Home> Spiritual
Advertisement

Vastu Tips: ನಿಮ್ಮ ಪ್ರಗತಿಯನ್ನು ಕುಂಠಿತಗೊಳಿಸುವ ಈ ವಸ್ತುಗಳನ್ನು ಇಂದೇ ನಿಮ್ಮ ಮನೆಯಿಂದ ಹೊರಹಾಕಿ

Vastu Tips: ಹಿಂದೂ ಧರ್ಮದಲ್ಲಿ ಜ್ಯೋತಿಷ್ಯ ಶಾಸ್ತ್ರದಂತೆಯೇ ವಾಸ್ತುವಿಗೂ ಕೂಡ ಮಹತ್ವವಿದೆ. ವಾಸ್ತು ಶಾಸ್ತ್ರವು, ಮನೆಯಲ್ಲಿ ಯಾವ ವಸ್ತುಗಳನ್ನು ಇಡಬೇಕು, ಎಂತಹ ವಸ್ತುಗಳನ್ನು ಇಡುವುದನ್ನು ತಪ್ಪಿಸಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಕೆಲವು ವಸ್ತುಗಳ ವ್ಯಕ್ತಿಯ ಪ್ರಗತಿಗೆ ಅಡ್ಡಿಯಾಗುತ್ತವೆ ಎಂದು ಹೇಳಲಾಗುತ್ತದೆ. 

Vastu Tips: ನಿಮ್ಮ ಪ್ರಗತಿಯನ್ನು ಕುಂಠಿತಗೊಳಿಸುವ ಈ ವಸ್ತುಗಳನ್ನು ಇಂದೇ ನಿಮ್ಮ ಮನೆಯಿಂದ ಹೊರಹಾಕಿ

Vastu Tips: ಜ್ಯೋತಿಷ್ಯ ಶಾಸ್ತ್ರದಂತೆಯೇ ವಾಸ್ತು ಶಾಸ್ತ್ರಕ್ಕೂ ಮಹತ್ವವನ್ನು ನೀಡಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಕೆಲವು ಅಮಂಗಳಕರ ಎಂದು ಹೇಳಲಾಗುವ ವಸ್ತುಗಳು ಮನೆಯಲ್ಲಿ ನಕಾರಾತ್ಮಕತೆಯನ್ನು ತರುತ್ತದೆ.  ಇದು ವ್ಯಕ್ತಿಯ ಜೀವನದಲ್ಲಿಯೂ ನೆಗೆಟಿವಿಟಿಗೆ ಕಾರಣವಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಕೆಲವು ವಸ್ತುಗಳ ವ್ಯಕ್ತಿಯ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ ಎಂದು ನಂಬಲಾಗಿದೆ. ಅಂತಹ ವಸ್ತುಗಳು ಯಾವುವು ಎಂದು ತಿಳಿಯಿರಿ. 

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಈ ರೀತಿಯ ವಸ್ತುಗಳನ್ನು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವುದರ ಜೊತೆಗೆ ಆ ಮನೆಯ ಯಜಮಾನದ ಪ್ರಗತಿಗೂ ಅಡ್ಡಿಯಾಗುತ್ತದೆ ಎಂದು ನಂಬಲಾಗಿದೆ. ನಿಮ್ಮ ಮನೆಯಲ್ಲಿಯೂ ಇಂತಹ ವಸ್ತುಗಳಿದ್ದರೆ ಕೂಡಲೇ ಇದನ್ನು ಮನೆಯಿಂದ ಹೊರಹಾಕಿ...

ನಿಮ್ಮ ಪ್ರಗತಿಯನ್ನು ಕುಂಠಿತಗೊಳಿಸುವ ಈ ವಸ್ತುಗಳನ್ನು ಇಂದೇ ನಿಮ್ಮ ಮನೆಯಿಂದ ಹೊರಹಾಕಿ:
ಒಡೆದ ವಿಗ್ರಹ:

ವಾಸ್ತು ಪ್ರಕಾರ, ಒಡೆದ ವಿಗ್ರಹಗಳು ಮನೆಯಲ್ಲಿದ್ದರೆ ಅವು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ಅಲ್ಲದೆ, ಈ ವಸ್ತುಗಳು ಸಮೃದ್ಧಿಗೆ ಅಡ್ಡಿಯಾಗುತ್ತವೆ.

ಇದನ್ನೂ ಓದಿ- Shani Gochar: 2023ರಿಂದ 2025ರವರೆಗೆ ಈ ರಾಶಿಯವರ ಮೇಲಿರಲಿದೆ ಶನಿಯ ಕೃಪಾಕಟಾಕ್ಷ

ಹರಿದ ಬಟ್ಟೆ:
ನಮ್ಮಲ್ಲಿ ಕೆಲವರಿಗೆ ಕೆಲವು ವಸ್ತುಗಳು ಭಾವನೆಗಳೊಂದಿಗೆ ಸಂಬಂಧವನ್ನು ಹೊಂದಿರುತ್ತವೆ. ಹಾಗಾಗಿ, ಆ ವಸ್ತುಗಳನ್ನು ಕಳೆದುಕೊಳ್ಳಲು ಅಥವಾ ಎಸೆಯಲು ಅವರು ಇಷ್ಟ ಪಡುವುದಿಲ್ಲ. ಅಂತಹ ವಸ್ತುಗಳಲ್ಲಿ ಬಟ್ಟೆಗಳೂ ಕೂಡ ಒಂದು. ಆದರೆ, ಹಳೆದ ಹರಿದ ಬಟ್ಟೆಗಳು ಮನೆಯಲ್ಲಿ ನಕಾರಾತ್ಮಕತೆಯನ್ನು ತರುತ್ತವೆ. ಹಾಗಾಗಿ ಮನೆಯಲ್ಲಿ ಇಂತಹ ಬಟ್ಟೆಗಳನ್ನು ಸಂಗ್ರಹಿಸಬಾರದು ಎಂದು ಹೇಳಲಾಗುತ್ತದೆ. 

ಕೆಟ್ಟು ಹೋದ ಗಡಿಯಾರ:
ಕೆಲವರು ಕೆಟ್ಟು ಹೋದ ಗಡಿಯಾರವನ್ನು ಎಸೆಯದೆ ಹಾಗೆಯೇ ಇಡುತ್ತಾರೆ. ಆದರೆ, ಮನೆಯಲ್ಲಿರುವ ನಿಂತು ಹೋದ ಗಡಿಯಾರವು ವ್ಯಕ್ತಿಯ ಪ್ರಗತಿಯನ್ನೂ ಕೂಡ ಸ್ಥಗಿತಗೊಳಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?

ಇದನ್ನೂ ಓದಿ- Trigrahi Yog December 2022: ಡಿಸೆಂಬರ್ 16ರಂದು ರಚನೆಯಾಗಲಿರುವ ತ್ರಿಗ್ರಾಹಿ ಯೋಗದಿಂದ 4 ರಾಶಿಯವರಿಗೆ ಹಣದ ಸುರಿಮಳೆ

ಹಳೆಯ ಬೂಟು, ಚಪ್ಪಲಿ:
ನಿಮಗೂ ಹಳೆಯ, ನಿರುಪಯುಕ್ತವಾದ ಬೂಟು, ಚಪ್ಪಲಿಗಳನ್ನು ಸಂಗ್ರಹಿಸುವ ಅಭ್ಯಾಸವಿದ್ದರೆ ಈಗಲೇ ಅದನ್ನು ಬಿಡಿ. ನಿಮ್ಮ ಮನೆಯಲ್ಲಿರುವ ಇಂತಹ ವಸ್ತುಗಳಿಂದ ನಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶಿಸುತ್ತದೆ. ಇದನ್ನು ತಪ್ಪಿಸಲು ಈಗಲೇ ಹಳೆಯ ಬೂಟು, ಚಪ್ಪಲಿಯನ್ನು ಮನೆಯಿಂದ ಹೊರಹಾಕಿ.

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More