Home> Sports
Advertisement

Pro Kabaddi League: ಮೊದಲಾರ್ಧ ಠುಸ್, ಸೆಕೆಂಡ್ ಆಫ್ ಬ್ಲ್ಯಾಸ್ಟ್ : ಯು ಮುಂಬಾಗೆ ತಿವಿದ ಗೂಳಿ

ಬೆಂಗಳೂರು ಬುಲ್ಸ್‌ ಪರ ಭರತ್‌ ರೈಡಿಂಗ್‌ನಲ್ಲಿ 16 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು. ಇನ್ನೊಂದೆಡೆ ವಿಕಾಸ್ ಕಂಡೋಲಾ 8 ಅಂಕಗಳನ್ನು ಗಳಿಸಿ ಅದ್ಭುತ ಜಯದಲ್ಲಿ ನೆರವಾದರು. ಸಕೆಂಡ್ ಆಫ್ ನಲ್ಲಿ ಬೆಂಗಳೂರು 31 ಅಂಕಗಳನ್ನು ಗಳಿಸಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು.

Pro Kabaddi League: ಮೊದಲಾರ್ಧ ಠುಸ್, ಸೆಕೆಂಡ್ ಆಫ್ ಬ್ಲ್ಯಾಸ್ಟ್ : ಯು ಮುಂಬಾಗೆ ತಿವಿದ ಗೂಳಿ

ಬೆಂಗಳೂರು: ಮೊದಲಾರ್ಧದಲ್ಲಿ 11-24 ಅಂತರದಲ್ಲಿ ಹಿನ್ನಡೆ ಕಂಡಿದ್ದ ಬೆಂಗಳೂರು ಬುಲ್ಸ್‌ ದ್ವಿತಿಯಾರ್ಧದಲ್ಲಿ ತನ್ನ ನೈಜ ಸಾಮರ್ಥ್ಯವನ್ನು ತೋರಿ ಯು ಮುಂಬಾ ವಿರುದ್ಧ 42-32 ಅಂತರದಲ್ಲಿ ಜಯ ಗಳಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿಯಿತು. ಗೂಳಿಗಳ ಆರ್ಭಟಕ್ಕೆ ಯು ಮುಂಬಾ ಆಟಗಾರರು ದ್ವಿತೀಯಾರ್ಧದಲ್ಲಿ ಕಕ್ಕಾಬಿಕ್ಕಿಯಾಗಿದ್ದಾರೆ.

ಇದನ್ನೂ ಓದಿ: T20 World Cup: T20 ವಿಶ್ವಕಪ್ ನಲ್ಲಿ ಭಾರತದ ಸೂಪರ್ 12 ವೇಳಾಪಟ್ಟಿಯ ಸಂಪೂರ್ಣ ವಿವರ

ಬೆಂಗಳೂರು ಬುಲ್ಸ್‌ ಪರ ಭರತ್‌ ರೈಡಿಂಗ್‌ನಲ್ಲಿ 16 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು. ಇನ್ನೊಂದೆಡೆ ವಿಕಾಸ್ ಕಂಡೋಲಾ 8 ಅಂಕಗಳನ್ನು ಗಳಿಸಿ ಅದ್ಭುತ ಜಯದಲ್ಲಿ ನೆರವಾದರು. ಸಕೆಂಡ್ ಆಫ್ ನಲ್ಲಿ ಬೆಂಗಳೂರು 31 ಅಂಕಗಳನ್ನು ಗಳಿಸಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು.

ದಿಟ್ಟ ಹೋರಾಟ ನೀಡಿದ ಬೆಂಗಳೂರು ಬುಲ್ಸ್‌ ಆರಂಭದಲ್ಲೇ ಯು ಮುಂಬಾ ತಂಡವನ್ನು ಆಲೌಟ್‌ ಮಾಡಿ 21 ಅಂಕಗಳೊಂದಿಗೆ ಸವಾಲು ಮುಂದುವರಿಸಿತು. 11 ನಿಮಿಷಗಳ ಪಂದ್ಯ ಬಾಕಿ ಇರುವಾಗ ಬೆಂಗಳೂರು ಎರಡನೇ ಬಾರಿ ಯು ಮುಂಬಾ ತಂಡವನ್ನು ಆಲೌಟ್‌ ಮಾಡಿ 29-27ರಲ್ಲಿ ಮುನ್ನಡೆ ಕಂಡಿತು. 10 ನಿಮಿಷಗಳ ಆಟದಲ್ಲಿ ಬೆಂಗಳೂರು ಬುಲ್ಸ್‌ 18 ಅಂಕಗಳನ್ನು ಗಳಿಸಿ ತಕ್ಕ ತಿರುಗೇಟು ನೀಡಿತು.

ಈ ಸಂದರ್ಭ ಭರತ್‌ ರೈಡಿಂಗ್‌ನಲ್ಲಿ 14 ಅಂಕಗಳನ್ನು ಗಳಿಸಿ ತಂಡದ ಮುನ್ನಡೆಗೆ ನೆರವಾದರು. ದ್ವಿತೀಯಾರ್ಧಲ್ಲಿ ಬೆಂಗಳೂರು ಬುಲ್ಸ್‌ ಮೂರನೇ ಬಾರಿಗೆ ಯು ಮುಂಬಾ ತಂಡವನ್ನು ಆಲೌಟ್‌ ಮಾಡುವ ಮೂಲಕ ಜಯ ಖಚಿತಪಡಿಸಿಕೊಂಡಿತು. ಭರತ್‌ 16 ರೈಡಿಂಗ್‌ ಅಂಕಗಳನ್ನು ಗಳಿಸುವುದರೊಂದಿಗೆ ಬೆಂಗಳೂರು ಬುಲ್ಸ್‌ 42-32 ಅಂತರದಲ್ಲಿ ಪಂದ್ಯ ಗೆದ್ದುಕೊಂಡಿತು. ಯು ಮುಂಬಾ ಪರ ಗುಮಾನ್‌ ಸಿಂಗ್‌ 11 ಅಂಕಗಳನ್ನು ಗಳಿಸಿದರು.

ಸತತ ಎರಡು ಪಂದ್ಯಗಳಲ್ಲಿ ಜಯ ಗಳಿಸಿ ಆತ್ಮವಿಶ್ವಾಸದಲ್ಲಿದ್ದ ಬೆಂಗಳೂರು ಬುಲ್ಸ್‌ ತಂಡ ಯು ಮುಂಬಾ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಯಿತು. ಯು ಮುಂಬಾ ಮೊದಲಾರ್ಧದಲ್ಲಿ 24-11 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು. ರೈಡಿಂಗ್‌ನಲ್ಲಿ ಗುಮಾನ್‌ ಸಿಂಗ್‌ 7 ಅಂಕಗಳನ್ನು ಗಳಿಸಿ ತಂಡದ ಮುನ್ನಡೆಯಲ್ಲಿ ಪ್ರಮುಖ ಪಾತ್ರವಹಿಸಿದರು.

ಯು ಮುಂಬಾ ತಂಡದ ಪ್ರತಿಯೊಬ್ಬ ಆಟಗಾರರೂ ಅಂಕ ಗಳಿಸಿರುವುದು ಪಂದ್ಯದ ವಿಶೇಷವಾಗಿತ್ತು. ಲೆಫ್ಟ್‌ ಕಾರ್ನರ್‌ನಲ್ಲಿ ಮೋಹಿತ್‌ ಹಾಗೂ ಸುರಿಂದರ್‌ ಸಿಂಗ್‌ ಒಟ್ಟು 4 ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು. ರೈಟ್‌ ಕಾರ್ನರ್‌ನಲ್ಲಿ ರಾಹುಲ್‌ ಸತ್ಪಾಲ್‌ 3 ಅಂಕಗಳನ್ನು ಗಳಿಸಿ ಬೆಂಗಳೂರು ಬುಲ್ಸ್‌ ತಂಡವನ್ನು ನಿಯಂತ್ರಿಸುವಲ್ಲಿ ಸಫಲರಾದರು.

ಇದನ್ನೂ ಓದಿ: Pro Kabaddi League: ಜಯದ ಖಾತೆ ತೆರೆದ ಪಾಟ್ನಾ ಪೈರೇಟ್ಸ್: ಪುಣೇರಿ ಪಲ್ಟನ್ ಗೆ ಗೆಲುವು

ಬೆಂಗಳೂರು ಬುಲ್ಸ್‌ ರೈಡಿಂಗ್‌ನಲ್ಲಿ ಕೇವಲ 9 ಅಂಕಗಳನ್ನು ಗಳಿಸಿತು. ಎರಡು ಬಾರಿ ಆಲೌಟ್‌ ಆಗುವ ಮೂಲಕ ಬೆಂಗಳೂರು ಬೃಹತ್‌ ಹಿನ್ನಡೆಗೆ ಕಾರಣವಾಯಿತು. ಟ್ಯಾಕಲ್‌ ವಿಭಾಗದಲ್ಲಿ ಬೆಂಗಳೂರು ಸಂಪೂರ್ಣವಿಫಲಗೊಂಡು ಕೇವಲ 2 ಅಂಕಗಳನ್ನು ಗಳಿಸಿತು. ಆದರೆ ಸೆಕೆಂಡ್ ಆಫ್ ಅದ್ಬುತ ಆಟ ಬೆಂಗಳೂರು ಬುಲ್ಸ್ ಗೆಲ್ಲಲು ಕಾರಣವಾಯಿತು.‌ನೆರೆದಿದ್ದ ಕಬ್ಬಡಿ ಪ್ರೇಮಿಗಳು ಹುಚ್ಚೆದ್ದು ಕುಣಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Read More