Home> Spiritual
Advertisement

Surya-Shukra Gochar: ನಾಳೆಯಿಂದ ಈ 4 ರಾಶಿಯವರ ಅದೃಷ್ಟವನ್ನು ಬೆಳಗಲಿದ್ದಾರೆ ಸೂರ್ಯ-ಶುಕ್ರ

Surya- Shukra Gochar: ನಾಳೆಯಿಂದ ಅಂದರೆ ಸೆಪ್ಟೆಂಬರ್ 24 ರಂದು ಕನ್ಯಾರಾಶಿಯಲ್ಲಿ ಸೂರ್ಯ ಮತ್ತು ಶುಕ್ರ ಒಟ್ಟಿಗೆ ಒಂದೇ ರಾಶಿಯಲ್ಲಿ ಕುಳಿತುಕೊಳ್ಳಲಿದ್ದಾರೆ. ಸೂರ್ಯ-ಶುಕ್ರರ ಈ ಸಂಯೋಜನೆಯು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಇದು ನಾಲ್ಕು ರಾಶಿಯವರ ಜೀವನದಲ್ಲಿ ಭಾರೀ ಅದೃಷ್ಟವನ್ನು ಹೊತ್ತು ತರಲಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...
 

Surya-Shukra Gochar: ನಾಳೆಯಿಂದ ಈ 4 ರಾಶಿಯವರ ಅದೃಷ್ಟವನ್ನು ಬೆಳಗಲಿದ್ದಾರೆ ಸೂರ್ಯ-ಶುಕ್ರ

ಕನ್ಯಾ ರಾಶಿಯಲ್ಲಿ ಸೂರ್ಯ-ಶುಕ್ರ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ಗ್ರಹವೂ ನಿರ್ದಿಷ್ಟ ಅವಧಿಯಲ್ಲಿ ರಾಶಿಯನ್ನು ಬದಲಾಯಿಸುತ್ತದೆ. ನವಗ್ರಹಗಳಲ್ಲಿ ಯಾವುದೇ ಒಂದು ಗ್ರಹದಲ್ಲಿನ ಸ್ಥಾನ ಬದಲಾವಣೆಯು ಪ್ರತಿ ರಾಶಿಯವರ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಉಂಟುಮಾಡುತ್ತದೆ. ಈಗ ನಾಳೆ ಅಂದರೆ ಸೆಪ್ಟೆಂಬರ್ 24 ರಂದು, ಗ್ರಹಗಳ ರಾಜ ಸೂರ್ಯ ಮತ್ತು ಐಶಾರಾಮಿ ಜೀವನ ಕಾರಕನಾದ ಶುಕ್ರ ಇಬ್ಬರೂ ಒಂದೇ ರಾಶಿಯಲ್ಲಿ ಕುಳಿತುಕೊಳ್ಳಲಿದ್ದಾರೆ. ಕನ್ಯಾ ರಾಶಿಯಲ್ಲಿ ಸೂರ್ಯ-ಶುಕ್ರರ ಸಂಯೋಜನೆಯು ನಾಲ್ಕು ರಾಶಿಯವರ ಜೀವನವನ್ನು ಬೆಳಗಿಸಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...

ಮಿಥುನ ರಾಶಿಯವರಿಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ: 
ಸೂರ್ಯ-ಶುಕ್ರರ ಸಂಯೋಜನೆಯ ಫಲವಾಗಿ ಮಿಥುನ ರಾಶಿಯವರಿಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದೆ. ನಿಮ್ಮ ವೈವಾಹಿಕ ಜೀವನವು ಸಂತೋಷದಿಂದ ಕೂಡಿರುತ್ತದೆ ಮತ್ತು ಕುಟುಂಬದಲ್ಲಿ ಸಂತೋಷವು ಹರಡಿರುತ್ತದೆ. ಆರ್ಥಿಕವಾಗಿ ನೀವು ಹೆಚ್ಚು ಸಮರ್ಥರಾಗುತ್ತೀರಿ ಮತ್ತು ಹಣವನ್ನು ಗಳಿಸುವಿರಿ. ನೀವು ಕೈಗೆತ್ತಿಕೊಂಡ ಕಾರ್ಯಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ಅನೇಕ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. 

ಇದನ್ನೂ ಓದಿ- Lucky Girl Zodiacs: ಈ ರಾಶಿಯ ಹುಡುಗಿಯರು ಲಕ್ಷ್ಮೀ ದೇವಿಯ ಸ್ವರೂಪ

ಕರ್ಕಾಟಕ ರಾಶಿಯವರಿಗೆ ದೀರ್ಘಕಾಲದ ಕಾಯಿಲೆಯಿಂದ ಮುಕ್ತಿ: 
ಕರ್ಕಾಟಕ ರಾಶಿಯ ಜನರು ಉತ್ತಮ ಆರೋಗ್ಯವನ್ನು ಅನುಭವಿಸುತ್ತಾರೆ. ಅವರು ದೀರ್ಘಕಾಲದ ಕಾಯಿಲೆಗಳಿಂದ ಪರಿಹಾರವನ್ನು ಪಡೆಯಬಹುದು. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವ ಸಾಧ್ಯತೆಯೂ ಇದೆ. ಸಾಲ ಕೊಟ್ಟ ಹಣ ಇದ್ದಕ್ಕಿದ್ದಂತೆ ವಾಪಸ್ ಬರಬಹುದು. ನೀವು ಹೊಸ ವಾಹನ ಅಥವಾ ಆಸ್ತಿಯನ್ನು ಸಹ ಖರೀದಿಸಬಹುದು. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಇದು ಶುಭ ಸಮಯವಾಗಿರುತ್ತದೆ. ನೀವು ಯಾವುದೇ ಕೆಲಸವನ್ನು ಪ್ರಾರಂಭಿಸಿದರೂ, ಅದರಲ್ಲಿ ಲಾಭವನ್ನು ಗಳಿಸುವಿರಿ.

ವೃಶ್ಚಿಕ ರಾಶಿಯವರಿಗೆ ಆರ್ಥಿಕ ಭಾಗವು ಬಲವಾಗಿರುತ್ತದೆ: 
ಕನ್ಯಾ ರಾಶಿಯಲ್ಲಿ ಸೂರ್ಯ-ಶುಕ್ರರ ಸಂಯೋಜನೆಯಿಂದ, ಹೊಸ ಆದಾಯದ ಮೂಲಗಳು ಅಭಿವೃದ್ಧಿಗೊಳ್ಳುತ್ತವೆ. ಇದರಿಂದಾಗಿ ನಿಮ್ಮ ಆರ್ಥಿಕ ಭಾಗವು ಬಲವಾಗಿರುತ್ತದೆ. ವ್ಯಾಪಾರಕ್ಕೆ ಸಮಯವು ಮಂಗಳಕರವಾಗಿರುತ್ತದೆ ಮತ್ತು ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ನೀವು ಶಿಕ್ಷಣ ಕ್ಷೇತ್ರದಲ್ಲಿ ಮುಂದುವರಿಯಲು ಅವಕಾಶವನ್ನು ಪಡೆಯುತ್ತೀರಿ ಮತ್ತು ನಿಮ್ಮ ಕಠಿಣ ಪರಿಶ್ರಮದಿಂದ ನೀವು ಹೊಸ ಎತ್ತರವನ್ನು ಮುಟ್ಟುತ್ತೀರಿ. ಕುಟುಂಬ ಸದಸ್ಯರೊಂದಿಗೆ ಸಂತೋಷದ ಸಮಯ ಕಳೆಯುವ ಅವಕಾಶ ಸಿಗಲಿದೆ. 

ಇದನ್ನೂ ಓದಿ- 59 ವರ್ಷಗಳ ನಂತರ, ಒಂದೇ ರಾಶಿಯಲ್ಲಿ ಮೂರು ಶುಭ ಗ್ರಹಗಳು: ಬೆಳಗಲಿದೆ ಐದು ರಾಶಿಯವರ ಅದೃಷ್ಟ​

ಮೀನ ರಾಶಿಯವರಿಗೆ ಬಡ್ತಿ ಸಾಧ್ಯತೆ: 
ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ಅಥವಾ ಇನ್ಕ್ರಿಮೆಂಟ್ ಸಿಗುವ ಸಾಧ್ಯತೆಗಳಿವೆ. ಅವರಿಗೆ ಕಚೇರಿಯಲ್ಲಿ ಕೆಲವು ದೊಡ್ಡ ಜವಾಬ್ದಾರಿಯನ್ನೂ ನೀಡಬಹುದು. ಯಾವುದೇ ಹೂಡಿಕೆಯಲ್ಲಿ ಲಾಭ ಗಳಿಸುತ್ತಾರೆ. ಕುಟುಂಬದಲ್ಲಿ ಹೊಸ ಆಸ್ತಿ ಅಥವಾ ವಾಹನ ಬರಬಹುದು. ನೀವು ಕುಟುಂಬ ಜೀವನದಲ್ಲಿ ಸಂತೋಷವನ್ನು ಅನುಭವಿಸುವಿರಿ ಮತ್ತು ಹಣವನ್ನು ಗಳಿಸುವಿರಿ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More