು ಬಹಳಷ್ಟು ಕ್ರಿಕೆಟ್ ಅಭಿಮಾನಿಗಳು ಪರಿಗಣಿಸಿದ್ದರು, ಆದರೆ ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಭೀತಿಯಿಂದಾಗಿ ಅದನ್ನು ಈಗ ಏಪ್ರಿಲ್ 15ಕ್ಕೆ ಮುಂದೂಡಲಾಯಿತು.  

ಐಸಿಸಿ ವಿಶ್ವಕಪ್ 2019 ನಂತರ ಅವರ ಬಹುನಿರೀಕ್ಷಿತ ಮರಳುವಿಕೆ ತಜ್ಞರು ಮತ್ತು ಅಭಿಮಾನಿಗಳಿಗೆ ವಿಶೇಷ ಆಕರ್ಷಣೆಯಾಗಿದೆ. ಕಾರಣ ಈಗ ಸದ್ಯದಲ್ಲೇ ಟಿ20 ವಿಶ್ವಕಪ್ ಇರುವುದರಿಂದಾಗಿ ಐಪಿಎಲ್ ನಲ್ಲಿ ನೀಡುವ ಪ್ರದರ್ಶನವೂ ಮತ್ತೆ ಅವರನ್ನು ತಂಡಕ್ಕೆ ಸುಲಭವಾಗಿ ಮರಳುವಂತೆ ಮಾಡಲು ಸುಲಭವಾಗುತ್ತದೆ.ಈ ಹಿನ್ನಲೆಯಲ್ಲಿ ಈಗ ಧೋನಿ ಆಗಮನಕ್ಕೆ ಎಲ್ಲರು ಕಾತರದಿಂದ ಕಾಯುತ್ತಿದ್ದಾರೆ. ಸದ್ಯಕ್ಕೆ ಐಪಿಎಲ್ ಟೂರ್ನಿ ವಿಳಂಬವಾಗಿದ್ದರೂ, ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಅವರು ಧೋನಿ ಅವರು ಏನು ಮಾಡುತ್ತಿದ್ದಾರೆಂದು ತಿಳಿದಿರುವ ಕಾರಣ ತಮ್ಮ ಅಂತರರಾಷ್ಟ್ರೀಯ ಪುನರಾಗಮನಕ್ಕೆ ಐಪಿಎಲ್ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

"ಧೋನಿಯಂತಹ ಆಟಗಾರನಿಗೆ, ಐಪಿಎಲ್ ಎಂದಿಗೂ ಮಾನದಂಡ ಆಗುವುದಿಲ್ಲ. ಅವರು ಐಪಿಎಲ್‌ನಲ್ಲಿ ರನ್ ಗಳಿಸಿದ್ದರೆ, ತಜ್ಞರು ‘ಧೋನಿ ಆಯ್ಕೆಮಾಡಿ’,ಇದನ್ನು ಮಾಡಿ ಅದನ್ನು ಮಾಡಿ’ ಎಂಬಂತೆ ಇರುತ್ತಿದ್ದರು. ಎಂ.ಎಸ್ ಧೋನಿ ಅವರು ಏನು ಮಾಡುತ್ತಿದ್ದಾರೆಂದು ತಿಳಿದಿದ್ದಾರೆ,ಅವರು ಹಿಂತಿರುಗಲು ಬಯಸುತ್ತಾರೋ ಇಲ್ಲವೋ ”ಎಂದು ಆಕಾಶ್ ಚೋಪ್ರಾ ಯೂಟ್ಯೂಬ್ ವಿಡಿಯೋದಲ್ಲಿ ಹೇಳಿದ್ದಾರೆ.'ಧೋನಿ ಭಾರಿ ಅನುಭವಿ ಆಟಗಾರ. ಭಾರತಕ್ಕೆ ಎಂಎಸ್ ಧೋನಿ ಅಗತ್ಯವಿದ್ದರೆ, ಐಪಿಎಲ್ ಜೊತೆ ಅಥವಾ ಇಲ್ಲದೆ ಅವರು ಹಿಂತಿರುಗುತ್ತಾರೆ.' ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಮೂರು ಬಾರಿ ವಿಜೇತರಾದ ಚೆನ್ನೈ ಸೂಪರ್ ಕಿಂಗ್ಸ್ ಶನಿವಾರ ತಮ್ಮ ಶಿಬಿರವನ್ನು ಅಮಾನತುಗೊಳಿಸಿತ್ತು, ನಂತರ ಧೋನಿ ನಗರವನ್ನು ತೊರೆದರು. ಐಪಿಎಲ್ ಏಪ್ರಿಲ್ 15 ರಿಂದ ಪ್ರಾರಂಭವಾದರೆ, ಪಂದ್ಯಗಳಿಗೆ ಅನುಮತಿ ನಿರಾಕರಿಸಿದ ರಾಜ್ಯ ಸರ್ಕಾರಗಳು ಪರಿಸ್ಥಿತಿ ಸುಧಾರಿಸಿದರೆ ಗ್ರೀನ್ ಸಿಗ್ನಲ್ ನೀಡಲು ಸಿದ್ಧವಾಗಲಿದೆ ಎಂದು ಫ್ರ್ಯಾಂಚೈಸ್ ಮಾಲೀಕರು ಆಶಿಸುತ್ತಿದ್ದಾರೆ.

Read More