Home> Cricket T20 Series
Advertisement

ಕೆಕೆಆರ್‌ ಗೆ ಗುಡ್‌ ಬೈ ಹೇಳಿದ ಗೌತಮ್‌ ಗಂಭೀರ್‌..!

Gautam Gambhir: ಕೋಲ್ಕತ್ತಾ ನೈಟ್ ರೈಡರ್ಸ್ ಮೆಂಟರ್ ಗೌತಮ್ ಗಂಭೀರ್ ಟೀಮ್ ಇಂಡಿಯಾದ ಮುಂದಿನ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ಗಂಭೀರ್ ಅವರ ನೇಮಕಾತಿ ಈಗಾಗಲೇ ಪೂರ್ಣಗೊಂಡಿದೆ, ಈ ವಿಚರವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧಿಕೃತವಾಗಿ ಪ್ರಕಟಿವುದು ಅಷ್ಟೆ ಬಾಕಿ ಇದೆ. 
 

ಕೆಕೆಆರ್‌ ಗೆ ಗುಡ್‌ ಬೈ ಹೇಳಿದ ಗೌತಮ್‌ ಗಂಭೀರ್‌..!

Gautam Gambhir: ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮೆಂಟರ್ ಗೌತಮ್ ಗಂಭೀರ್ ಟೀಮ್ ಇಂಡಿಯಾದ ಮುಂದಿನ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ಗಂಭೀರ್ ಅವರ ನೇಮಕಾತಿ ಈಗಾಗಲೇ ಪೂರ್ಣಗೊಂಡಿದೆ, ಈ ವಿಚರವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧಿಕೃತವಾಗಿ ಪ್ರಕಟಿವುದು ಅಷ್ಟೆ ಬಾಕಿ ಇದೆ. 

ಜಲೈ ತಿಂಗಳ ಕೊನೆಯಲ್ಲಿ ಟೀಂ ಇಂಡಿಯಾ ಮೂರು ODI ಮತ್ತು T20I ಗಳಿಗಾಗಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಆ ವೇಳೆಗೆ ನೂತನ ಕೋಚ್ ಹೆಸರನ್ನು ಪ್ರಕಟಿಸಲಾಗುವುದು ಎಂದು ಬಿಸಿಸಿಐ (BCCI) ಕಾರ್ಯದರ್ಶಿ ಜೈಶಾ(Jai Sha) ತಿಳಿಸಿದ್ದಾರೆ ಎಂದು ವರದಿಯಾಗಿದೆ. ಶ್ರೀಲಂಕಾ ಪ್ರವಾಸದ ವೇಳೆ ರಾಹುಲ್ ದ್ರಾವಿಡ್ ಅವರ ಉತ್ತರಾಧಿಕಾರಿಯಾಗಿ ಗೌತಮ್ ಗಂಭೀರ್ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇದೇ ಕಾರಣದಿಂದಾಗಿ ಗೌತಮ್‌ ಗಂಭೀರ್ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮೆಂಟರ್ ಜವಾಬ್ದಾರಿಗೆ ವಿದಾಯ ಹೇಳಲಿದ್ದಾರೆ.

ತಮಗೆ ಪ್ರಶಸ್ತಿ ಗೆದ್ದು ಕೊಟ್ಟ ಗೌತಮ್‌ ಗೆ,  ಕೆಕೆಆರ್ ಮ್ಯಾನೇಜ್ ಮೆಂಟ್ ಅದ್ಧೂರಿಯಾಗಿ ಬೀಳ್ಕೊಡುವ ವ್ಯವಸ್ಥೆ ಮಾಡಿದೆ. ಐಕಾನಿಕ್ ಈಡನ್ ಗಾರ್ಡನ್ಸ್‌ನಲ್ಲಿ ಗಂಭೀರ್ ಅವರ ಬೀಳ್ಕೊಡುಗೆಗೆ ಕೆಕೆಆರ್ ಫ್ರಾಂಚೈಸಿ ಭಾರಿ ವ್ಯವಸ್ಥೆ ಮಾಡಿಕೊಂಡಿದೆ. 

ಇದನ್ನೂ ಓದಿ: IND vs ZIM: ರೋಹಿತ್‌ ಹಾಗೂ ಕೊಹ್ಲಿ ಕುರಿತು ಶುಭಮನ್‌ ಗಿಲ್‌ ಅಚ್ಚರಿಕೆಯ ಹೇಳಿಕೆ..! ಅಷ್ಟಕ್ಕೂ ಗಿಲ್‌ ಹೀಗಂದಿದ್ದೇಕೆ..?

ಐಪಿಎಲ್‌ನಲ್ಲಿ(IPL) ಸುದೀರ್ಘ ಕಾಲ ಕೆಕೆಆರ್ ಪರ ಆಡಿದ್ದ ಗಂಭೀರ್, 2012 ಮತ್ತು 2014ರ ಸೀಸನ್‌ಗಳಲ್ಲಿ ನಾಯಕತ್ವ ವಹಿಸಿದ್ದರು. ಸುದೀರ್ಘ ವಿರಾಮದ ನಂತರ ಕೆಕೆಆರ್ ತಂಡಕ್ಕೆ ಟೀಮ್ ಮೆಂಟರ್ ಆಗಿ ಕಮ್ ಬ್ಯಾಕ್ ಮಾಡಿದ್ದ ಗಂಭೀರ್, 2024ರ ಸೀಸನ್‌ನಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು.

ಐಪಿಎಲ್ ನಿಯಮಗಳ ಪ್ರಕಾರ ಒಂದೇ ಬಾರಿಗೆ ಎರಡು ತಂಡಗಳಿಗೆ ತರಬೇತಿ ನೀಡಲು ಸಾಧ್ಯವಿಲ್ಲ. ಹೀಗಾಗಿಯೇ ಗಂಭೀರ್ ಕೆಕೆಆರ್ ತೊರೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಶುಕ್ರವಾರ ನಡೆದ ಕೆಕೆಆರ್ ಫ್ರಾಂಚೈಸಿಯ ವಿದಾಯ ವಿಡಿಯೋ ಚಿತ್ರೀಕರಣದಲ್ಲಿ ಗಂಭೀರ್ ಭಾಗವಹಿಸಿದ್ದು, ಗಂಭೀರ್‌ ಕೆಕೆಆರ್ ಅಭಿಮಾನಿಗಳಿಗೆ ವಿಶೇಷವಾಗಿ ಧನ್ಯವಾದಗಳನ್ನು ಅರ್ಪಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More