Home> Sports
Advertisement

Smriti Mandhana: 25ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ಲೋಕದ ಬ್ಯೂಟಿ ಕ್ವೀನ್ ಬಗ್ಗೆ ನಿಮಗೆಷ್ಟು ಗೊತ್ತು..?

ಕ್ರಿಕೆಟ್ ರಂಗದ ಬ್ಯೂಟಿ ಕ್ವೀನ್ ಆಗಿರುವ ಮಂದಾನ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

Smriti Mandhana: 25ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ಲೋಕದ ಬ್ಯೂಟಿ ಕ್ವೀನ್ ಬಗ್ಗೆ ನಿಮಗೆಷ್ಟು ಗೊತ್ತು..?

ದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಬ್ಯೂಟಿ ಕ್ವೀನ್ ಸ್ಮೃತಿ ಮಂದಾನ ಭಾನುವಾರ 25ನೇ ವಸಂತಕ್ಕೆ ಕಾಲಿರಿಸಿದ್ದಾರೆ. 1996ರ ಜುಲೈ 18ರಂದು ಮುಂಬೈಯಲ್ಲಿ ಸ್ಮಿತಾ ಮತ್ತು ಶ್ರೀನಿವಾಸ ದಂಪತಿ ಪುತ್ರಿಯಾಗಿ ಜನಿಸಿದರು. ಈ ಪೀಳಿಗೆಯ ಅತ್ಯುತ್ತಮ ಮಹಿಳಾ ಕ್ರಿಕೆಟರ್ ಆಗಿ ಹೊರಹೊಮ್ಮಿರುವ ಮಂದಾನ ಹುಟ್ಟುಹಬ್ಬಕ್ಕೆ ಅನೇಕ ಕ್ರಿಕೆಟ್ ದಿಗ್ಗಜರು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.  

ಸ್ಮೃತಿ ಮಂದಾನ(Smriti Mandhana) ಅವರು 2013ರಲ್ಲಿ ಬಾಂಗ್ಲಾದೇಶ ವಿರುದ್ಧ ಏಕದಿನ ಹಾಗೂ ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. 2014ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ ಗೆ ಕಾಲಿಸಿದ್ದರು. ತಮ್ಮ ವಿಭಿನ್ನ ಶೈಲಿಯ ಆಟದಿಂದ ಗುರುತಿಸಿಕೊಂಡಿರುವ ಮಂದಾನ ಮೈದಾನದ ಒಳಗೂ ಹೊರಗೂ ಅಪಾರ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಕ್ರಿಕೆಟ್ ರಂಗದ ಬ್ಯೂಟಿ ಕ್ವೀನ್ ಆಗಿರುವ ಮಂದಾನ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಇದನ್ನೂ ಓದಿ: ಶಾರುಖ್ ಖಾನ್, ಕ್ರಿಸ್ಟಿಯಾನೋ ರೋನಾಲ್ಡೋ ಸಾಲಿಗೆ ಸೇರಿದ ಸಾನಿಯಾ ಮಿರ್ಜಾ

ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಅವರ ಕ್ರಿಕೆಟ್ ಜರ್ನಿ ಆರಂಭವಾಯಿತು. ಕ್ರಿಕೆಟ್(Cricket) ಎನ್ನುವುದು ಮಂದಾನರಿಗೆ ರಕ್ತಗತವಾಗಿ ಬಂದಿತ್ತು. ಏಕೆಂದರೆ ಅವರ ತಂದೆ ಮತ್ತು ಸಹೋದರ ಸಾಂಗ್ಲಿಯಲ್ಲಿ ಜಿಲ್ಲಾಮಟ್ಟದ ಕ್ರಿಕೆಟ್ ಆಡುತ್ತಿದ್ದರು. ಮಹಾರಾಷ್ಟ್ರ ರಾಜ್ಯದ 16 ವರ್ಷದೊಳಗಿನವರ ತಂಡವನ್ನು ಪ್ರತಿನಿಧಿಸಿದ್ದ ಸಹೋದರನ ಆಟವನ್ನು ನೋಡುತ್ತಾ ಮಂದಾನ ಕ್ರಿಕೆಟ್ ನಲ್ಲಿ ಆಸಕ್ತಿ ಬೆಳೆಸಿಕೊಂಡರು.   

ತಮ್ಮ 9ನೇ ವಯಸ್ಸಿನಲ್ಲಿ ಮಹಾರಾಷ್ಟ್ರದ 15 ವರ್ಷದೊಳಗಿನವರ ತಂಡಕ್ಕೆ ಆಯ್ಕೆಯಾಗಿದ್ದರು. 11ನೇ ವಯಸ್ಸಿನಲ್ಲಿಮಹಾರಾಷ್ಟ್ರದ 19 ವರ್ಷದೊಳಗಿನವರ ತಂಡಕ್ಕೆ ಆಯ್ಕೆ ಮಾಡಲಾಯಿತು. ಬಂದ ಎಲ್ಲ ಅವಕಾಶಗಳನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡ ಮಂದನಾ ಹಿಂತಿರುಗಿ ನೋಡಲಿಲ್ಲ. ಏಪ್ರಿಲ್ 2013ರಲ್ಲಿ ಟೀಂ ಇಂಡಿಯಾ ತಂಡಕ್ಕೆ ಸೇರಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. 2017ರ ಐಸಿಸಿ ಮಹಿಳಾ ವಿಶ್ವಕಪ್(ICC Women's World Cup) 2020ರ ಐಸಿಸಿ ಮಹಿಳಾ ಟಿ-20 ವಿಶ್ವಕಪ್  ಮತ್ತು 2018ರ ಐಸಿಸಿ ಮಹಿಳಾ ಟಿ-20 ಫೈನಲ್ ತಲುಪಿದ ಭಾರತೀಯ ತಂಡದಲ್ಲಿ ಸ್ಟಾರ್ ಬ್ಯಾಟ್ಸವುಮನ್ ಆಗಿ ಮಂದಾನ ತಂಡದಲ್ಲಿದ್ದರು.

ಇದನ್ನೂ ಓದಿ: T20 World Cup 2021 : ಎದುರು ಬದುರಾಗಲಿದೆ ಭಾರತ ಪಾಕಿಸ್ತಾನ , ಯಾವ ಗ್ರೂಪ್ ನಲ್ಲಿ ಯಾವ ತಂಡ ಸಂಪೂರ್ಣ ಮಾಹಿತಿ ಇಲ್ಲಿದೆ

ಮಂದಾನ ಕ್ರಿಕೆಟ್ ನಲ್ಲಿ ಅನೇಕ ದಾಖಲೆಗಳನ್ನು ನಿರ್ಮಿಸಿದ್ದಾರೆ. ಇದುವರೆಗೆ 3 ಟೆಸ್ಟ್ ಪಂದ್ಯಗಳನ್ನಾಡಿರುವ ಅವರು 2 ಅರ್ಧಶತಕ ಸೇರಿ 167 ರನ್ ಗಳಿಸಿದ್ದಾರೆ , 59 ಏಕದಿನ ಪಂದ್ಯಗಳನ್ನಾಡಿರುವ ಮಂದಾನ 4 ಶತಕ ಮತ್ತು 18 ಅರ್ಧಶತಕ ಸೇರಿದಂತೆ 2,253 ರನ್ ಗಳಿಸಿದ್ದಾರೆ. ಹಾಗೆಯೇ 81 ಟಿ-20 ಪಂದ್ಯಗಳಲ್ಲಿ ಒಟ್ಟು 13 ಅರ್ಧಶತಕ ಭಾರಿಸಿದ್ದು, 1,901 ರನ್ ಗಳಿಸಿದ್ದಾರೆ. ಟೆಸ್ಟ್ ನಲ್ಲಿ 78, ಏಕದಿನ ಪಂದ್ಯ(ODI Match)ದಲ್ಲಿ 135 ಹಾಗೂ ಟಿ-20ಯಲ್ಲಿ 86 ಮಂದಾನ ಗಳಿಸಿರುವ ಅತಿಹೆಚ್ಚಿನ ಸ್ಕೋರ್ ಆಗಿದೆ.    

ಮಹಿಳಾ ಕ್ರಿಕೆಟ್ ನಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮಂದಾನರಿಗೆ ಅರ್ಜುನ ಪ್ರಶಸ್ತಿ(Arjuna Award), ಬಿಸಿಸಿಐ ಬೆಸ್ಟ್ ವುಮೆನ್ಸ್ ಇಂಟರ್‌ನ್ಯಾಷನಲ್ ಕ್ರಿಕೆಟರ್ ಪ್ರಶಸ್ತಿ, ಐಸಿಸಿ ವರ್ಷದ ಅತ್ಯುತ್ತಮ ಮಹಿಳಾ ಕ್ರಿಕೆಟರ್, ಅತ್ಯುತ್ತಮ ಏಕದಿನ ಆಟಗಾರ್ತಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಅಲ್ಲದೆ ಏಕದಿನ ಶ್ರೇಯಾಂಕದಲ್ಲಿ ನಂ.1 ಪಟ್ಟವನ್ನು ಅವರು ಅಲಂಕರಿಸಿದ್ದರು.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More