Home> Sports
Advertisement

ಸೌರವ್ ಗಂಗೂಲಿ ಹುಟ್ಟುಹಬ್ಬದಂದು ಮೂರು ಸಾಧನೆಗಳನ್ನು ಸ್ಮರಿಸಿದ ಐಸಿಸಿ

ಇಂದು ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಸೌರವ್ ಗಂಗೂಲಿ ಅವರ ಜನ್ಮದಿನವನ್ನು ಆಚರಿಸುತ್ತಿದ್ದಾರೆ.

ಸೌರವ್ ಗಂಗೂಲಿ ಹುಟ್ಟುಹಬ್ಬದಂದು ಮೂರು ಸಾಧನೆಗಳನ್ನು ಸ್ಮರಿಸಿದ ಐಸಿಸಿ

ನವದೆಹಲಿ: ಇಂದು ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಸೌರವ್ ಗಂಗೂಲಿ ಅವರ ಜನ್ಮದಿನವನ್ನು ಆಚರಿಸುತ್ತಿದ್ದಾರೆ.

49 ನೇ ವರ್ಷಕ್ಕೆ ಕಾಲಿಡುತ್ತಿರುವ ತಮ್ಮ ಪ್ರೀತಿಯ 'ದಾದಾ'ಗೆ ಭಾರತದ ಮಾಜಿ ಕ್ರಿಕೆಟಿಗರು ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ.ವಿವಿಎಸ್ ಲಕ್ಷ್ಮಣರಿಂದ ಹಿಡಿದು ಸುರೇಶ್ ರೈನಾ, ಸಚಿನ್ ತೆಂಡೂಲ್ಕರ್ ವರೆಗೆ ಭಾರತೀಯ ಕ್ರಿಕೆಟ್‌ನ ಹಾಲಿ ಹಾಗೂ ಮಾಜಿ ಆಟಗಾರರು ಭಾರತದ ಮಾಜಿ ನಾಯಕನಿಗೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: Sri Lanka Cricket Tour: ಭಾರತ ಕ್ರಿಕೆಟ್ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್

ಇನ್ನೊಂದೆಡೆಗೆ ಐಸಿಸಿ ಕೂಡ ಸೌರವ್ ಗಂಗೂಲಿ (Sourav Ganguly) ಜನ್ಮದಿನಕ್ಕೆ ಶುಭ ಕೊರುತ್ತಾ ಮೂರು ಸಾಧನೆಗಳ ಕುರಿತಾಗಿ ಪೋಸ್ಟ್ ಮಾಡಿದೆ. ಅದರಲ್ಲಿ ಪ್ರಮುಖವಾಗಿ ಅವರು 10,000 ಏಕದಿನ ರನ್ ಗಳಿಸಿದ ಮೂರನೇ ಅತಿ ವೇಗದ ಬ್ಯಾಟ್ಸ್‌ಮನ್ ಆಗಿದ್ದು, ಇದಕ್ಕಾಗಿ ಅವರು 263 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ, ವಿರಾಟ್ ಕೊಹ್ಲಿ ಮತ್ತು ತೆಂಡೂಲ್ಕರ್ ಅವರ ನಂತರದ ಸ್ಥಾನದಲ್ಲಿದ್ದಾರೆ.1999 ರ ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ಅಜೇಯ 183 ರನ್ ಗಳಿಸಿದ್ದು ಭಾರತದ ಪರವಾಗಿ ಅತ್ಯಧಿಕ ಮೊತ್ತವಾಗಿದೆ. ಇದಲ್ಲದೆ ಗಂಗೂಲಿ ಭಾರತವನ್ನು ವಿದೇಶದಲ್ಲಿ 11 ಗೆಲುವುಗಳತ್ತ ಮುನ್ನಡೆಸಿದ್ದಾರೆ.

ಇದನ್ನೂ ಓದಿ: T20 World Cup ನಂತರ ರವಿಶಾಸ್ತ್ರಿ ಬದಲಿಗೆ ಹೊಸ ಕೋಚ್ ಆಗಿ ಆಯ್ಕೆಯಾಗಲಿದ್ದಾರೆಯೇ ರಾಹುಲ್ ದ್ರಾವಿಡ್!

ಗಂಗೂಲಿ ಏಕದಿನ ಪಂದ್ಯಗಳಲ್ಲಿ 11,221 ರನ್ ಗಳಿಸಿ ಭಾರತದ ಪರವಾಗಿ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.ಸಚಿನ್ ಅವರ ಆರಂಭಿಕ ಸಹಭಾಗಿತ್ವವು ಏಕದಿನ ಪಂದ್ಯಗಳಲ್ಲಿ ಅತ್ಯುತ್ತಮವಾದುದು, ಈ ಜೋಡಿ 136 ಇನ್ನಿಂಗ್ಸ್‌ಗಳಿಂದ 21 ಶತಕ ಮತ್ತು 23 ಅರ್ಧಶತಕಗಳೊಂದಿಗೆ 6609 ರನ್ ಗಳಿಸಿದೆ.1996 ರಲ್ಲಿ, ಲಾರ್ಡ್ಸ್‌ನಲ್ಲಿ ಚೊಚ್ಚಲ ಪಂದ್ಯದಲ್ಲೇ 131 ರನ್‌ಗಳಿಸಿ ಗಂಗೂಲಿ ದಾಖಲೆ ನಿರ್ಮಿಸಿದ್ದಾರೆ.

ಇದನ್ನೂ ಓದಿ: ಬೆಳ್ಳಿತೆರೆಗೆ ಬರಲಿದೆ ಭಾರತದ ಕ್ರಿಕೆಟ್ ಮಹಾಗೋಡೆ ದ್ರಾವಿಡ್ ಬಯೋಪಿಕ್..!

2000 ರಲ್ಲಿ ಗಂಗೂಲಿ ಭಾರತೀಯ ತಂಡದ ನಾಯಕನಾಗಿ ಅಧಿಕಾರ ವಹಿಸಿಕೊಂಡ ನಂತರ, ಭಾರತವು ಆಗಾಗ್ಗೆ ವಿದೇಶಗಳಲ್ಲಿ ಪಂದ್ಯಗಳನ್ನು ಗೆಲ್ಲಲು ಪ್ರಾರಂಭಿಸುತ್ತಿದ್ದಂತೆ ತಂಡವನ್ನು ಎತ್ತರಕ್ಕೆ ಕೊಂಡೊಯ್ದರು. ಅವರು 2002 ರಲ್ಲಿ ನ್ಯಾಟ್‌ವೆಸ್ಟ್ ಟ್ರೋಫಿ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತವನ್ನು ಗೆಲುವಿನತ್ತ ಕೊಂಡೊಯ್ದರು.ಅವರ ನೇತೃತ್ವದಲ್ಲಿ ಭಾರತವು ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಿ 2003/04 ಟೆಸ್ಟ್ ಸರಣಿಯನ್ನು 1-1ರಿಂದ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಉಳಿಸಿಕೊಂಡಿತು.

ಇದಾದ ನಂತರ ನಂತರ, ಭಾರತ 15 ವರ್ಷಗಳ ನಂತರ ಪಾಕಿಸ್ತಾನಕ್ಕೆ ಪ್ರಯಾಣಿಸಿ ಟೆಸ್ಟ್ ಮತ್ತು ಏಕದಿನ ಸರಣಿಯನ್ನು ಕ್ರಮವಾಗಿ 2-1 ಮತ್ತು 3-2ರಿಂದ ಗೆದ್ದುಕೊಂಡಿತು. ಅಷ್ಟೇ ಅಲ್ಲದೆ ಅವರು ಭಾರತ ತಂಡವನ್ನು 2003 ರಲ್ಲಿ ಫೈನಲ್ ವರೆಗೆ ಕೊಂಡೊಯ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Read More