Home> Spiritual
Advertisement

Mangala Margi: ಈ ಮೂರು ರಾಶಿಯವರಿಗೆ ಅಪಾರ ಧನ ಸಂಪತ್ತು ಕರುಣಿಸಲಿದ್ದಾನೆ ಮಾರ್ಗಿ ಮಂಗಳ

Mangala Margi Effect: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಂಗಳ ಗ್ರಹದ ನೇರ ಸಂಚಾರವು ಮೂರು ರಾಶಿಯವರಿಗೆ ಭಾರೀ ಅದೃಷ್ಟವನ್ನು ಕರುಣಿಸಲಿದೆ. ಈ ಸಮಯದಲ್ಲಿ ಈ ಮೂರು ರಾಶಿಯವರು ಅಪಾರ ಧನ ಸಂಪತ್ತಿನ ಒಡೆಯರಾಗುವುದು ಮಾತ್ರವಲ್ಲ, ಅವರು ಕೈ ಹಾಕಿದ ಪ್ರತಿ ಕೆಲಸದಲ್ಲಿಯೂ ಯಶಸ್ಸನ್ನು ಗಳಿಸುತ್ತಾರೆ ಎಂದು ಹೇಳಲಾಗುತ್ತಿದೆ.

Mangala Margi: ಈ ಮೂರು ರಾಶಿಯವರಿಗೆ ಅಪಾರ ಧನ ಸಂಪತ್ತು ಕರುಣಿಸಲಿದ್ದಾನೆ ಮಾರ್ಗಿ ಮಂಗಳ

Mangala Margi Effect: ವೈದಿಕ ಜ್ಯೋತಿಷ್ಯದಲ್ಲಿ ನವಗ್ರಹಗಳಲ್ಲಿ ಯಾವುದೇ ಒಂದು ಗ್ರಹದ ಸಂಚಾರವೂ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ನವಗ್ರಹಗಳಲ್ಲಿ ಮಂಗಳ ಗ್ರಹವನ್ನು ಧೈರ್ಯದ ಅಂಶ ಎಂದು ಪರಿಗಲಿಸಲಾಗಿದೆ. ಜನವರಿ 13, 2023 ರಂದು ಮಂಗಳ ಗ್ರಹದ ನೇರ ಸಂಚಾರ ಆರಂಭವಾಗಿದೆ. ಮುಂದಿನ ಅಕ್ಟೋಬರ್ 30ರವರೆಗೆ ಮಂಗಳನು ನೇರವಾಗಿಯೇ ಸಂಚರಿಸಲಿದ್ದಾನೆ. ಈ ಸಂದರ್ಭದಲ್ಲಿ ಮಾರ್ಗಿ ಮಂಗಳನು ಮೂರು ರಾಶಿಯವರ ಜೀವನದಲ್ಲಿ ಭಾರೀ ಅದೃಷ್ಟವನ್ನು ಕರುಣಿಸಲಿದ್ದಾನೆ. ಈ ಸಮಯದಲ್ಲಿ ಈ ಮೂರು ರಾಶಿಯವರು ಅಪಾರ ಧನ-ಸಂಪತ್ತಿನ ಒಡೆಯರಾಗುತ್ತಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...

ಮಂಗಳನ ನೇರ ನಡೆ ಪ್ರಭಾವದಿಂದ ಈ ಮೂರು ರಾಶಿಯವರಿಗೆ ಭಾರೀ ಧನ ಲಾಭ:

ಮೇಷ ರಾಶಿ:
ಮಂಗಳನ ನೇರ ನಡೆಯ ಪ್ರಭಾವದಿಂದಾಗಿ ಮೇಷ ರಾಶಿಯವರು ತಮ್ಮ ಕೆಲಸ ಕಾರ್ಯಗಳಲ್ಲಿ ಭಾರೀ ಯಶಸ್ಸನ್ನು ಗಳಿಸಲಿದ್ದಾರೆ. ಈ ಸಮಯದಲ್ಲಿ ಮೇಷ ರಾಶಿಯವರಿಗೆ ಬೇರೆಡೆ ಸಿಲುಕಿರುವ ಹಣವು ಕೈ ಸೇರಲಿದೆ. ಇದರೊಂದಿಗೆ  ಅಪಾರ ಧನ ಲಾಭ ಪ್ರಾಪ್ತಿಯಾಗಲಿದ್ದು ಆರ್ಥಿಕ ಸ್ಥಿತಿ ಸುಧಾರಿಸಲಿದೆ.

ಇದನ್ನೂ ಓದಿ- Saturn Transit 2023: ಶನಿ ಸಂಕ್ರಮಣದಿಂದ ಶಶ ಮಹಾಪುರುಷ ರಾಜಯೋಗ, 3 ರಾಶಿಯವರಿಗೆ ಜಾಕ್‌ಪಾಟ್

ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯವರ ಜಾತಕದಲ್ಲಿ ಮಂಗಳ ಗ್ರಹ ಬಲವಾಗಿರುವುದರಿಂದ ಈ ರಾಶಿಯವರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯಲಿದ್ದಾರೆ. ಇದರಿಂದಾಗಿ ಉದ್ಯೋಗ, ವ್ಯವಹಾರದಲ್ಲಿ ಅಪಾರ ಲಾಭ ದೊರೆಯಲಿದೆ. ಈ ರಾಶಿಯವರಿಗೆ ಪ್ರತಿ ಕೆಲಸದಲ್ಲಿಯೂ ಯಶಸ್ಸನ್ನು ನೀಡಲಿರುವ ಮಂಗಳ ಅಪಾರ ಧನ-ಸಂಪತ್ತನ್ನು ಕೂಡ ಕರುಣಿಸಲಿದ್ದಾನೆ.

ಇದನ್ನೂ ಓದಿ- Budha Dosh Remedies: ಬುಧ ದೋಷದಿಂದ ಮುಕ್ತಿ ಪಡೆಯಲು ಸರಳ ಪರಿಹಾರಗಳು

ಸಿಂಹ ರಾಶಿ: 
ಮಾರ್ಗಿ ಮಂಗಳನು ಈ ರಾಶಿಯವರಿಗೆ ಅದೃಷ್ಟವನ್ನು ಕರುಣಿಸಲಿದ್ದಾನೆ. ಇವರ ಪ್ರತಿ ಕೆಲಸದಲ್ಲಿಯೂ ಜೊತೆಗಿರುವ ಮಂಗಳ ಮಂಗಳಕರ ಫಲಿತಾಂಶಗಳನ್ನು ನೀಡಲಿದ್ದಾನೆ. ಈ ರಾಶಿಯವರು ವೃತ್ತಿ ರಂಗದಲ್ಲಿ ಯಶಸ್ಸಿನ ಉತ್ತುಂಗವನ್ನು ತಲುಪಲಿದ್ದಾರೆ.

ಸೂಚನೆ:  ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More