Home> Spiritual
Advertisement

Shani Gochar: ಮಹಾಭಾಗ್ಯ ರಾಜಯೋಗದಿಂದ ಅಪಾರ ಸಂಪತ್ತಿನ ಒಡೆಯರಾಗುತ್ತಾರೆ ಈ ರಾಶಿಯ ಜನ

ಮೂರು ದಶಕಗಳ ಬಳಿಕ ಸ್ವರಾಶಿ ಕುಂಭ ರಾಶಿಯಲ್ಲಿರುವ ನ್ಯಾಯದ ದೇವರು, ಕರ್ಮಫಲದಾತ ಶನಿದೇವನು ಮಹಾಭಾಗ್ಯ ರಾಜಯೋಗವನ್ನು ಸೃಷ್ಟಿಸುಟ್ಟಿದ್ದು ಈ ಸಮಯದಲ್ಲಿ ಕೆಲವು ರಾಶಿಯವಾರ ಅದೃಷ್ಟವನ್ನು ಬೆಳಗಲಿದ್ದಾನೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...

Shani Gochar: ಮಹಾಭಾಗ್ಯ ರಾಜಯೋಗದಿಂದ ಅಪಾರ ಸಂಪತ್ತಿನ ಒಡೆಯರಾಗುತ್ತಾರೆ ಈ ರಾಶಿಯ ಜನ

ಬೆಂಗಳೂರು: ವೈದಿಕ ಜ್ಯೋತಿಷ್ಯದ ಪ್ರಕಾರ, ಕರ್ಮಗಳಿಗೆ ತಕ್ಕ ಫಲ ನೀಡುವ ಕರ್ಮಫಲದಾತ, ನ್ಯಾಯದ ದೇವರು ಶನಿ ದೇವನು ಮೂವತ್ತು ವರ್ಷಗಳ ಬಳಿಕ  ಜನವರಿ 17, 2023 ರಂದು ತನ್ನದೇ ಆದ ಕುಂಭ ರಾಶಿಯಲ್ಲಿ ಪ್ರವೇಶಿಸಿದ್ದಾರೆ. ಇದೀಗ ಮಾರ್ಚ್ 15, 2023 ರಂದು, ಶನಿ ನಕ್ಷತ್ರವನ್ನು ಬದಲಾಯಿಸಿದ ನಂತರ ಶತಭಿಷಾ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ. ಇದರಿಂದಾಗಿ 30 ವರ್ಷಗಳ ನಂತರ ಮಹಾಭಾಗ್ಯ ರಾಜಯೋಗ ನಿರ್ಮಾಣವಾಗುತ್ತಿದೆ. ಈ ಯೋಗವು ನಾಲ್ಕು ರಾಶಿಯವರ ಜೀವನದಲ್ಲಿ ಅಪಾರ ಸಂಪತ್ತನ್ನು ಕರುಣಿಸಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...
 
ಮಹಾಭಾಗ್ಯ ರಾಜಯೋಗದಿಂದ ಅಪಾರ ಸಂಪತ್ತಿನ ಒಡೆಯರಾಗುತ್ತಾರೆ ಈ ರಾಶಿಯ ಜನ:-

ವೃಷಭ ರಾಶಿ: 
ಶತಭಿಷಾ ನಕ್ಷತ್ರದಲ್ಲಿ ಶನಿಯ ಸಂಕ್ರಮಣದಿಂದ ರೂಪುಗೊಳ್ಳಲಿರುವ ಮಹಾಭಾಗ್ಯ ರಾಜಯೋಗವು ವೃಷಭ ರಾಶಿಯವರ ಜೀವನದಲ್ಲಿ ಮಂಗಳಕರ ಫಲಗಳನ್ನು ತರಲಿದೆ. ಈ ಸಮಯದಲ್ಲಿ ನಿಮ್ಮ ವೃತ್ತಿ ರಂಗದಲ್ಲಿ ತಲೆದೋರಿದ್ದ ಸಮಸ್ಯೆಗಳು ಬಗೆಹರಿಯಲಿವೆ. ಪ್ರಮೋಷನ್, ಇನ್ಕ್ರಿಮೆಂಟ್ ನಿಂದಾಗಿ ವಿತ್ತೀಯ ಸ್ಥಿತಿ ಸುಧಾರಿಸಲಿದೆ.  

ಇದನ್ನೂ ಓದಿ- ಶತಭಿಷಾ ನಕ್ಷತ್ರದಲ್ಲಿ ಶನಿಯ ಪ್ರವೇಶ- ಈ ರಾಶಿಯವರಿಗೆ ವಿಶೇಷ ಪ್ರಯೋಜನ

ಮಿಥುನ ರಾಶಿ: 
ಮಹಾಭಾಗ್ಯ ರಾಜಯೋಗದ ಪರಿಣಾಮವಾಗಿ ಮಿಥುನ ರಾಶಿಯವರಿಗೆ ಪೂರ್ವಿಕರ ಆಸ್ತಿಯಿಂದ ಲಾಭವಾಗಲಿದೆ. ಕೌಟುಂಬಿಕ ಜೀವನವೂ ಆನಂದಮಯವಾಗಿರಲಿದ್ದು, ಹಠಾತ್ ಧನಲಾಭದಿಂದ ಆರ್ಥಿಕ ವೃದ್ಧಿಯಾಗಲಿದೆ.

ಕರ್ಕಾಟಕ ರಾಶಿ:
ಮಹಾಭಾಗ್ಯ ರಾಜಯೋಗವು ಕರ್ಕಾಟಕ ರಾಶಿಯವರ ಜೀವನದಲ್ಲಿ ಸುವರ್ಣ ದಿನಗಳನ್ನು ತಾರಲಿದೆ. ವ್ಯಾಪಾರ-ವ್ಯವಹಾರದಲ್ಲಿ ಬಂಪರ್ ಲಾಭ ಸಾಧ್ಯತೆ ಇದೆ. ವೃತ್ತಿ ರಂಗದಲ್ಲಿ ಯಶಸ್ಸಿನ ಶಿಖರವನ್ನು ಏರುವಿರಿ. ಹೊಸ ಮನೆ-ಕಾರು ಖರೀದಿ ಯೋಗವೂ ಇದೆ.

ಇದನ್ನೂ ಓದಿ- Shani Dev: 24 ಗಂಟೆಗಳ ನಂತರ ಈ ರಾಶಿಗಳಿಗೆ ಕೆಟ್ಟ ಸಮಯ ಪ್ರಾರಂಭವಾಗಲಿದೆ!

ಧನು ರಾಶಿ:
ಮಹಾಭಾಗ್ಯ ರಾಜಯೋಗದ ಪರಿಣಾಮವಾಗಿ ಧನು ರಾಶಿಯವರು ಭರ್ಜರಿ ವಿತ್ತೀಯ ಲಾಭವನ್ನು ಪಡೆಯಲಿದ್ದಾರೆ. ವ್ಯಾಪಾರದಲ್ಲಿ ದೊಡ್ಡ ಆರ್ಡರ್ ಸಿಗುವ ಸಾಧ್ಯತೆ ಇದೆ. ಉದ್ಯೋಗ ಕ್ಷೇತ್ರದಲ್ಲಿ ಉನ್ನತಾಧಿಕಾರಿಗಳು ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸೂಚಿಸಲಿದ್ದಾರೆ. ಇದರ ಪರಿಣಾಮ ನಿಮ್ಮ ವೇತನದ ಮೇಲೂ ಸಹ ಕಂಡು ಬರಲಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More