Home> Spiritual
Advertisement

ವರಮಹಾಲಕ್ಷ್ಮೀ ವ್ರತ 2022: ಹಬ್ಬದ ಮಹತ್ವ, ಮುಹೂರ್ತದ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ

ಶ್ರಾವಣ ಮಾಸದಲ್ಲಿ ಬರುವ ಹುಣ್ಣಿಮೆಯ ಮೊದಲಿನ ಶುಕ್ರವಾರದಂದು ಈ ವೃತವನ್ನು ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್‌ 05ರಂದು ವರಮಹಾಲಕ್ಷ್ಮಿ ವ್ರತವನ್ನು ಮಾಡಲಾಗುತ್ತಿದೆ. ಇನ್ನು ಈ ವ್ರತಾಚರಣೆಗೆ ಸಂಬಂಧಿಸಿದಂತೆ ಪುರಾಣದಲ್ಲಿ ಕೆಲವು ಉಲ್ಲೇಖಗಳಿವೆ. ಅದರಲ್ಲಿ ಚಾರುಮತಿ ಕಥೆಯನ್ನು ಪ್ರಸ್ತುತ ಜನರು ಪಾಲಿಸುತ್ತಾರೆ. 

ವರಮಹಾಲಕ್ಷ್ಮೀ ವ್ರತ 2022: ಹಬ್ಬದ ಮಹತ್ವ, ಮುಹೂರ್ತದ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ

ಅಲಂಕಾರ ಪ್ರಿಯೆ ವರಮಹಾಲಕ್ಷ್ಮೀಗೆ ಇಂದು ಮನತುಂಬಿ ಪೂಜಿಸುವ ದಿನ. ಹಬ್ಬಗಳ ಸಂಭ್ರಮವನ್ನು ಹೊತ್ತು ತರುವ ಶ್ರಾವಣ ಮಾಸದಲ್ಲಿ ಅದ್ದೂರಿ ಹಬ್ಬಗಳಲ್ಲಿ ವರಮಹಾಲಕ್ಮೀ ವ್ರತವೂ ಒಂದು. ಮನೆಯ ಹೆಣ್ಣು ಮಕ್ಕಳು ಹುಮ್ಮಸ್ಸಿನಿಂದ ಏಳಿಗೆಗಾಗಿ ಲಕ್ಷ್ಮೀಯನ್ನು ಇಂದು ವಿಶೇಷವಾಗಿ ಪೂಜಿಸುತ್ತಾರೆ. ಈ ಹಬ್ಬವನ್ನು ಮುಖ್ಯವಾಗಿ ಮಹಿಳೆಯರಿಗೆಂದೇ ಸಮರ್ಪಿಸಲಾಗಿದೆ. ಹಿಂದೂ ಧರ್ಮದಲ್ಲಿ ಪ್ರತಿಯೊಂದು ದೇವರು ಸಹ ಒಂದೊಂದರ ಸಂಕೇತ. ಅಂತೆಯೇ ಲಕ್ಷ್ಮೀ ಸಂಪತ್ತಿನ ಸಂಕೇತ. ಹೀಗಾಗಿ ಸಂಪತ್ತಿನ ಅಧಿದೇವತೆಯಾದ ಮಹಾಲಕ್ಷ್ಮಿಯನ್ನು ಇಂದು ವ್ರತಾಚರಣೆ ಮಾಡುವ ಮೂಲಕ ಪೂಜಿಸುತ್ತಾರೆ. 

ಇದನ್ನೂ ಓದಿ: ಈರುಳ್ಳಿ ಕಣ್ಣೀರು ತರಿಸುತ್ತಿದೆ; ನಿಂಬೆ ಹುಳಿ ಅನುಭವ ನೀಡ್ತಿದೆ: ಹಬ್ಬದ ದಿನ ತರಕಾರಿ ಬೆಲೆ ಏರಿಕೆ!

ಶ್ರಾವಣ ಮಾಸದಲ್ಲಿ ಬರುವ ಹುಣ್ಣಿಮೆಯ ಮೊದಲಿನ ಶುಕ್ರವಾರದಂದು ಈ ವೃತವನ್ನು ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್‌ 05ರಂದು ವರಮಹಾಲಕ್ಷ್ಮಿ ವ್ರತವನ್ನು ಮಾಡಲಾಗುತ್ತಿದೆ. ಇನ್ನು ಈ ವ್ರತಾಚರಣೆಗೆ ಸಂಬಂಧಿಸಿದಂತೆ ಪುರಾಣದಲ್ಲಿ ಕೆಲವು ಉಲ್ಲೇಖಗಳಿವೆ. ಅದರಲ್ಲಿ ಚಾರುಮತಿ ಕಥೆಯನ್ನು ಪ್ರಸ್ತುತ ಜನರು ಪಾಲಿಸುತ್ತಾರೆ. ಒಂದೊಮ್ಮೆ ಮಹಾದೇವನ ಬಳಿ ತಾಯಿ ಪಾರ್ವತಿ ಒಂದು ಪ್ರಶ್ನೆಯನ್ನು ಕೇಳುತ್ತಾರಂತೆ. ಮಹಿಳೆಯರು ತಮ್ಮ ಕುಟುಂಬದ ಸುಖ-ಸಮೃದ್ಧಿಗೆ ಏನು ಮಾಡಬೇಕು ಎಂದು. ಅದಕ್ಕೆ ಉತ್ತರವಾಗಿ ಮಹಾಶಿವನು ಚಾರುಮತಿ ಕಥೆಯನ್ನು ವಿವರಿಸುತ್ತಾರೆ.

"ಮಗಧ ದೇಶದಲ್ಲಿದ್ದ ಚಾರುಮತಿ ಎಂಬ ಮಹಿಳೆ ಪರಿಪೂರ್ಣ ವ್ಯಕ್ತಿತ್ವ ಹೊಂದಿದವಳು. ಆಕೆ ಓರ್ವ ಪತ್ನಿಯಾಗಿ, ಸೊಸೆಯಾಗಿ ಮತ್ತು ತಾಯಿಯಾಗಿ ತನ್ನ ಕರ್ತವ್ಯವನ್ನು ಶ್ರದ್ಧೆಯಿಂದ ಮಾಡುತ್ತಿದ್ದಳು. ಇನ್ನು ಆಕೆಯ ಆ ನಿಷ್ಠೆಗೆ ಪ್ರಭಾವಿತಳಾದ ಮಹಾಲಕ್ಷ್ಮೀ, ಒಂದು ದಿನ ಆಕೆಯ ಕನಸಿನಲ್ಲಿ ಬಂದು ʼಶ್ರಾವಣ ತಿಂಗಳಲ್ಲಿ ಬರುವ ಹುಣ್ಣಿಮೆಯ ಮೊದಲ ಶುಕ್ರವಾರದಂದು ನನ್ನನ್ನು ಭಕ್ತಿಪೂರ್ವಕವಾಗಿ ಪೂಜಿಸಿ. ನಿನ್ನ ಇಷಾರ್ಥಗಳನ್ನು ಈಡೇರಿಸುತ್ತೇನೆʼ ಎಂದು ಹೇಳುತ್ತಾರೆ. ಅದರಂತೆಯೇ ಚಾರುಮತಿ ಬಹುಜನರ ಸಮ್ಮುಖದಲ್ಲಿ ಪೂಜೆಯನ್ನು ನೆರವೇರಿಸುತ್ತಾರೆ. ಪೂಜೆ ಮಾಡಿದ ಬಳಿಕ ಚಾರುಮತಿಯ ಮನೆ ಸಮೃದ್ಧವಾಗತೊಡಗಿತು. ಅಂದಿನಿಂದ ವರಮಹಾಲಕ್ಷ್ಮಿ ಪೂಜೆಯನ್ನು ವಿವಾಹಿತ ಮಹಿಳೆಯರು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡುತ್ತಾರೆ. 

ಇದನ್ನೂ ಓದಿ: ಶ್ರೀಲಂಕಾದ ಬಂದರಿನತ್ತ ಚೀನಾ ಹಡಗು..! ಭಾರತಕ್ಕೆ ಗುರಿ ಇಟ್ಟಿತಾ ಡ್ರ್ಯಾಗನ್..!

ಲಕ್ಷ್ಮೀ ಪೂಜೆಯ ಸಮಯ: 
ರಾಹುಕಾಲ ಅಶುಭ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆ ಸಂದರ್ಭದಲ್ಲಿ ಲಕ್ಷ್ಮೀ ಪೂಜೆಯನ್ನು ಮಾಡಲೇಬಾರದು. ಇನ್ನು ವರಮಹಾಲಕ್ಷ್ಮಿ ವ್ರತದ ಮುಹೂರ್ತ ಮುಂಜಾನೆ 6:00 ರಿಂದ ಬೆಳಗ್ಗೆ 8.20 ರವರೆಗೆ ಇದೆ. ಇನ್ನು ಮಧ್ಯಾಹ್ನ ಮುಹೂರ್ತ ಬೆಳಗ್ಗೆ 9.20 ರಿಂದ ಬೆಳಗ್ಗೆ 11.05 ರವರೆಗೆ ಮತ್ತು ಬೆಳಗ್ಗೆ 11.54 ರಿಂದ ಮಧ್ಯಾಹ್ನ 12.35 ರವರೆಗೆ ಇದೆ. ಸಂಜೆ ಮುಹೂರ್ತ - ಸಂಜೆ 6.40 ರಿಂದ ಸಂಜೆ 7.40 ರವರೆಗೆ ಇದೆ. ಅಭಿಜಿತ್ ಮುಹೂರ್ತ ಶುಭವಾಗಿದ್ದು, ಬೆಳಗ್ಗೆ 09:53 ರಿಂದ ಬೆಳಗ್ಗೆ 11:29 ರವರೆಗೆ ಅಮೃತ ಕಾಲವಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

Read More