Home> Spiritual
Advertisement

ವಿವಾಹಿತ ಮಹಿಳೆಯರಿಗೆ ಕೂದಲು ತೊಳೆಯಲು ಇದು ಅತ್ಯುತ್ತಮ ದಿನ!

Best Day To Wash Hairs For Women: ಧಾರ್ಮಿಕ ಗ್ರಂಥಗಳ ಪ್ರಕಾರ, ವಿವಾಹಿತ ಮಹಿಳೆಯರು ಮಂಗಳವಾರ, ಗುರುವಾರ ಮತ್ತು ಶನಿವಾರದಂದು ತಮ್ಮ ಕೂದಲನ್ನು ತೊಳೆಯಬಾರದು ennalaaguttade. ಈ ರೀತಿ ಮಾಡುವುದರಿಂದ ಮಹಿಳೆ ಸೇರಿದಂತೆ ಇಡೀ ಕುಟುಂಬ ಸಮಸ್ಯೆ ಮತ್ತು ನಷ್ಟವನ್ನು ಎದುರಿಸಬೇಕಾಗುತ್ತದೆ.
 

ವಿವಾಹಿತ ಮಹಿಳೆಯರಿಗೆ ಕೂದಲು ತೊಳೆಯಲು ಇದು ಅತ್ಯುತ್ತಮ ದಿನ!

Astro Tips For Married Women In Kannada: ಹಿಂದೂ ಧರ್ಮದಲ್ಲಿ, ವಾರದ ಏಳು ದಿನಗಳ ಬಗ್ಗೆ ಕೆಲವು ನಿಯಮಗಳನ್ನು ಹೇಳಲಾಗಿದೆ. ಈ ನಿಯಮಗಳನ್ನು ಅನುಸರಿಸುವುದರಿಂದ, ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಮತ್ತು ಅನೇಕ ರೀತಿಯ ಸಂಕಷ್ಟಗಳು ದೂರಾಗುತ್ತವೆ. ವಿವಾಹಿತ ಮಹಿಳೆಯರ ಬಗ್ಗೆ ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಕೆಲವು ನಿಯಮಗಳನ್ನು ನೀಡಲಾಗಿದೆ. ಇವುಗಳಲ್ಲಿ ಮಹಿಳೆಯರು ಕೂದಲು ತೊಳೆಯುವ ದಿನದ ಬಗ್ಗೆಯೂ ವಿಶೇಷ ಸಂಗತಿಗಳನ್ನು ಉಲ್ಲೇಖಿಸಲಾಗಿದೆ. ವಿವಾಹಿತ ಮಹಿಳೆಯರು ಕೆಲ ನಿರ್ದಿಷ್ಟ ದಿನಗಳಲ್ಲಿ ತಲೆ ತೊಳೆಯುವುದನ್ನು ತಪ್ಪಿಸಬೇಕು ಎಂದು ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿದೆ. ಕೂದಲು ತೊಳೆಯಲು ನಿಷಿದ್ಧ ಎಂದು ಹೇಳಲಾಗುವ ಆ ದಿನಗಳಂದು ಕೂದಲು ತೊಳೆಯುವುದರಿಂದ ಅನೇಕ ಸಮಸ್ಯೆಗಳು  ಎದುರಾಗುತ್ತವೆ, ಇದರಿಂದ ಮಹಿಳೆ ಸೇರಿದಂತೆ ಇಡೀ ಕುಟುಂಬವೇ ಸಂಕಷ್ಟ ಅನುಭವಿಬೇಕಾಗುತ್ತದೆ. ಜೊತೆಗೆ ಆರ್ಥಿಕ ಬಿಕ್ಕಟ್ಟು, ಕೆಲಸ ಕಾರ್ಯಗಳಲ್ಲಿ ಅಡೆತಡೆ ಇತ್ಯಾದಿಗಳು ಕೂಡ ಎದುರಾಗುತ್ತವೆ.

ವಾರದ ವಿವಿಧ ದಿನಗಳಲ್ಲಿ ಕೂದಲು ತೊಳೆಯುವ ಪರಿಣಾಮಗಳು

ಸೋಮವಾರ - ಧಾರ್ಮಿಕ ಗ್ರಂಥಗಳ ಪ್ರಕಾರ, ವಿವಾಹಿತ ಮಹಿಳೆಯರು ಸೋಮವಾರದ ದಿನ ತಮ್ಮ ಕೂದಲನ್ನು ತೊಳೆಯಬಾರದು. ವಿಶೇಷವಾಗಿ ತಮ್ಮ ಜಾತಕದಲ್ಲಿ ಚಂದ್ರನ ಸ್ಥಾನವು ಅಶುಭವಾಗಿರುವ ಮಹಿಳೆಯರು ಸೋಮವಾರ ತಮ್ಮ ಕೂದಲನ್ನು ತೊಳೆಯಬಾರದು. ಹೀಗೆ ಮಾಡುವುದರಿಂದ ಅವರು ಸಂಸಾರದ ಪ್ರಗತಿ ಕಾಣುವುದಿಲ್ಲ ಎನ್ನಲಾಗಿದೆ.

ಮಂಗಳವಾರ - ಮಂಗಳವಾರವೂ ವಿವಾಹಿತ ಮಹಿಳೆಯ ತಲೆಯನ್ನು ತೊಳೆಯುವುದು ಒಳ್ಳೆಯದಲ್ಲ. ಇದು ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಒಂದೊಮ್ಮೆ ತಲೆ ಕೂದಲು ತೊಳೆಯುವ ಪರಿಸ್ಥಿತಿ ಎದುರಾದರೂ ಕೂಡ, ಮಹಿಳೆಯರು ತಮ್ಮ ತಲೆಯನ್ನು ತೊಳೆಯಲು ನೆಲ್ಲಿಕಾಯಿ ರಸ ಅಥವಾ ನೆಲ್ಲಿಕಾಯಿಯ ಪುಡಿಯನ್ನು ಬಳಸಬೇಕು.

ಬುಧವಾರ - ವಿವಾಹಿತ ಮಹಿಳೆಯರು ಬುಧವಾರದ ದಿನ ತಮ್ಮ ಕೂದಲನ್ನು ತೊಳೆಯಬಹುದು. ಆದರೆ, ಕಿರಿಯ ಸಹೋದರರನ್ನು ಹೊಂದಿರುವ ಮಹಿಳೆಯರು ಆ ದಿನ ತಮ್ಮ ಕೂದಲನ್ನು ತೊಳೆಯುವುದನ್ನು ತಪ್ಪಿಸಬೇಕು. ನೀವು ಬುಧವಾರ ನಿಮ್ಮ ಕೂದಲನ್ನು ತೊಳೆಯಬೇಕಾದರೆ, ನಿಮ್ಮ ಕೂದಲನ್ನು ತೊಳೆಯುವ ಮೊದಲು ನಿಮ್ಮ ಕೂದಲಿಗೆ ನಾಲ್ಕರಿಂದ ಐದು ತುಳಸಿ ಎಲೆಗಳನ್ನು ಅನ್ವಯಿಸಿ.

ಗುರುವಾರ - ವಿವಾಹಿತ ಮಹಿಳೆಯರು ಗುರುವಾರದ ದಿನ ಕೂಡ ತಮ್ಮ ಕೂದಲನ್ನು ತೊಳೆಯಬಾರದು. ವಿವಾಹಿತ ಮಹಿಳೆ ಗುರುವಾರ ತನ್ನ ಕೂದಲನ್ನು ತೊಳೆದರೆ, ಅದು ಅವಳ ಗಂಡನ ವಯಸ್ಸನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ, ಆಕೆಗೆ ಮಕ್ಕಳ ಸಂಬಂಧಿ ಸಮಸ್ಯೆಗಳು ಉಂಟಾಗಬಹುದು. ಕುಟುಂಬದಲ್ಲಿ ನೆಮ್ಮದಿ ಇರುವುದಿಲ್ಲ ಮತ್ತು ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ. ನೀವು ಎಂದಾದರೂ ಗುರುವಾರ ನಿಮ್ಮ ಕೂದಲನ್ನು ತೊಳೆಯಬೇಕಾದರೆ, ಬೇಳೆ ಹಿಟ್ಟಿನಲ್ಲಿ ಸ್ವಲ್ಪ ಅರಿಶಿನವನ್ನು ಬೆರೆಸಿ ನಿಮ್ಮ ಕೂದಲಿಗೆ ಅನ್ವಯಿಸಿ ಮತ್ತು  ನಂತರ ಶಾಂಪೂ ಬಳಸಿ ತೊಳೆದುಕೊಳ್ಳಿ.

ಶುಕ್ರವಾರ -  ವಿವಾಹಿತ ಮಹಿಳೆಯರಿಗೆ ತಮ್ಮ ಕೂದಲನ್ನು ತೊಳೆಯಲು ಅತ್ಯಂತ ಮಂಗಳಕರ ದಿನವೆಂದರೆ ಅದು ಶುಕ್ರವಾರ. ಶುಕ್ರವಾರದಂದು ತಲೆ ತೊಳೆಯುವುದರಿಂದ ತಾಯಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ, ಮನೆಯಲ್ಲಿ ತಾಯಿ ಲಕ್ಷ್ಮಿಯ ವಾಸ ಇರುತ್ತದೆ. ಆರ್ಥಿಕ ಮುಗ್ಗಟ್ಟು ಎಂದಿಗೂ ಕೂಡ ಎದುರಾಗುವುದಿಲ್ಲ.

ಶನಿವಾರ - ವಿವಾಹಿತ ಮಹಿಳೆಯರು ಶನಿವಾರದಂದು ತಮ್ಮ ತಲೆಯನ್ನು ತೊಳೆಯಬಾರದು, ಹೀಗೆ ಮಾಡುವುದರಿಂದ ಶನಿಯ ಪ್ರಕೋಪ ಎದುರಿಸಬೇಕಾಗುತ್ತದೆ. ನೀವು ಎಂದಾದರೂ ಶನಿವಾರ ನಿಮ್ಮ ಕೂದಲನ್ನು ತೊಳೆಯಬೇಕಾದರೆ, ಮೊದಲು ನಿಮ್ಮ ಕೂದಲಿಗೆ ಹಸಿ ಹಾಲನ್ನು ಅನ್ವಯಿಸಿ.

ಇದನ್ನೂ ಓದಿ-Hindu New Year: ಶೀಘ್ರದಲ್ಲಿಯೇ ಹೊಸ ಸಂವತ್ಸರ ಆರಂಭ, 30 ವರ್ಷಗಳ ಬಳಿಕ ಶುಭ ಸಂಯೋಗ, ಈ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ

ಭಾನುವಾರ - ವಿವಾಹಿತ ಮಹಿಳೆಯರ ಕೂದಲನ್ನು ತೊಳೆಯಲು ಭಾನುವಾರದ ದಿನ ಉತ್ತಮವೆಂದು ಪರಿಗಣಿಸದಿದ್ದರೂ, ಈ ದಿನದಂದು ರಜೆಯ ಕಾರಣ, ಹೆಚ್ಚಿನ ಜನರು ಭಾನುವಾರ ಮಾತ್ರ ತಮ್ಮ ಕೂದಲನ್ನು ತೊಳೆಯುತ್ತಾರೆ.

ಇದನ್ನೂ ಓದಿ-ದೇವಗುರು ಬೃಹಸ್ಪತಿಯ ಮನೆಗೆ ಶುಕ್ರನ ಪ್ರವೇಶ, 3 ರಾಶಿಗಳ ಜನರ ಮೇಲೆ ಭಾರಿ ಹಣದ ಸುರಿಮಳೆ, ಸಿಗಲಿದೆ ಬಡ್ತಿ ಭಾಗ್ಯ!

ಇದಲ್ಲದೇ ಅಮಾವಾಸ್ಯೆ ಪೂರ್ಣಿಮೆ ಮತ್ತು ಏಕಾದಶಿಯ ದಿನವೂ ವಿವಾಹಿತ ಮಹಿಳೆಯರು ತಪ್ಪಾಗಿಯೂ ಕೂದಲು ತೊಳೆಯಬಾರದು.

ಇದನ್ನೂ ಓದಿ-ಶನಿಯ ರಾಶಿಯಲ್ಲಿ ತ್ರಿಗ್ರಹಿ ಯೋಗ, ಮೂರು ರಾಶಿಗಳ ಜನರಿಗೆ ಭಾರಿ ಧನಲಾಭದ ಜೊತೆಗೆ ಭಾಗ್ಯೋದಯ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Read More