Home> Sports
Advertisement

6,6,6,1,6,N1,6... 1 ಓವರ್-33 ರನ್! ಈ ಸೂಪರ್ ಬ್ಯಾಟ್ಸ್’ಮನ್ ಖದರ್’ಗೆ ನಡುಗಿದ ಎದುರಾಳಿ! ವಿಡಿಯೋ ನೋಡಿ

Cricket News: ಈ ಪಂದ್ಯದಲ್ಲಿ ನೆಲ್ಲೈ ರಾಯಲ್ ಕಿಂಗ್ಸ್ 7 ವಿಕೆಟ್‌ ಗಳಿಂದ ದಿಂಡಿಗಲ್ ಡ್ರ್ಯಾಗನ್‌ ತಂಡವನ್ನು ಸೋಲಿಸಿತು, ಇದರಲ್ಲಿ ಇಬ್ಬರು ಬ್ಯಾಟ್ಸ್‌ಮನ್‌ ಗಳಾದ ರಿತಿಕ್ ಈಶ್ವರನ್ ಮತ್ತು ಅಜಿತೇಶ್ ಗುರುಸ್ವಾಮಿ ಪ್ರಮುಖ ಪಾತ್ರ ವಹಿಸಿದ್ದಾರೆ.

6,6,6,1,6,N1,6... 1 ಓವರ್-33 ರನ್! ಈ ಸೂಪರ್ ಬ್ಯಾಟ್ಸ್’ಮನ್ ಖದರ್’ಗೆ ನಡುಗಿದ ಎದುರಾಳಿ! ವಿಡಿಯೋ ನೋಡಿ

Cricket News: ತಮಿಳುನಾಡು ಪ್ರೀಮಿಯರ್ ಲೀಗ್ (TNPL) ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದೆ. ಸೋಮವಾರ ತಮಿಳುನಾಡು ಪ್ರೀಮಿಯರ್ ಲೀಗ್‌ ನಲ್ಲಿ (ಟಿಎನ್‌ಪಿಎಲ್) ನಡೆದ ಕ್ವಾಲಿಫೈಯರ್-2 ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್‌ ನ ಎಲ್ಲಾ ಮಿತಿಗಳನ್ನು ಮೀರಿ ಹೋಗಿದೆ. ಸೋಮವಾರ ನೆಲ್ಲೈ ರಾಯಲ್ ಕಿಂಗ್ಸ್ ಮತ್ತು ದಿಂಡಿಗಲ್ ಡ್ರಾಗನ್ಸ್ ನಡುವೆ ನಡೆದ ತಮಿಳುನಾಡು ಪ್ರೀಮಿಯರ್ ಲೀಗ್ ಕ್ವಾಲಿಫೈಯರ್-2 ಪಂದ್ಯದಲ್ಲಿ ಇಬ್ಬರು ಬ್ಯಾಟ್ಸ್‌ಮನ್‌ಗಳು ತಮ್ಮ ಬಿರುಸಿನ ಬ್ಯಾಟಿಂಗ್‌ ನಿಂದ ವಿಧ್ವಂಸಕತೆ ಸೃಷ್ಟಿಸಿದ್ದಾರೆ.

ಇದನ್ನೂ ಓದಿ: Astro Tips: ಪೊರಕೆಯ ಈ ವಾಸ್ತು ನಿಯಮ ಪಾಲಿಸಿದ್ರೆ ಬಡವರೂ ಶ್ರೀಮಂತರಾಗುತ್ತಾರೆ!

ಈ ಪಂದ್ಯದಲ್ಲಿ ನೆಲ್ಲೈ ರಾಯಲ್ ಕಿಂಗ್ಸ್ 7 ವಿಕೆಟ್‌ ಗಳಿಂದ ದಿಂಡಿಗಲ್ ಡ್ರ್ಯಾಗನ್‌ ತಂಡವನ್ನು ಸೋಲಿಸಿತು, ಇದರಲ್ಲಿ ಇಬ್ಬರು ಬ್ಯಾಟ್ಸ್‌ಮನ್‌ ಗಳಾದ ರಿತಿಕ್ ಈಶ್ವರನ್ ಮತ್ತು ಅಜಿತೇಶ್ ಗುರುಸ್ವಾಮಿ ಪ್ರಮುಖ ಪಾತ್ರ ವಹಿಸಿದ್ದಾರೆ.

 

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಿಂಡಿಗಲ್ ಡ್ರಾಗನ್ಸ್ ತಂಡವು 20 ಓವರ್‌ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿ ನೆಲ್ಲೈ ರಾಯಲ್ ಕಿಂಗ್ಸ್ ಗೆಲುವಿಗೆ 186 ರನ್ ಗಳ ಗುರಿ ನೀಡಿತು. ಗುರಿ ಬೆನ್ನಟ್ಟಿದ ನೆಲ್ಲೈ ರಾಯಲ್ ಕಿಂಗ್ಸ್ ತಂಡ ಬಹುತೇಕ ಪಂದ್ಯ ಸೋಲಿನ ಸನಿಹದಲ್ಲಿದೆ. ಗುರಿ ಬೆನ್ನಟ್ಟಿದ ನೆಲ್ಲೈ ರಾಯಲ್ ಕಿಂಗ್ಸ್ ಸ್ಕೋರ್ ಒಂದು ಹಂತದಲ್ಲಿ 18 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತ್ತು. ಇಲ್ಲಿಂದ ನೆಲ್ಲೈ ರಾಯಲ್ ಕಿಂಗ್ಸ್ ಗೆಲುವಿಗೆ 2 ಓವರ್ ಗಳಲ್ಲಿ 37 ರನ್ ಗಳ ಅಗತ್ಯವಿತ್ತು.

ಇದನ್ನೂ ಓದಿ: ಒಂದು ವೇಳೆ ನಿಮ್ಮ ಟ್ರೈನ್ ಮಿಸ್ ಆದರೆ ತಕ್ಷಣ ಹೀಗೆ ಮಾಡಿ ! ಅದೇ ರೈಲಿನಲ್ಲಿ ನಿಮ್ಮ ಪ್ರಯಾಣ ಮುಂದುವರೆಸಬಹುದು

ಇದಾದ ನಂತರ ನೆಲ್ಲೈ ರಾಯಲ್ ಕಿಂಗ್ಸ್ ಇನ್ನಿಂಗ್ಸ್‌ ನ 19ನೇ ಓವರ್‌ ನಲ್ಲಿ ಯಾರೂ ಊಹಿಸದ ಘಟನೆ ನಡೆದಿದೆ. 19ನೇ ಓವರ್ ನೆಲ್ಲೈ ರಾಯಲ್ ಕಿಂಗ್ಸ್ ತಂಡಕ್ಕೆ ದೊಡ್ಡ ತಿರುವು ನೀಡಿತು. ನೆಲ್ಲೈ ರಾಯಲ್ ಕಿಂಗ್ಸ್‌ ನ ಇಬ್ಬರು ಬ್ಯಾಟ್ಸ್‌ಮನ್‌ ಗಳಾದ ರಿತಿಕ್ ಈಶ್ವರನ್ ಮತ್ತು ಅಜಿತೇಶ್ ಗುರುಸ್ವಾಮಿ (ಜಿ ಅಜಿತೇಶ್) ಒಟ್ಟಾಗಿ 33 ರನ್ ಗಳಿಸಿ ತಂಡಕ್ಕೆ 7 ವಿಕೆಟ್‌ ಗಳ ಜಯ ತಂದರು. ನೆಲ್ಲೈ ರಾಯಲ್ ಕಿಂಗ್ಸ್ ಇನ್ನಿಂಗ್ಸ್‌ನ 19ನೇ ಓವರ್‌ ನಲ್ಲಿ 6,6,6,1,6,N1,6 ರನ್ ಕಲೆ ಹಾಕಿತು. ರಿತಿಕ್ ಈಶ್ವರನ್ ಮತ್ತು ಅಜಿತೇಶ್ ಗುರುಸ್ವಾಮಿ (ಜಿ ಅಜಿತೇಶ್) ಈ ಮೂಲಕ ತಮ್ಮ ತಂಡ ನೆಲ್ಲೈ ರಾಯಲ್ ಕಿಂಗ್ಸ್‌ ಗೆ ಅಸಾಧ್ಯವಾದ ಜಯವನ್ನು ತಂದುಕೊಟ್ಟರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More