Home> Spiritual
Advertisement

Shani Vakri Surya Gochar: ಇನ್ನು 11 ದಿನಗಳ ಬಳಿಕ ಈ ರಾಶಿಯವರಿಗೆ ಸುವರ್ಣ ದಿನ ಆರಂಭ

Shani Vakri Surya Gochar 2023: ವಾರದ ಬಳಿಕ ಎರಡು ದಿನಗಳ ಅಂತರದಲ್ಲಿ ಸೂರ್ಯದೇವ ಮತ್ತು ಸೂರ್ಯ ಪುತ್ರನ ಚಲನೆಯಲ್ಲಿ ಬದಲಾವಣೆ ಆಗಲಿದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಸೂರ್ಯ ಮತ್ತು ಶನಿಯ ಸಂಚಾರದಲ್ಲಿನ ಈ ಬದಲಾವಣೆಯು ಕೆಲವು ರಾಶಿಯವರ ಜೀವನದಲ್ಲಿ ಅಪಾರ ಸಂಪತ್ತನ್ನು ಕರುಣಿಸಲಿದೆ ಎಂದು ಹೇಳಲಾಗುತ್ತಿದೆ. 

Shani Vakri Surya Gochar: ಇನ್ನು 11 ದಿನಗಳ ಬಳಿಕ ಈ ರಾಶಿಯವರಿಗೆ ಸುವರ್ಣ ದಿನ ಆರಂಭ

Shani Vakri Surya Gochar In June 2023 Effect: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜ ಎಂದು ಬಣ್ಣಿಸಲ್ಪಡುವ ಸೂರ್ಯ ದೇವನು ಇದೇ ಜೂನ್ 15ರಂದು ವೃಷಭ ರಾಶಿಯನ್ನು ತೊರೆದು ಮಿಥುನ ರಾಶಿಯನ್ನು ಪ್ರವೇಶಿಸಿಸಲಿದ್ದಾನೆ. ಇದಾದ ಎರಡೇ ದಿನಗಳಲ್ಲಿ ಎಂದರೆ 17 ಜೂನ್ 2023ರಂದು ಸೂರ್ಯ ಪುತ್ರ, ನ್ಯಾಯದ ದೇವರು ಶನಿ ದೇವನು ತನ್ನದೇ ಆದ ಕುಂಭ ರಾಶಿಯಲ್ಲಿ ಹಿಮ್ಮುಖ ನಡೆ ಆರಂಭಿಸಲಿದ್ದಾನೆ. 

ಕೇವಲ ಎರಡು ದಿನಗಳ ಅಂತರದಲ್ಲಿ ಸೂರ್ಯ, ಶನಿಯಂತಹ ದೊಡ್ಡ ಗ್ರಹಗಳ ಸ್ಥಾನದಲ್ಲಿನ ಬದಲಾವಣೆಯು ಎಲ್ಲಾ 12 ರಾಶಿಯವರ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಆದಾಗ್ಯೂ, ಮಿಥುನ ರಾಶಿಗೆ ಸೂರ್ಯನ ಪ್ರವೇಶ ಹಾಗೂ ಕುಂಭ ರಾಶಿಯಲ್ಲಿ ಶನಿಯ ಹಿಮ್ಮುಖ ಚಲನೆಯಿಂದಾಗಿ ನಾಲ್ಕು ರಾಶಿಯವರ ಜೀವನದಲ್ಲಿ ಸುವರ್ಣ ದಿನಗಳು ಆರಂಭವಾಗಲಿವೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

ಜೂನ್ 17ರ ಬಳಿಕ ಈ ನಾಲ್ಕು ರಾಶಿಯವರಿಗೆ ಅಪಾರ ಸಂಪತ್ತು ಕರುಣಿಸಲಿದ್ದಾರೆ ಶನಿ-ಸೂರ್ಯ:- 
ಮಿಥುನ ರಾಶಿ: 

ಪ್ರಸ್ತುತ, ವೃಷಭ ರಾಶಿಯಲ್ಲಿ ಸಂಚರಿಸುತ್ತಿರುವ ಗ್ರಹಗಳ ರಾಜ ಸೂರ್ಯ ದೇವನು ಜೂನ್ 15ರಂದು ಮಿಥುನ ರಾಶಿಯನ್ನು ಪ್ರವೇಶಿಸಿಸಲಿದ್ದಾನೆ. ಸ್ವ ರಾಶಿಯಲ್ಲಿಯೇ ಸೂರ್ಯನ ಪ್ರವೇಶ ಹಾಗೂ ಶನಿಯ ಹಿಮ್ಮುಖ ಚಲನೆಯು ಈ ರಾಶಿಯವರಿಗೆ ಮಂಗಳಕರ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ಮಿಥುನ ರಾಶಿಯವರು ಕೈ ಹಾಕಿದ ಕೆಲಸಗಳಲ್ಲೆಲ್ಲಾ ಯಶಸ್ಸು, ಕೀರ್ತಿಯನ್ನು ಪಡೆಯಲಿದ್ದಾರೆ. ಮಾತ್ರವಲ್ಲ, ಹಣದ ಹರಿವು ಹೆಚ್ಚಾಗಲಿದ್ದು ಮನೆಯಲ್ಲಿ ಸುಖ ಸಮೃದ್ಧಿ ನೆಲೆಸಲಿದೆ. 

ಇದನ್ನೂ ಓದಿ- Guru Gochar 2023: ಮುಂದಿನ 16 ತಿಂಗಳಿನಲ್ಲಿ ಅಪಾರ ಸಂಪತ್ತಿನ ಒಡೆಯರಾಗುತ್ತಾರೆ ಈ ರಾಶಿಯವರು

ಸಿಂಹ ರಾಶಿ: 
ಸೂರ್ಯ ದೇವನೇ ಸಿಂಹ ರಾಶಿಯ ಅಧಿಪತಿಯಾಗಿರುವುದರಿಂದ ಸೂರ್ಯ ರಾಶಿ ಪರಿವರ್ತನೆಯು ಈ ರಾಶಿಯವರ ಜೀವನದಲ್ಲಿ ಮಹತ್ವದ ಪರಿಣಾಮವನ್ನು ಉಂಟುಮಾಡಲಿದೆ. ಮಾತ್ರವಲ್ಲ, ಈ ಸಮಯದಲ್ಲಿ ಶನಿಯ ಹಿಮ್ಮುಖ ಚಲನೆಯೂ ಸಹ ಈ ರಾಶಿಯ ಜನರಿಗೆ ಹೆಚ್ಚಿನ ಪ್ರಯೋಜನವನ್ನು ನೀಡಲಿದೆ. ಈ ವೇಳೆ ಇವರು ವೃತ್ತಿ ಜೀವನದಲ್ಲಿ ಯಶಸ್ಸನ್ನು ಪಡೆಯುವುದರ ಜೊತೆಗೆ, ಅದೃಷ್ಟದ ಬೆಂಬಲದಿಂದಾಗಿ ಬಹಳ ದಿನಗಳ ಕನಸು ನನಸಾಗಲಿದೆ. 

ಕನ್ಯಾ ರಾಶಿ: 
ಸೂರ್ಯ ಮತ್ತು ಶನಿಯ ಸಂಚಾರದಲ್ಲಿನ ಬದಲಾವಣೆಯು ಕನ್ಯಾ ರಾಶಿಯ ಉದ್ಯೋಗಸ್ಥರಿಗೆ ಮಾತ್ರವಲ್ಲದೆ ವ್ಯಾಪಾರಸ್ಥರಿಗೂ ಕೂಡ ಭರ್ಜರಿ ಲಾಭವನ್ನು ನೀಡಲಿದೆ. ಈ ಸಮಯದಲ್ಲಿ ದಿಢೀರ್ ಹಣ ಸಿಗುವ ಸಂಭವವಿದ್ದು ಹೂಡಿಕೆಯಿಂದಲೂ ಪ್ರಯೋಜನವಾಗಲಿದೆ. ಹೊಸ ಕೆಲಸ ಆರಂಭಿಸಲು ಬಯಸುವವರಿಗೆ ಮಂಗಳಕರ ಸಮಯ ಇದಾಗಿದ್ದು, ಅಪಾರ ಧಣಪ್ರಾಪ್ತಿಯಾಗಲಿದೆ. 

ಇದನ್ನೂ ಓದಿ- Shukra Gochar: ಜುಲೈ 7ರವರೆಗೆ ಈ ರಾಶಿಯವರಿಗೆ ವ್ಯಾಪಾರದಲ್ಲಿ ಬಂಪರ್ ಹಣ, ಉದ್ಯೋಗದಲ್ಲಿ ಪ್ರಗತಿ

ಮಕರ ರಾಶಿ: 
ಗ್ರಹಗಳ ರಾಜ ಸೂರ್ಯ ರಾಶಿ ಬದಲಾವಣೆ ಮತ್ತು ನ್ಯಾಯದ ದೇವರು ಶನಿಯ ವಕ್ರ ನಡೆಯು ಮಕರ ರಾಶಿಯವರಿಗೂ ಕೂಡ ಬಂಪರ್ ಲಾಭವನ್ನು ತರಲಿದೆ. ಈ ವೇಳೆ ಮಕರ ರಾಶಿಯವರ ಪ್ರೇಮಿಗಳು ವಿವಾಹ ಬಂಧನದಲ್ಲಿ ಬಂಧಿಯಾಗುವ ಸಾಧ್ಯತೆ ಇದೆ. ಇದಲ್ಲದೆ, ಹಠಾತ್ ಧನಲಾಭದಿಂದ ನಿಮ್ಮ ದೀರ್ಘಾವಧಿಯ ಹಣಕಾಸಿನ ಸಮಸ್ಯೆಗಳು ಕೊನೆಗೊಳ್ಳಲಿವೆ.  ಮಾತ್ರವಲ್ಲ, ಆರೋಗ್ಯವೂ ಉತ್ತಮವಾಗಿರಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More