Home> Sports
Advertisement

ಶೂ ಮೇಲೆ ತನ್ನ ಇಬ್ಬರು ಹೆಣ್ಣು ಮಕ್ಕಳ ಹೆಸರು ಬರೆದುಕೊಂಡು ಮೈದಾನಕ್ಕಿಳಿದ ಖ್ಯಾತ ಕ್ರಿಕೆಟಿಗ ! ಕಾರಣ ಇದು

ಪಂದ್ಯದ ಮೊದಲ ದಿನದಂದು ಬ್ಯಾಟಿಂಗ್‌ ಇಳಿದಾಗ, ಈ ಆಟಗಾರ ಶೂಗಳ ಮೇಲೆ  ತಮ್ಮ ಇಬ್ಬರು ಹೆಣ್ಣುಮಕ್ಕಳ ಹೆಸರನ್ನು ಬರೆದು ಮೈದಾನಕ್ಕೆ  ಇಳಿದಿದ್ದಾರೆ. 
 

ಶೂ ಮೇಲೆ ತನ್ನ ಇಬ್ಬರು ಹೆಣ್ಣು ಮಕ್ಕಳ ಹೆಸರು ಬರೆದುಕೊಂಡು ಮೈದಾನಕ್ಕಿಳಿದ ಖ್ಯಾತ ಕ್ರಿಕೆಟಿಗ ! ಕಾರಣ ಇದು

Usman Khawaja : ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಉಸ್ಮಾನ್ ಖವಾಜಾ ಐಸಿಸಿ ವಿರುದ್ಧ ಏನಾದರೊಂದು ಕೃತ್ಯ ಮಾಡುತ್ತಲೇ ಇರುತ್ತಾರೆ. ಈ ಬ್ಯಾಟ್ಸ್‌ಮನ್ ಪಾಕಿಸ್ತಾನ ವಿರುದ್ಧದ ಸರಣಿಯ ಆರಂಭಿಕ ಟೆಸ್ಟ್ ಪಂದ್ಯದಲ್ಲಿ ತನ್ನ ತೋಳಿಗೆ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕೆ ಇಳಿದಿದ್ದರು.  ಈ ವರ್ತನೆಗೆ ICC ಅವರಿಗೆ ಛೀಮಾರಿ ಹಾಕಿತ್ತು. ಇದೀಗ ಈ ಬ್ಯಾಟ್ಸ್‌ಮನ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ಕೃತ್ಯಕ್ಕೆ ಕೈ ಹಾಕಿದ್ದಾರೆ. ಪಂದ್ಯದ ಮೊದಲ ದಿನದಂದು ಉಸ್ಮಾನ್ ಖವಾಜಾ ಬ್ಯಾಟಿಂಗ್‌ ಇಳಿದಾಗ, ಶೂಗಳ ಮೇಲೆ  ತಮ್ಮ ಇಬ್ಬರು ಹೆಣ್ಣುಮಕ್ಕಳ ಹೆಸರನ್ನು ಬರೆದು ಆಟಕ್ಕೆ ಇಳಿದಿದ್ದಾರೆ. 

ಇಲ್ಲಿಂದಲೇ ಆರಂಭವಾಗಿದ್ದು ಸಮರ : 

ಪರ್ತ್‌ನಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 360 ರನ್‌ಗಳ ವಿಜಯದ ಸಂದರ್ಭದಲ್ಲಿ ಉಸ್ಮಾನ್ ಖವಾಜಾ ತಮ್ಮ ತೋಳಿಗೆ ಕಪ್ಪು ಪಟ್ಟಿ ಧರಿಸಿಕೊಂಡು ಬಂದಿದ್ದರು. ಡಿಸೆಂಬರ್ 13 ರಂದು ಅಭ್ಯಾಸದ ವೇಳೆ  ಅವರ ಶೂಗಳ ಮೇಲೆ 'ಎಲ್ಲ ಜೀವಗಳು ಸಮಾನ' ಮತ್ತು 'ಸ್ವಾತಂತ್ರ್ಯ ಮಾನವ ಹಕ್ಕು' ಎಂದು ಬರೆದುಕೊಂಡಿದ್ದರು. ಆದರೆ ಐಸಿಸಿ  ಈ ಶೂ  ಧರಿಸದಂತೆ ನಿಷೇಧಿಸಿತ್ತು. ಇದನ್ನು ವಿರೋಧಿಸಿ ಪಂದ್ಯದ ವೇಳೆ ಉಸ್ಮಾನ್ ಕೈಗೆ ಕಪ್ಪು ಪಟ್ಟಿ ಧರಿಸಿ ಬಂದಿದ್ದರು.

ಇದನ್ನೂ ಓದಿ : IND vs SA 1st Test ಪ್ಲೇಯಿಂಗ್11 ಬಗ್ಗೆ ಬಾಯ್ಬಿಟ್ಟ ನಾಯಕ ರೋಹಿತ್ ! ಕಾಡಲಿದೆಯಂತೆ ಈ ಆಟಗಾರನ ಗೈರು

ಈ ಬೇಡಿಕೆಯನ್ನು ತಿರಸ್ಕರಿಸಿದ ಐಸಿಸಿ : 
ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಉಸ್ಮಾನ್ ಖವಾಜಾ ಅವರು ತಮ್ಮ ಬ್ಯಾಟ್ ಮತ್ತು ಶೂಗಳ ಮೇಲೆ ಪಾರಿವಾಳದ ಸ್ಟಿಕ್ಕರ್‌ ಹಾಕಿ ಆಡುವುದಾಗಿ  ಐಸಿಸಿಗೆ ಮನವಿ ಮಾಡಿದ್ದರು. ಆದರೆ ಅವರ ಬೇಡಿಕೆಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ತಿರಸ್ಕರಿಸಿದೆ. ಈ ಬಗ್ಗೆ ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಮೈಕಲ್ ಹೋಲ್ಡಿಂಗ್ ಕೂಡಾ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಐಸಿಸಿಯ ಈ ವರ್ತನೆಯನ್ನು ಬೂಟಾಟಿಕೆ ಎಂದು ಅವರು ಕರೆದಿದ್ದಾರೆ. ಮತ್ತೊಂದೆಡೆ, ಉಸ್ಮಾನ್  ಪಾರಿವಾಳದ ಸ್ಟಿಕ್ಕರ್ ಬಳಸುವುದಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಯಾವುದೇ ತೊಂದರೆ ಇರಲಿಲ್ಲ. ESPN Cricinfo ವರದಿಯ ಪ್ರಕಾರ, ಖವಾಜಾ ಅವರು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ತಮ್ಮ ಬ್ಯಾಟ್ ಮತ್ತು ಶೂಗಳ ಮೇಲೆ ಲೋಗೋವನ್ನು ಹಾಕುವ ಮೊದಲು ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಆಸ್ಟ್ರೇಲಿಯನ್ ಕ್ರಿಕೆಟಿಗರ ಸಂಘದೊಂದಿಗೆ ಮಾತನಾಡಿದ್ದರು. ಗ್ರೀನ್ ಸಿಗ್ನಲ್ ನೀಡಿದ ಬಳಿಕ ಅಭ್ಯಾಸ ಆರಂಭಿಸಿದ್ದರು. 

ಈಗ ಶೂ ಮೇಲೆ ಮಕ್ಕಳ ಹೆಸರು : 
ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್‌ನ ಮೊದಲ ದಿನದಂದು ಬ್ಯಾಟಿಂಗ್ ಮಾಡುತ್ತಿದ್ದ ಉಸ್ಮಾನ್ ಖವಾಜಾ ಅವರ ಶೂಗಳ ಮೇಲೆ ಅವರ ಹೆಣ್ಣುಮಕ್ಕಳ ಹೆಸರನ್ನು ಬರೆದಿದ್ದಾರೆ. ಅವರ ಶೂವಿನ ಮೇಲೆ  'ಆಯೇಷಾ' ಮತ್ತು 'ಐಲಾ' ಎಂದು ಬರೆಯಲಾಗಿತ್ತು. ಇವರಿಬ್ಬರೂ ಉಸ್ಮಾನ್ ಖ್ವಾಜಾ ಅವರ ಪುತ್ರಿಯರು. ಕ್ರಿಕೆಟ್ ಡಾಟ್ ಕಾಮ್ ಡೋರ್ ಎಯು ಎಂಬ ಹೆಸರಿನೊಂದಿಗಿನ  ಶೂಗಳ ಫೋಟೋವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತದ ಈ ಮೂವರು ನಾಯಕರು ಮಾತ್ರ ಟೆಸ್ಟ್ ಪಂದ್ಯ ಗೆದ್ದಿರೋದು…

42 ರನ್‌ ಗಳಿಸಿ ಔಟ್ : 
ಈ ಪಂದ್ಯದಲ್ಲಿ ಪಾಕಿಸ್ತಾನ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆಸ್ಟ್ರೇಲಿಯಾ ಆರಂಭಿಕರಾದ ಉಸ್ಮಾನ್ ಖವಾಜಾ ಮತ್ತು ಡೇವಿಡ್ ವಾರ್ನರ್ ಉತ್ತಮ ಆರಂಭ ನೀಡಿದರು. ಇವರಿಬ್ಬರ ನಡುವೆ ಮೊದಲ ವಿಕೆಟ್‌ಗೆ 90 ರನ್‌ಗಳ ಜೊತೆಯಾಟವಿತ್ತು. ಡೇವಿಡ್ ವಾರ್ನರ್ 38 ರನ್ ಗಳಿಸಿ ಔಟಾದರು. ಮೊದಲ ಅವಧಿಯವರೆಗೂ ಉಸ್ಮಾನ್ 36 ರನ್ ಗಳಿಸಿ ಅಜೇಯರಾಗಿದ್ದರು. ಆದರೆ, ಊಟದ ನಂತರ ಹೆಚ್ಚು ಹೊತ್ತು ಬ್ಯಾಟಿಂಗ್ ಮಾಡಲು ಸಾಧ್ಯವಾಗದೆ 42ರಲ್ಲಿ ವಿಕೆಟ್ ಪಡೆದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More