Home> Sports
Advertisement

ICC ODI Ranking: ಏಕದಿನ ಕ್ರಿಕೆಟ್ ನಲ್ಲಿ ನಂಬರ್ 1 ಪಟ್ಟಕ್ಕೆ ಏರಿದ ಜಸ್ಪ್ರಿತ್ ಬುಮ್ರಾ

ಮಂಗಳವಾರದಂದು ಓವಲ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಅವರು 19 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ವೃತ್ತಿಜೀವನದ ಅತ್ಯುತ್ತಮ ಸಾಧನೆಯ ನಂತರ ಐಸಿಸಿ ಪುರುಷರ ಏಕದಿನ ಆಟಗಾರರ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಟ್ಟವನ್ನು ಮರಳಿ ಪಡೆದಿದ್ದಾರೆ.

ICC ODI Ranking: ಏಕದಿನ ಕ್ರಿಕೆಟ್ ನಲ್ಲಿ ನಂಬರ್ 1 ಪಟ್ಟಕ್ಕೆ ಏರಿದ ಜಸ್ಪ್ರಿತ್ ಬುಮ್ರಾ

ನವದೆಹಲಿ: ಮಂಗಳವಾರದಂದು ಓವಲ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಅವರು 19 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ವೃತ್ತಿಜೀವನದ ಅತ್ಯುತ್ತಮ ಸಾಧನೆಯ ನಂತರ ಐಸಿಸಿ ಪುರುಷರ ಏಕದಿನ ಆಟಗಾರರ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಟ್ಟವನ್ನು ಮರಳಿ ಪಡೆದಿದ್ದಾರೆ.

ಇದನ್ನೂ ಓದಿ: Fire at Railway Track: ಆಕಾಶದಿಂದ ಸುರೀತಾ ಬೆಂಕಿ ಮಳೆ! ಸುಟ್ಟು ಹೋಯ್ತು ರೈಲು ಹಳಿ

ಎರಡು ವರ್ಷಗಳ ಹಿಂದೆ ಅಗ್ರಸ್ಥಾನವನ್ನು ಪಡೆದಿದ್ದ ಬುಮ್ರಾ, ಆ ಸ್ಥಾನವನ್ನು ಫೆಬ್ರುವರಿ 2020 ರಲ್ಲಿ ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್‌ಗೆ ಕಳೆದುಕೊಂಡಿದ್ದರು.ಈ ಹಿಂದೆ ಟಿ20ಯಲ್ಲಿ ನಂ.1 ಆಗಿದ್ದ ಮತ್ತು ಪ್ರಸ್ತುತ ಟೆಸ್ಟ್‌ನಲ್ಲಿ ವೃತ್ತಿಜೀವನದ ಅತ್ಯುತ್ತಮ ಮೂರನೇ ಸ್ಥಾನದಲ್ಲಿರುವ ಬುಮ್ರಾ, ಕಪಿಲ್ ದೇವ್ ನಂತರ ಏಕದಿನ ಕ್ರಿಕೆಟ್ ನಲ್ಲಿ ನಂಬರ್ 1 ಪಟ್ಟವನ್ನು ಅಲಂಕರಿಸಿರುವ ಎರಡನೇ ಭಾರತೀಯ ವೇಗದ ಬೌಲರ್ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ.ಮಣಿಂದರ್ ಸಿಂಗ್, ಅನಿಲ್ ಕುಂಬ್ಳೆ ಮತ್ತು ರವೀಂದ್ರ ಜಡೇಜಾ ಅಗ್ರ ಶ್ರೇಯಾಂಕ ಪಡೆದ ಭಾರತದ ಇತರ ಬೌಲರ್‌ ಗಳಾಗಿದ್ದಾರೆ.

ಇದನ್ನೂ ಓದಿ: ಅಧ್ಯಕ್ಷ ರಾಜಪಕ್ಸೆ ಪಲಾಯನ.. ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಅವರಿಗೆ ಸಾಥ್ ನೀಡಿದ ಮೊಹಮದ್ ಶಮಿ ಮೂರು ವಿಕೆಟ್ ಗಳನ್ನು ಕಬಳಿಸುವ ಮೂಲಕ ಭಾರತ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Read More