Home> Sports
Advertisement

ರೋಹಿತ್ ಅಬ್ಬರಕ್ಕೆ ಸುಲಭ ತುತ್ತಾದ ಕಿವೀಸ್ ಪಡೆ

ಎರಡನೇ ಟ್ವೆಂಟಿ ಪಂದ್ಯದಲ್ಲಿ ಮರಳಿ ಫಾರ್ಮ್ ಕಂಡುಕೊಂಡಿರುವ ಭಾರತ ತಂಡ ಈಗ ನ್ಯೂಜಿಲೆಂಡ್ ವಿರುದ್ದ ಗೆಲುವನ್ನು ಸಾಧಿಸಿದೆ.

ರೋಹಿತ್ ಅಬ್ಬರಕ್ಕೆ ಸುಲಭ ತುತ್ತಾದ ಕಿವೀಸ್ ಪಡೆ

ನವದೆಹಲಿ: ಎರಡನೇ ಟ್ವೆಂಟಿ ಪಂದ್ಯದಲ್ಲಿ ಮರಳಿ ಫಾರ್ಮ್ ಕಂಡುಕೊಂಡಿರುವ ಭಾರತ ತಂಡ ಈಗ ನ್ಯೂಜಿಲೆಂಡ್ ವಿರುದ್ದ ಗೆಲುವನ್ನು ಸಾಧಿಸಿದೆ.

ಆಕ್ಲೆಂಡ್ ಈಡನ್ ಪಾರ್ಕ್ ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಟಾಸ್ ಗೆದ್ದು ಮೊದಲು ಟಾಸ್ ಆಯ್ದುಕೊಂಡಿತು.ಕಾಲಿನ್ ಗ್ರಾಂಡ್ ಹೋಂ ಅವರ ಭರ್ಜರಿ (50) ಅರ್ಧಶತಕ ಹಾಗೂ ರಾಸ್ ಟೇಲರ್ ಅವರ 42 ರನ್ ಗಳ ನೆರವಿನಿಂದ ನ್ಯೂಜಿಲೆಂಡ್ ತಂಡವು 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ್ದ ಭಾರತ ತಂಡ ರೋಹಿತ್ ಶರ್ಮಾ ಅವರ ವೇಗದ ಫಿಫ್ಟಿ ಹಾಗೂ ರಿಷಬ್ ಪಂತ್ ಅವರ ಅಜೇಯ 40 ರನ್ ಗಳ ನೆರವಿನಿಂದ ಕೇವಲ ಮೂರು ವಿಕೆಟ್ ಕಳೆದುಕೊಂಡು 18.5 ಓವರ್ ಗಳಲ್ಲಿ 162 ರನ್ ಗಳಿಸಿತು.

Read More