Home> Sports
Advertisement

ವಾಮಿಕಾ ಜನಿಸಿದ ಬಳಿಕ ನಮ್ಮ ಬದುಕಲ್ಲಿ ಹೀಗಾಯ್ತು... ಮಗಳ ಬಗ್ಗೆ ಅನುಷ್ಕಾ ಶರ್ಮಾ ಹೇಳಿಕೆ ವೈರಲ್

Anushka Sharma Statement: ಇತ್ತೀಚೆಗೆಯಷ್ಟೇ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅನುಷ್ಕಾ ಪೋಷಕರಾದ ಬಳಿಕ ತಮ್ಮ ಜೀವನ ಹೇಗಿದೆ ಎಂಬುದರ ಬಗ್ಗೆ ಮಾತನಾಡಿದ್ದಾರೆ.  

ವಾಮಿಕಾ ಜನಿಸಿದ ಬಳಿಕ ನಮ್ಮ ಬದುಕಲ್ಲಿ ಹೀಗಾಯ್ತು... ಮಗಳ ಬಗ್ಗೆ ಅನುಷ್ಕಾ ಶರ್ಮಾ ಹೇಳಿಕೆ ವೈರಲ್

Anushka Sharma Statement: ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ದೇಶದ ಅತ್ಯಂತ ಪ್ರಸಿದ್ಧ ಜೋಡಿ ಎಂಬುದು ತಿಳಿದ ಸಂಗತಿ. ಅವರ ಪರಸ್ಪರ ತಿಳುವಳಿಕೆಯೇ ಅಭಿಮಾನಿಗಳು ಅವರನ್ನು ತುಂಬಾ ಪ್ರೀತಿಸಲು ಕಾರಣ. ಇನ್ನು ಅನುಷ್ಕಾ ಶರ್ಮಾ ಪೋಷಕರಾದ ನಂತರ ತನ್ನ ಜೀವನದಲ್ಲಿ ಆದ ಬದಲಾವಣೆಗಳ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಟಿ20 ಸ್ವರೂಪದಲ್ಲಿ ತ್ರಿಶತಕ ಬಾರಿಸಿದ ವಿಶ್ವದ ಏಕೈಕ ಕ್ರಿಕೆಟಿಗ ಯಾರು ಗೊತ್ತಾ? ಇವರು ಭಾರತದವರೇ...

ಇತ್ತೀಚೆಗೆಯಷ್ಟೇ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅನುಷ್ಕಾ ಪೋಷಕರಾದ ಬಳಿಕ ತಮ್ಮ ಜೀವನ ಹೇಗಿದೆ ಎಂಬುದರ ಬಗ್ಗೆ ಮಾತನಾಡಿದ್ದಾರೆ.

ವಿರಾಟ್ ಮತ್ತು ನಾನು ತಂದೆ-ತಾಯಿಯಾಗಿ ನಮ್ಮ ಮಕ್ಕಳಿಗೆ ಎಷ್ಟು ಸಾಧ್ಯವೋ ಅಷ್ಟು ಮಾಡಲು ಪ್ರಯತ್ನಿಸುತ್ತಿದ್ದೇವೆ. ನಾವಿಬ್ಬರೂ ಅಡುಗೆ ಮಾಡಿ ಅವರಿಗೆ ಕೊಡುತ್ತೇವೆ, ನನ್ನ ತಾಯಿಯ ಸೂಚನೆಯಂತೆ ಮಕ್ಕಳಿಗೆ ಕೆಲವು ಹಳೆಯ ಕಾಲದ ಆಹಾರಗಳನ್ನು ತಯಾರಿಸಿಯೂ ಕೊಡುತ್ತಿದ್ದೇನೆ ಎಂದು ಅನುಷ್ಕಾ ಹೇಳಿದ್ದಾರೆ.

ಮಕ್ಕಳ ಆಗಮನದ ನಂತರ ಜೀವನದಲ್ಲಿ ದೊಡ್ಡ ಬದಲಾವಣೆಗಳಾಗಿವೆ ಎಂದು ಅನುಷ್ಕಾ ಹೇಳಿದ್ದಾರೆ. "ನಾವು ಹೇಗೆ ಬದುಕುತ್ತೇವೆ ಎಂಬುದನ್ನು ಮಕ್ಕಳು ಕಲಿಯುತ್ತಾರೆ. ಮಕ್ಕಳು ಏನು ನೋಡುತ್ತಾರೆ ಮತ್ತು ಗಮನಿಸುತ್ತಾರೆ.. ಅದನ್ನೇ ಅನುಸರಿಸುತ್ತಾರೆ. ನನ್ನ ಮಗಳು ತುಂಬಾ ಚಿಕ್ಕವಳು. ಹಾಗಾಗಿ ಆಕೆಗೆ ಈಗ ಏನನ್ನೂ ಕಲಿಸಬೇಕೆಂದು ನನಗೆ ತಿಳಿದಿಲ್ಲ. ನಾವು ನಮ್ಮ ಜೀವನವನ್ನು ಹೇಗೆ ನಡೆಸುತ್ತೇವೆ ಎಂಬುದು ಮುಖ್ಯ" ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ: ಇಷ್ಟೊಂದು ಹತ್ತಿರದಿಂದ ಚಂದ್ರನನ್ನು ಎಂದಾದರೂ ನೋಡಿದ್ದೀರಾ? ಅದ್ಭುತ ಕ್ಷಣದ ದೃಶ್ಯ ನೋಡಿ

ಮಕ್ಕಳು ಸ್ವಂತವಾಗಿ ಕಲಿಯಲು ಅವಕಾಶ ಮಾಡಿಕೊಡಿ ಮತ್ತು ಅಗತ್ಯವಿದ್ದಾಗ ಅವರಿಗೆ ಮೃದುವಾಗಿ ಮಾರ್ಗದರ್ಶನ ನೀಡಿ. ಪೋಷಕರು ತಮ್ಮ ಮಕ್ಕಳಿಗೆ ಮಾದರಿಯಾಗಿ ಬದುಕುವುದು ಬಹಳ ಮುಖ್ಯ ಎಂದು ಅನುಷ್ಕಾ ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More