Home> Sports
Advertisement

CSK Vs GT : ದುಬೆ, ಗಾಯಕ್ವಾಡ್ , ರಚಿನ್ ಮೂವರ ರೋಚಕ್ ಆಟ, 63 ರನ್ ಗಳ ಬಾರಿ ಅಂತರದಿಂದ ಗೆದ್ದ CSK

ಐಪಿಎಲ್ 2024ರ ಏಳನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ವಿರುದ್ಧ ನಡೆಯಿತು. ಚೆನ್ನೈ ಸೂಪರ್ ಕಿಂಗ್ಸ್  ತಂಡ  63 ರನ್ ಗಳ ಬಾರಿ ಅಂತರದಿಂದ ಗೆಲುವು ಸಾಧಿಸಿದೆ. 

CSK Vs GT :  ದುಬೆ,  ಗಾಯಕ್ವಾಡ್ , ರಚಿನ್ ಮೂವರ ರೋಚಕ್ ಆಟ,  63 ರನ್ ಗಳ ಬಾರಿ ಅಂತರದಿಂದ ಗೆದ್ದ CSK

CSK :ಇಂಡಿಯನ್ ಪ್ರೀಮಿಯರ್ ಲೀಗ್ 2024ರ 7ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ ವಿರುದ್ಧ ಎಂಎ ಚಿದಂಬರಂ ಕ್ರೀಡಾಂಗಣ ಚೆನ್ನೈನಲ್ಲಿ ನಡೆಯಿತು. 

ಪಂದ್ಯದ ಆರಂಭದಲ್ಲಿ ಗುಜರಾತ್ ಟೈಟನ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತು. 

ಇದನ್ನು ಓದಿ :Sachin Tendulkar : ಮಹಾರಾಷ್ಟ್ರದ ಸೆಮಿಕಂಡಕ್ಟರ್ ಉದ್ಯಮಕ್ಕೆ 5000 ಕೋಟಿ ಹೂಡಿಕೆ ಮಾಡುತ್ತಿರುವ ಮಾಜಿ ಕ್ರಿಕೆಟಿಗ

ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಪ್ರಾರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಬ್ಯಾಟ್ಸ್ ಮ್ಯಾನ್ ಗಳಾಗಿ ರುತುರಾಜ್ ಗಾಯಕ್ವಾಡ್ 46(36), ರಚಿನ್ ರವೀಂದ್ರ 46(20), ಅಜಿಂಕ್ಯ ರಹಾನೆ 12(12), ಶಿವಂ ದುಬೆ 51(23), ಸಮೀರ್ ರಿಜ್ವಿ 14(6), ಡೆರಿಲ್ ಮಿಚೆಲ್24(20) , ರವೀಂದ್ರ ಜಡೇಜಾ 7 (3) ರನ್ ಗಳನ್ನು ಹೊಡೆದರು. ಇದಕ್ಕೆ ವಿರುದ್ಧವಾಗಿ ಬೌಲಿಂಗ್ ಪ್ರದರ್ಶಿಸಿದ ಗುಜರಾತ್ ಟೈಟನ್ಸ್ ತಂಡದಲ್ಲಿ ರಶೀದ್ ಖಾನ್ 2, ರವಿ ಶ್ರೀನಿವಾಸ್ ಸಾಯಿ ಕಿಶೋರ್ 1, ಸ್ಪೆನ್ಸರ್ ಜಾನ್ಸನ್ 1 , ಮೋಹಿತ್ ಶರ್ಮ 1 ವಿಕೆಟ್ ಪಡೆದುಕೊಂಡರು.

36 ಎಸೆತಗಳಲ್ಲಿ 46 ರನ್ ಗಳಿಸಿದ ರುತುರಾಜ್ 1 ಸಿಕ್ಸ್, 5 ಫೋರ್ ಹಾಗೂ 23 ಎಸೆತಗಳಲ್ಲಿ 51 ರನ್ ಗಳಿಸಿದ ಶಿವಂ ದುಬೆ 5 ಸಿಕ್ಸ್ , 2 ಫೋರ್ ಹೊಡೆದು ಭರ್ಜರಿ ಮೊತ್ತವನ್ನು ನೀಡುವಲ್ಲಿ ಸಹಕಾರಿಯಾದರು. ಒಟ್ಟು 20 ಓವರ್ ಗಳಲ್ಲಿ ರನ್ ಗಳಿಸಿ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ಟೈಟಲ್ ತಂಡಕ್ಕೆ ಗುಜರಾತ್ ಟೈಟಲ್ ತಂಡಕ್ಕೆ 207ರನ್ ಗಳ ಗೆಲುವಿನ ಗುರಿಯನ್ನು ನೀಡಿತ್ತು.

ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ ಗುಜರಾತ್ ಟೈಟನ್ಸ್ ತಂಡದಿಂದ ಆರಂಭಿಕ ಬ್ಯಾಟ್ಸ್ಮನ್ ಗಳಾಗಿ ವೃದ್ಧಿಮಾನ್ ಸಹಾ 21(17), ಶುಭಮನ್ ಗಿಲ್ 8(5), ವಿಜಯ್ ಶಂಕರ್ 12(12), ಡೇವಿಡ್ ಮಿಲ್ಲರ್ 21(16), ಸಾಯಿ ಸುದರ್ಶನ್ 37(31), ಅಜ್ಮತುಲ್ಲಾ ಒಮರ್ಜಾಯ್ 11(10),  ರಶೀದ್ ಖಾನ್ 1(2), ರಾಹುಲ್ ತೆವಟಿಯಾ 6 (11), ಉಮೇಶ್ ಯಾದವ್ 10(11), ಸ್ಪೆನ್ಸರ್ ಜಾನ್ಸನ್ 5(5)  ರನ್ಗಳನ್ನು ಹೊಡೆದರು ಇದಕ್ಕೆ ವಿರುದ್ಧವಾಗಿ ಬೌಲಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ದೀಪಕ್ ಚಹಾರ್ 2,  ಡೇರಿಲ್ ಮಿಚಲ್ 1, ತುಷಾರ್ ದೇಶಪಾಂಡೆ 2, ಮತೀಶ ಪತಿರಾನ 1, ಮುಸ್ತಫಿಜುರ್ ರೆಹಮಾನ್ 2 ವಿಕೆಟ್ ಪಡೆದುಕೊಂಡರು. 

ಇದನ್ನು ಓದಿ :Megha Shetty : ವಿಭಿನ್ನವಾದ ಡ್ರೆಸ್ ನಲ್ಲಿ ಕೈವ ನಟಿ :  ಫೋಟೋಸ್ ವೈರಲ್ 

ಶಿವಂ ದುಬೆ,  ರುತುರಾಜ್ ಗಾಯಕ್ವಾಡ್ ಹಾಗೂ  ರಚಿನ್ ರವೀಂದ್ರ  ಮೂವರ ಭರ್ಜರಿ ಆಟದ ಪ್ರದರ್ಶನ ಮತ್ತು ದೀಪಕ್ ಚಹಾರ್, ತುಷಾರ್ ದೇಶಪಾಂಡೆ, ಮುಸ್ತಫಿಜುರ್ ರೆಹಮಾನ್ ತಲಾ 2 ವಿಕೆಟ್ ತೆಗೆದುಕೊಂಡು ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿಗೆ ಸಹಕಾರಿಯಾಯಿತು. ಚೆನ್ನೈ ಸೂಪರ್ ಕಿಂಗ್ಸ್  ತಂಡ  63 ರನ್ ಗಳ ಬಾರಿ ಅಂತರದಿಂದ ಗೆಲುವು ಸಾಧಿಸಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More