Home> Sports
Advertisement

Wrestlers Protest: ಅಮಿತ್ ಶಾ ಜೊತೆಗಿನ ಭೇಟಿ ಹಾಗೂ ನೌಕರಿಗೆ ಹಾಜರಾಗುವ ಕುರಿತು ಸ್ಪಷ್ಟನೆ ನೀಡಿದ ಬಜರಂಗ್ ಪುನೀಯಾ

Wreslters Protest: ಇತ್ತೀಚಿಗೆ ಖ್ಯಾತ ಕುಸ್ತಿಪಟು ಬಜರಂಗ್ ಪೂನಿಯಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಭೇಟಿಯಾಗಿ ನಂತರೆ ಭಾರತೀಯ ರೇಲ್ವೆಯಲ್ಲಿನ ತಮ್ಮ ಕೆಲಸಕ್ಕೆ ಹಾಜರಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಅವರು ಇಂದು ಉತ್ತರಿಸಿದ್ದಾರೆ.
 

Wrestlers Protest: ಅಮಿತ್ ಶಾ ಜೊತೆಗಿನ ಭೇಟಿ ಹಾಗೂ ನೌಕರಿಗೆ ಹಾಜರಾಗುವ ಕುರಿತು ಸ್ಪಷ್ಟನೆ ನೀಡಿದ ಬಜರಂಗ್ ಪುನೀಯಾ

Wreslters Protest: ದೇಶದ ಖ್ಯಾತ ಕುಸ್ತಿಪಟುಗಳಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಭಾರತೀಯ ರೇಲ್ವೆಯಲ್ಲಿ ತಮ್ಮ ಕರ್ತವ್ಯಕ್ಕೆ ಹಾಜರಾದ ಬಳಿಕ, ಅವರು ಭಾರತದ ಕುಸ್ತಿ ಫೆಡರೇಶನ್‌ನ ನಿರ್ಗಮಿತ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ತಮ್ಮ ಹೋರಾಟದಿಂದ ಹಿಂದಕ್ಕೆ ಸರಿದಿದ್ದಾರೆ ಎಂಬ ಊಹಾಪೋಹಗಳು ಸೃಷ್ಟಿಯಾಗಿದ್ದವು. ಈ ಸಂದರ್ಭದಲ್ಲಿ ಕುಸ್ತಿಪಟುಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಕುಸ್ತಿಪಟುಗಳು ಸರ್ಕಾರದೊಂದಿಗೆ ಹೊಂದಾಣಿಕೆಯನ್ನು ಮಾಡಿಕೊಂಡಿದ್ದಾರೆ ಎಂಬ ಊಹಾಪೋಹಗಳೂ ಕೂಡ ನಿರ್ಮಾಣಗೊಂಡಿದ್ದವು. ಆದರೆ ಒಲಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ ಇಂದು ಇಡೀ ಪರಿಸ್ಥಿತಿಯ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಕುಸ್ತಿಪಟುಗಳು ರೇಲ್ವೆಸ್ ನಲ್ಲಿನ ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂಬ ಸುದ್ದಿ ಪ್ರಕಟಗೊಂಡಿದ್ದು, ಶನಿವಾರ  ರಾತ್ರಿ ಅವರು ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿದ್ದಾರೆ. ಈ ಕುರಿತು ಖಾಸಗಿ ಸುದ್ದಿ ವಾಹಿನಿಯೊಂದಿಗೆ  ಮಾತನಾಡಿರುವ ಕುಸ್ತಿಪಟು ಬಜರಂಗ್ ಪುನಿಯಾ, ತಾವು ಮತ್ತು ತಮ್ಮ ಕೋಚ್ ಶನಿವಾರ ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲ ಇದರ ಹಿಂದೆ ಯಾವುದೇ ಸೆಟ್ಟಿಂಗ್ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇನ್ನೊಂದೆಡೆ, ಸರ್ಕಾರದ ಜನರು ಸಭೆಯ ಬಗ್ಗೆ ಹೊರಗೆ ಸಭೆಯ ಕುರಿತು ಮಾತನಾದದಂತೆ ಸೂಚಿಸಿದ್ದರು ಎಂದು ಪೂನಿಯಾ ಹೇಳಿದ್ದಾರೆ, ಆದರೆ ಅದೇ ಜನರು ಸಭೆಯ ಬಗ್ಗೆ ಹಿಂದಿನಿಂದ 'ಆಟಗಾರರು ಭೇಟಿಯಾಗಿದ್ದಾರೆ, ಈ ಸಂಗತಿಗಳು ನಡೆದಿವೆ' ಎಂದು ಹೇಳುತ್ತಿದ್ದಾರೆ. ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವರು ಭರವಸೆ ನೀಡಿದ್ದಾರೆ ಎಂದು ಪೂನಿಯಾ ಹೇಳಿದ್ದಾರೆ.

ಇದನ್ನೂ ಓದಿ-Wrestlers Protest: 'ನಮ್ಮ ಹೋರಾಟ ಬೃಜ್ ಭೂಷಣ್ ವಿರುದ್ಧ, ಸರ್ಕಾರದ ವಿರುದ್ಧ ಅಲ್ಲ' ಮುಂದಿನ ಕಾರ್ಯತಂತ್ರ ಸಿದ್ಧಪಡಿಸುತ್ತಿದ್ದೇವೆ ಎಂದ ಸಾಕ್ಷಿ ಮಲಿಕ್

ಆಂದೋಲನದ ಕಾರ್ಯತಂತ್ರದ ಬಗ್ಗೆ ಬಜರಂಗ್ ಪುನಿಯಾ ಹೇಳಿದ್ದೇನು?
ಇದರ ಜೊತೆಗೆ ಪೂನಿಯಾ, ‘ತಾವು ಆಂದೋಲನದಿಂದ ಹಿಂದೆ ಸರಿದಿಲ್ಲ, ಪ್ರತಿಭಟನೆ ಮುಂದುವರೆಯಲಿದೆ, ಅದು ಹೇಗೆ ಮುಂದುವರಿಯಬೇಕು ಎಂಬುದಕ್ಕೆ ಕಾರ್ಯತಂತ್ರ ರೂಪಿಸುತ್ತಿದ್ದೇವೆ’ ಎಂದಿದ್ದಾರೆ. ಕೆಲ ಸುದ್ದಿ ವಾಹಿನಿಗಳು ಆಟಗಾರರು ಪ್ರತಿಭಟನೆಯನ್ನು  ಹಿಂಪಡೆದಿದ್ದಾರೆ, ಅವರಲ್ಲಿಯೇ ಬಿರುಕು ಮೂಡಿದೆ, ಆಟಗಾರರೊಬ್ಬರು ತಮ್ಮ ಹೆಸರನ್ನೂ (ಸಾಕ್ಷಿ ಮಲಿಕ್) ಹಿಂಪಡೆದಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿವೆ. ನಿಮ್ಮಿಂದ ನಮ್ಮ ಪ್ರತಿಭಟನೆಯನ್ನು ತೋರಿಸಲು ಸಾಧ್ಯವಾಗದಿದ್ದರೆ, ಅದರ ನಕಾರಾತ್ಮಕತೆಯನ್ನು ತೋರಿಸಬೇಡಿ ಎಂದು ನಾನು ಸುದ್ದಿ ವಾಹಿನಿಗಳಿಗೆ ಮನವಿ ಮಾಡುತ್ತೇನೆ. ನಾವು ರೈಲ್ವೆ ನೌಕರರು ಎಂಬುದನ್ನೂ ಮರೆಯಬೇಡಿ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Wrestlers Protest: ಕುಸ್ತಿಪಟುಗಳ ಪ್ರತಿಭಟನೆ ಹಿಂಪಡೆತದ ಕುರಿತು ಸಾಕ್ಷಿ ಮಲಿಕ್ ಹೇಳಿದ್ದೇನು?

“ಆ ದಿನ ನಮ್ಮ ಪ್ರತಿಭಟನೆಯನ್ನು ಅಲ್ಲಿಂದ ಕದಲಿಸಿದಾಗ, 28 ರ ನಂತರ, ನಾವು ರಜೆ ತೆಗೆದುಕೊಂಡಿದ್ದರಿಂದ ನಾವು ಒಂದು ದಿನ ಹೋಗಿ ಕೆಲಸಕ್ಕೆ ಸಹಿ ಹಾಕಿದ್ದೇವೆ. ನಮ್ಮ ಈ ಹೋರಾಟದಲ್ಲಿ ರೈಲ್ವೇ ಕೆಲಸವೂ ಅಡ್ಡಿಯಾದರೆ ಎಲ್ಲವನ್ನೂ ಪಣಕ್ಕಿಟ್ಟು ಹೋರಾಡುತ್ತೇವೆ. ನಾವೂ ಕೆಲಸ ಬಿಡುತ್ತೇವೆ. ರೈಲ್ವೆ ಉದ್ಯೋಗಕ್ಕೆ ಸಂಬಂಧಿಸಿದಂತೆ ಸರಕಾರದಿಂದ ಯಾವುದೇ ಒತ್ತಡ ಬಂದಿಲ್ಲ ಎಂದು ಪುನೀಯಾ ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More