Home> Sports
Advertisement

T20 World Cup: ಸೆಮಿಫೈನಲ್’ಗೂ ಮುನ್ನ ಟೀಂ ಇಂಡಿಯಾಗೆ ಶಾಕ್: ಹರ್ಮನ್ ಸೇರಿ ಇಬ್ಬರು ಆಟಗಾರರು ಪಂದ್ಯದಿಂದ ಹೊರಕ್ಕೆ!

Indian Cricket team: ಸೆಮಿಫೈನಲ್ ಪಂದ್ಯದ ಮೊದಲು, ಭಾರತದ ಇಬ್ಬರು ಮಹಿಳಾ ಕ್ರಿಕೆಟಿಗರು ಪಂದ್ಯದಿಂದ ಹೊರಗುಳಿಯುವ ಅಪಾಯದಲ್ಲಿದ್ದರು. ಆದರೆ ಒಬ್ಬ ಆಟಗಾರ್ತಿಯ ಬಗ್ಗೆ ಬಿಸಿಸಿಐ ಅಪ್‌ಡೇಟ್ ನೀಡಿದೆ. ಬೌಲರ್ ಪೂಜಾ ವಸ್ತ್ರಾಕರ್ ಅನಾರೋಗ್ಯದ ಕಾರಣದಿಂದ ಪಂದ್ಯದಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಆದರೆ, ಕ್ಯಾಪ್ಟನ್ ಹರ್ಮನ್‌ಪ್ರೀತ್ ಕೌರ್ ಬಗ್ಗೆ ಇನ್ನೂ ಯಾವುದೇ ಅಪ್‌ಡೇಟ್ ಸಿಕ್ಕಿಲ್ಲ ಇಲ್ಲ.

T20 World Cup: ಸೆಮಿಫೈನಲ್’ಗೂ ಮುನ್ನ ಟೀಂ ಇಂಡಿಯಾಗೆ ಶಾಕ್: ಹರ್ಮನ್ ಸೇರಿ ಇಬ್ಬರು ಆಟಗಾರರು ಪಂದ್ಯದಿಂದ ಹೊರಕ್ಕೆ!

Indian Cricket team: ವಿಶ್ವಕಪ್‌ನ ಸೆಮಿಫೈನಲ್ ಪಂದ್ಯವು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಫೆಬ್ರವರಿ 23 ರಂದು ಅಂದರೆ ಇಂದು ಸಂಜೆ ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಕೆಟ್ಟ ಸುದ್ದಿ ತಂದಿದೆ. ಬಿಸಿಸಿಐ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ಈ ಪಂದ್ಯದಲ್ಲಿ ಭಾರತ ತಂಡದ ಇಬ್ಬರು ಆಟಗಾರರು ಆಡಲು ಸಾಧ್ಯವಿಲ್ಲ. ಹೀಗಿರುವಾಗ ಪಂದ್ಯಕ್ಕೂ ಮುನ್ನವೇ ಭಾರತ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ.

ಇದನ್ನೂ ಓದಿ: IND vs AUS : ಈ ಆಟಗಾರನಿಗೆ ವಿಲನ್ ಆದ ಕ್ಯಾಪ್ಟನ್ ರೋಹಿತ್! Playing 11ನಲ್ಲಿ ಕೊಡ್ತಿಲ್ಲ ಒಂದೇ ಒಂದು ಅವಕಾಶ

ಸೆಮಿಫೈನಲ್ ಪಂದ್ಯದ ಮೊದಲು, ಭಾರತದ ಇಬ್ಬರು ಮಹಿಳಾ ಕ್ರಿಕೆಟಿಗರು ಪಂದ್ಯದಿಂದ ಹೊರಗುಳಿಯುವ ಅಪಾಯದಲ್ಲಿದ್ದರು. ಆದರೆ ಒಬ್ಬ ಆಟಗಾರ್ತಿಯ ಬಗ್ಗೆ ಬಿಸಿಸಿಐ ಅಪ್‌ಡೇಟ್ ನೀಡಿದೆ. ಬೌಲರ್ ಪೂಜಾ ವಸ್ತ್ರಾಕರ್ ಅನಾರೋಗ್ಯದ ಕಾರಣದಿಂದ ಪಂದ್ಯದಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಆದರೆ, ಕ್ಯಾಪ್ಟನ್ ಹರ್ಮನ್‌ಪ್ರೀತ್ ಕೌರ್ ಬಗ್ಗೆ ಇನ್ನೂ ಯಾವುದೇ ಅಪ್‌ಡೇಟ್ ಸಿಕ್ಕಿಲ್ಲ ಇಲ್ಲ.

ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ವೇಗದ ಬೌಲರ್ ಪೂಜಾ ವಸ್ತ್ರಾಕರ್ ನಿನ್ನೆ ಹಠಾತ್ ಅಸ್ವಸ್ಥರಾಗಿದ್ದರು. ನಂತರ ಇಬ್ಬರನ್ನೂ ಕೇಪ್ ಟೌನ್‌ನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸ್ವಲ್ಪ ಸಮಯದ ನಂತರ ಅವರನ್ನು ಅಲ್ಲಿಂದ ಡಿಸ್ಚಾರ್ಜ್ ಕೂಡ ಮಾಡಲಾಗಿತ್ತು. ಆದರೆ ಇಬ್ಬರೂ ಆಟಗಾರರು ಇನ್ನೂ ಪಂದ್ಯಕ್ಕೆ ಸಂಪೂರ್ಣವಾಗಿ ಫಿಟ್ ಆಗಿಲ್ಲ ಎಂದು ಹೇಳಲಾಗುತ್ತಿದೆ.

ವಸ್ತ್ರಾಕರ್ ಬದಲಿಗೆ ಈ ಆಟಗಾರ್ತಿಗೆ ಅವಕಾಶ:

ಪೂಜಾ ವಸ್ತ್ರಾಕರ್ ಬದಲಿಗೆ ಸ್ನೇಹ ರಾಣಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸ್ನೇಹ ರಾಣಾ ಕೂಡ ಭಾರತ ತಂಡಕ್ಕೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಭಾರತ ಪರ ಆಡುತ್ತಿರುವ ಸ್ನೇಹ ರಾಣಾ ಒಟ್ಟು 47 ಪಂದ್ಯಗಳನ್ನು ಆಡಿದ್ದು, ಈ ಪೈಕಿ 24 ಟಿ20 ಪಂದ್ಯಗಳನ್ನೂ ಆಡಿದ್ದಾರೆ.

ಇದನ್ನೂ ಓದಿ: Team India: ಟೀಂ ಇಂಡಿಯಾದ ಈ ಆಟಗಾರನ ವೃತ್ತಿಜೀವನ ಅಂತ್ಯ!?

ಒಂದು ವೇಳೆ ಹರ್ಮನ್‌ಪ್ರೀತ್ ಕೌರ್ ತಂಡದಿಂದ ಹೊರಗುಳಿದರೆ, ಅವರ ಅನುಪಸ್ಥಿತಿಯಲ್ಲಿ ತಂಡದ ನಾಯಕಿ ಯಾರು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಒಂದೋ ಬಿಸಿಸಿಐ ಪಂದ್ಯದ ಮೊದಲು ಈ ಬಗ್ಗೆ ತಿಳಿಸುತ್ತದೆ, ಇಲ್ಲದಿದ್ದರೆ ಯಾರು ಎಂದು ಟೀಮ್ ಟಾಸ್ ಸಮಯದಲ್ಲಿ ತಿಳಿಯುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More