Home> Sports
Advertisement

ರವಿಶಾಸ್ತ್ರಿ ಕುರಿತ ಪ್ರಶ್ನೆಗೆ ಗಂಗೂಲಿ ನೀಡಿದ ಉತ್ತರ ಹೇಗಿತ್ತು ಗೊತ್ತೇ?

ಅನಿಲ್ ಕುಂಬ್ಳೆ ಅವರನ್ನು 2016 ರಲ್ಲಿ ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕ ಮಾಡಿದ ನಂತರ ಸೌರವ್ ಗಂಗೂಲಿ ಹಾಗೂ ರವಿಶಾಸ್ತ್ರಿ ಜೊತೆಯಾಗಿ ಕಾಣಿಸಿಕೊಂಡಿಲ್ಲ, ಆ ಸಮಯದಲ್ಲಿ ಮೂರು ಸದಸ್ಯರ ಉನ್ನತ-ಶಕ್ತಿಯ ಕ್ರಿಕೆಟ್ ಸಲಹಾ ಸಮಿತಿಯ (ಸಿಎಸಿ) ಭಾಗವಾಗಿದ್ದ ಶಾಸ್ತ್ರಿ ಮತ್ತು ಗಂಗೂಲಿ ಅವರು ನೇಮಕಾತಿ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದರು.

ರವಿಶಾಸ್ತ್ರಿ ಕುರಿತ ಪ್ರಶ್ನೆಗೆ ಗಂಗೂಲಿ ನೀಡಿದ ಉತ್ತರ ಹೇಗಿತ್ತು ಗೊತ್ತೇ?

ನವದೆಹಲಿ: ಅನಿಲ್ ಕುಂಬ್ಳೆ ಅವರನ್ನು 2016 ರಲ್ಲಿ ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕ ಮಾಡಿದ ನಂತರ ಸೌರವ್ ಗಂಗೂಲಿ ಹಾಗೂ ರವಿಶಾಸ್ತ್ರಿ ಜೊತೆಯಾಗಿ ಕಾಣಿಸಿಕೊಂಡಿಲ್ಲ, ಆ ಸಮಯದಲ್ಲಿ ಮೂರು ಸದಸ್ಯರ ಉನ್ನತ-ಶಕ್ತಿಯ ಕ್ರಿಕೆಟ್ ಸಲಹಾ ಸಮಿತಿಯ (ಸಿಎಸಿ) ಭಾಗವಾಗಿದ್ದ ಶಾಸ್ತ್ರಿ ಮತ್ತು ಗಂಗೂಲಿ ಅವರು ನೇಮಕಾತಿ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದರು.

ಕೋಚ್ ನೇಮಕಾತಿ ಸಂದರ್ಭದಲ್ಲಿ ಸಂದರ್ಶನದಲ್ಲಿ ಗಂಗೂಲಿ ಅವರ ಅನುಪಸ್ಥಿತಿಯನ್ನು ಪ್ರಶ್ನಿಸುವ ಮೂಲಕ ಬಿರುಗಾಳಿ ಎಬ್ಬಿಸಿದರು. ಅಲ್ಲದೆ ಇದು ಅಗೌರವದ ಧೋರಣೆ ಎಂದು ಹೇಳಿದ್ದರು. ಇದಕ್ಕೆ ತಕ್ಕ ಉತ್ತರ ನೀಡಿದ್ದ ಸೌರವ್ ಗಂಗೂಲಿ ರವಿಶಾಸ್ತ್ರಿ ಮೂರ್ಖರ ಸ್ವರ್ಗದಲ್ಲಿದ್ದಾರೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದರು. ಈಗ ಸೌರವ ಗಂಗೂಲಿ ಬಿಸಿಸಿಐ ಉನ್ನತ ಹುದ್ದೆಗೆ ನೇಮಕವಾಗುತ್ತಿದ್ದಂತೆ ತಂಡದ ಕೋಚ್ ಆಗಿರುವ ರವಿಶಾಸ್ತ್ರಿ ಅವರ ಭವಿಷ್ಯವೇನು ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇತ್ತೀಚಿಗೆ ನಡೆದ ಮಾಧ್ಯಮಗೋಷ್ಠಿಯಲ್ಲಿ ಸೌರವ್ ಗಂಗೂಲಿಗೆ ರವಿಶಾಸ್ತ್ರಿ ಅವರೊಂದಿಗೆ ಮಾತನಾಡಿದ್ದೀರಾ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಗಂಗೂಲಿ, ಏಕೆ ಈಗ ಅವರೇನು ಮಾಡಿದ್ದಾರೆ? ಎಂದು ಉತ್ತರಿಸಿದ್ದಾರೆ. ಈಗ ಈ ವ್ಯಂಗ್ಯದ ಉತ್ತರ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದೆ.

ಸೌರವ್ ಗಂಗೂಲಿ ಅಕ್ಟೋಬರ್ 23 ರಂದು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು (ಬಿಸಿಸಿಐ) ವಹಿಸಿಕೊಳ್ಳಲಿದ್ದಾರೆ. ಸೋಮವಾರ ನಾಮಪತ್ರ ಸಲ್ಲಿಸಿದ್ದು, ಈ ಪಾತ್ರಕ್ಕೆ ಅವಿರೋಧವಾಗಿ ಆಯ್ಕೆಯಾಗಿದೆ.ಮಂಗಳವಾರದಂದು ಅವರು ತಮ್ಮ ನೂತನ ತಂಡದೊಂದಿಗೆ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಜೇ ಶಾ, ಅರುಣ್ ಧುಮಾಲ್, ಜಯೇಶ್ ಜಾರ್ಜ್ ಮತ್ತು ಮಹೀಮ್ ವರ್ಮಾ ಅವರು ಗಂಗೂಲಿ ತಂಡದ ಭಾಗವಾಗಲಿದ್ದಾರೆ. ಬಿಸಿಸಿಐನ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಅವರು ಗಂಗೂಲಿಯ ಪರವಾಗಿ ಪ್ರಮುಖ ಪಾತ್ರ ವಹಿಸಿದ್ದಾರೆಂದು ವರದಿಯಾಗಿದೆ. 

ನಾಮಪತ್ರ ಸಲ್ಲಿಸಿದ ನಂತರ ಗಂಗೂಲಿ ಅವರು ಭಾರತೀಯ ಕ್ರಿಕೆಟ್‌ನಲ್ಲಿ  ಸ್ಥಿತಿಗೆ ತರಲು ಬಯಸುತ್ತಾರೆ ಎಂದು ಹೇಳಿದರು.'ಮುಂದಿನ ಕೆಲವು ತಿಂಗಳುಗಳಲ್ಲಿ, ನಾವು ಎಲ್ಲವನ್ನೂ ಜಾರಿಗೆ ತರಬಹುದು ಮತ್ತು ಭಾರತೀಯ ಕ್ರಿಕೆಟ್‌ನಲ್ಲಿ ಸಹಜ ಸ್ಥಿತಿಗೆ ತರಬಹುದು' ಎಂದು ಸೌರವ್ ಗಂಗೂಲಿ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

Read More