Home> Sports
Advertisement

ಒಂದೇ ಓವರ್ ನಲ್ಲಿ 3 ನೋ ಬಾಲ್.. ಸ್ಟಾರ್‌ ಬೌಲರ್‌ ವಿರುದ್ಧ ಫಿಕ್ಸಿಂಗ್ ಆರೋಪ!

Shoaib Malik‌ match fixing allegation: ಒಂದೇ ಓವರ್‌ನಲ್ಲಿ ಮೂರು ನೋ ಬಾಲ್‌ ಹಾಕಿದ ಹಿನ್ನೆಲೆ ಫಿಕ್ಸಿಂಗ್ ಮಾಡಿರುವ ಆರೋಪ ಸ್ಟಾರ್‌ ಬೌಲರ್‌ ಮೇಲೆ ಕೇಳಿಬಂದಿದೆ. ಶಿಸ್ತು ಉಲ್ಲಂಘನೆಯಿಂದಾಗಿ ಬಿಪಿಎಲ್ ಒಪ್ಪಂದವನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.  

ಒಂದೇ ಓವರ್ ನಲ್ಲಿ 3 ನೋ ಬಾಲ್.. ಸ್ಟಾರ್‌ ಬೌಲರ್‌ ವಿರುದ್ಧ ಫಿಕ್ಸಿಂಗ್ ಆರೋಪ!

Shoaib Malik‌ : ಪಾಕಿಸ್ತಾನದ ಸ್ಟಾರ್ ಆಟಗಾರ ಶೋಯೆಬ್ ಮಲಿಕ್ ಆರೋಪದಲ್ಲಿ ಸಿಲುಕಿದ್ದಾರೆ. ಈ ಹಿನ್ನೆಲೆ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್) ಒಪ್ಪಂದವನ್ನು ರದ್ದುಗೊಳಿಸಲಾಗಿದೆ ಎಂಬ ವದಂತಿಗಳು ಶುರುವಾಗಿವೆ. ಶೋಯೆಬ್ ಮಲಿಕ್ ಫಾರ್ಚೂನ್ ಬಾರಿಶನ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಮ

ಫಾರ್ಚೂನ್ ಬಾರಿಶನ್ ಮತ್ತು ಖುಲ್ನಾ ಟೈಗರ್ಸ್ ನಡುವಿನ ಪಂದ್ಯದಲ್ಲಿ, ಶೋಯೆಬ್ ಮಲಿಕ್ ಬೌಲ್ ಮಾಡಿದ ಓವರ್ ಅನ್ನು ಫಿಕ್ಸಿಂಗ್ ಮಾಡಿಕೊಂಡ ಆರೋಪವಿದೆ. ಈ ಓವರ್‌ನಲ್ಲಿ ಮಲಿಕ್ 18 ರನ್ ನೀಡಿದರು. ಇದರಲ್ಲಿ ಎವಿನ್ ಲೂಯಿಸ್ ಒಂದು ಸಿಕ್ಸರ್, ಒಂದು ಬೌಂಡರಿ ಬಾರಿಸಿದರು. ಇದೇ ಓವರ್‌ನಲ್ಲಿ ಮೂರು ನೋ ಬಾಲ್ ಹಾಕಿದರು. ಇದರೊಂದಿಗೆ ಫಾರ್ಚೂನ್ ಬಾರಿಶನ್ ನೀಡಿದ್ದ 188 ರನ್ ಗಳ ಗುರಿಯನ್ನು ಖುಲ್ನಾ ಟೈಗರ್ಸ್ ಇನ್ನೆರಡು ಓವರ್ ಬಾಕಿ ಇರುವಾಗಲೇ ಮುಟ್ಟಿತು. 

ಶೋಯೆಬ್ ಮಲಿಕ್‌ ಬೌಲ್ ಮಾಡಿದ ಓವರ್ ವಿವಾದಾಸ್ಪದವಾಗಿತ್ತು. ಶೋಯೆಬ್‌ ಮೂರು ನೋ ಬಾಲ್‌ಗಳನ್ನು ಎಸೆದರು. ಫಿಕ್ಸಿಂಗ್‌ ಮಾಡಿಕೊಂಡ ಕಾರಣ ಶೋಯೆಬ್‌ ಮಲಿಕ್ ಇಂತಹ ನೋಬಾಲ್ ಗಳನ್ನು ಎಸೆದಿರುವ ಶಂಕೆ ವ್ಯಕ್ತವಾಗುತ್ತಿದೆ. ಇದಲ್ಲದೆ, ಈ ಸೀಸನ್‌ನಲ್ಲಿ ಬಿಪಿಎಲ್‌ನಲ್ಲಿ ಕೇವಲ ಮೂರು ಪಂದ್ಯಗಳನ್ನು ಆಡಿರುವ ಶೋಯೆಬ್ ಮಲಿಕ್‌, ತಮ್ಮ ಪತ್ನಿ ಸನಾ ಜಾವೇದ್ ಅವರೊಂದಿಗೆ ಸಮಯ ಕಳೆಯಲು ರಜೆ ಕೋರಿದ್ದಾರೆ. 

ಇದನ್ನೂ ಓದಿ: Viral Video: ವಿಕೆಟ್ ಪಡೆದು ವಿಚಿತ್ರವಾಗಿ ಸಂಭ್ರಮಿಸಿದ ವೆಸ್ಟ್ ಇಂಡೀಸ್ ಬೌಲರ್..! 

ಆರೋಪಗಳನ್ನು ಸರಿಪಡಿಸುವ ಜತೆಗೆ ಶಿಸ್ತು ಕ್ರಮಗಳನ್ನು ಉಲ್ಲಂಘಿಸಿರುವುದರಿಂದ ಬಿಪಿಎಲ್ ಒಪ್ಪಂದ ರದ್ದುಪಡಿಸಲಾಗಿದೆ ಎಂದು ತಿಳಿದುಬಂದಿದೆ. ಫಿಕ್ಸಿಂಗ್ ಆರೋಪ ನಿಜವೆಂದು ಕಂಡುಬಂದರೆ ಮಲಿಕ್ ಅಂತರಾಷ್ಟ್ರೀಯ ಕ್ರಿಕೆಟ್ ನಿಂದಲೂ ದೂರವಾಗುವ ಸಾಧ್ಯತೆ ಇದೆ. 2010ರಲ್ಲಿ ಪಿಸಿಬಿಯಲ್ಲಿ ಅನುಚಿತ ಕಾಮೆಂಟ್ ಮಾಡಿದ್ದಕ್ಕಾಗಿ ಅವರನ್ನು ಒಂದು ವರ್ಷ ಅಮಾನತು ಮಾಡಲಾಗಿತ್ತು. ಸಾನಿಯಾ ಮಿರ್ಜಾ ಜೊತೆಗಿನ ವೈವಾಹಿಕ ಜೀವನಕ್ಕೆ ವಿದಾಯ ಹೇಳಿರುವ ಮಲಿಕ್ ಇತ್ತೀಚೆಗಷ್ಟೇ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವರಿಸಿದ್ದು ಗೊತ್ತೇ ಇದೆ. 2

ಬಿಪಿಎಲ್ ಒಪ್ಪಂದವನ್ನು ರದ್ದುಗೊಳಿಸಲಾಗಿದೆ ಎಂಬ ವದಂತಿಗಳ ಬಗ್ಗೆ ಶೋಯೆಬ್ ಮಲಿಕ್ ಪ್ರತಿಕ್ರಿಯಿಸಿದ್ದಾರೆ. ನಾಯಕ ತಮೀಮ್ ಇಕ್ಬಾಲ್ ಅವರೊಂದಿಗೆ ಮಾತನಾಡುವುದಿಲ್ಲ ಎಂದು ಹೇಳಿದರು. ತಂಡಕ್ಕೆ ಅಗತ್ಯವಿದ್ದಲ್ಲಿ ಬೆಂಬಲ ನೀಡಲು ಸಿದ್ಧ ಎಂದು ಹೇಳಿದರು. ಆಧಾರರಹಿತ ವದಂತಿಗಳನ್ನು ನಿರಾಕರಿಸಿದ ಶೋಯೆಬ್‌ ಮಲಿಕ್, ಖ್ಯಾತಿಗೆ ಧಕ್ಕೆ ತರುವಂತಹ ಸುಳ್ಳು ಮಾಹಿತಿಯನ್ನು ಹರಡದಂತೆ ಕೇಳಿಕೊಂಡರು.

ಇದನ್ನೂ ಓದಿ: ಭಾರತೀಯ ಸ್ಪಿನ್ನರ್ ಗಳ ಕೈಚಳಕಕ್ಕೆ ಇಂಗ್ಲೆಂಡ್ 246ಕ್ಕೆ ಆಲೌಟ್, ಟೀಮ್ ಇಂಡಿಯಾ ಶುಭಾರಂಭ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More