Home> Spiritual
Advertisement

ಮನೆಯ ಮುಖ್ಯ ದ್ವಾರ ಈ ದಿಕ್ಕಿಗೆ ಇದ್ದರೆ ಆ ಮನೆಯಲ್ಲಿ ನಿತ್ಯವೂ ಉತ್ಸವ !ಒಂದೇ ಒಂದು ರೂಪಾಯಿ ಸಾಲ ಬಾಧೆ ಇರುವುದಿಲ್ಲ ! ಮನೆಮಂದಿಯ ನೆಮ್ಮದಿ, ಸುಖ ಶಾಂತಿಗೆ ಭಂಗವೇ ಇಲ್ಲ !

Main Gate of House Direction:ಮನೆ ನಿರ್ಮಿಸುವಾಗ ಮನೆಯ ವಾಸ್ತುವನ್ನು ನೋಡಿಕೊಳ್ಳುವುದು ಬಹಳ ಮುಖ್ಯ.ಮನೆಯ ಮುಖ್ಯ ದ್ವಾರ ಈ ದಿಕ್ಕಿಗೆ ಇದ್ದರೆ ಶುಭ. 
 

ಮನೆಯ ಮುಖ್ಯ ದ್ವಾರ ಈ ದಿಕ್ಕಿಗೆ ಇದ್ದರೆ ಆ ಮನೆಯಲ್ಲಿ ನಿತ್ಯವೂ ಉತ್ಸವ !ಒಂದೇ ಒಂದು ರೂಪಾಯಿ ಸಾಲ ಬಾಧೆ ಇರುವುದಿಲ್ಲ ! ಮನೆಮಂದಿಯ ನೆಮ್ಮದಿ, ಸುಖ ಶಾಂತಿಗೆ ಭಂಗವೇ ಇಲ್ಲ !

Main Gate of House Direction : ಮನೆಯ ಮುಖ್ಯ ದ್ವಾರ ಮನೆಯ ಪ್ರವೇಶಕ್ಕೆ ಮಾತ್ರವಲ್ಲ ಇದು ಶಕ್ತಿಯ ಹೆಬ್ಬಾಗಿಲು ಕೂಡಾ ಆಗಿದೆ.ಆದ್ದರಿಂದ,ವಾಸ್ತು ಶಾಸ್ತ್ರದಲ್ಲಿ ಮನೆಯ ಮುಖ್ಯ ಬಾಗಿಲು ಅಥವಾ ಪ್ರವೇಶದ್ವಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.ಮುಖ್ಯ ದ್ವಾರ ಹೀಗೆಯೇ ಇರಬೇಕು ಎನ್ನುವ ಬಗ್ಗೆ ಅನೇಕ ನಿಯಮಗಳನ್ನು ಹೇಳಲಾಗಿದೆ.ಹಾಗಿದ್ದರೆ ಮನೆಯ ಮುಖ್ಯ ದ್ವಾರ ಯಾವ ದಿಕ್ಕಿಗೆ ಇರಬೇಕು ನೋಡೋಣ. 

ಪಶ್ಚಿಮ ದಿಕ್ಕು : 
ಪಶ್ಚಿಮ ದಿಕ್ಕಿಗೆ ಮುಖ್ಯ ದ್ವಾರ :ಮನೆಯ ಪಶ್ಚಿಮ ದಿಕ್ಕಿನಲ್ಲಿ ಅಡುಗೆ ಮನೆ ಅಥವಾ ಶೌಚಾಲಯ ಇದ್ದರೆ ಉತ್ತಮ.ಆದರೆ ಇವೆರಡೂ ಪರಸ್ಪರ ಹತ್ತಿರ ಇರಬಾರದು ಎನ್ನುವುದು ಕೂಡಾ ನೆನಪಿರಲಿ. ಈ ದಿಕ್ಕಿನಲ್ಲಿ ಮುಖ್ಯ ದ್ವಾರ ಇರಲೇ ಬಾರದು. 

ಇದನ್ನೂ ಓದಿ : Malavya Yoga 2024: ಮಾಲವ್ಯ ಯೋಗದಿಂದ ಈ 3 ರಾಶಿಯವರಿಗೆ ಹಣ & ಅದೃಷ್ಟ ಪ್ರಾಪ್ತಿಯಾಗಲಿದೆ!

ಉತ್ತರ ದಿಕ್ಕು : 
ಮನೆಯ ಮುಖ್ಯ ದ್ವಾರ ಉತ್ತರ ದಿಕ್ಕಿನಲ್ಲಿದ್ದರೆ ತುಂಬಾ ಶುಭ. ಅಷ್ಟೇ ಅಲ್ಲ, ಮನೆಯಲ್ಲಿ ಗರಿಷ್ಠ ಸಂಖ್ಯೆಯ ಕಿಟಕಿಗಳು ಮತ್ತು ಬಾಗಿಲುಗಳನ್ನು ಇಡುವುದರಿಂದ  ಮನೆಯಲ್ಲಿ ಧನಾತ್ಮಕತೆ, ಸಮೃದ್ಧಿ ಮತ್ತು ಸಂತೋಷ ಹೆಚ್ಚಾಗುತ್ತದೆ.ಮನೆಯ ಬಾಲ್ಕನಿ ಮತ್ತು ವಾಶ್ ಬೇಸಿನ್ ಕೂಡಾ ಈ ದಿಕ್ಕಿನಲ್ಲಿ ನಿರ್ಮಿಸಬೇಕು. 

ದಕ್ಷಿಣ ದಿಕ್ಕು : 
ದಕ್ಷಿಣ ದಿಕ್ಕಿನಲ್ಲಿ ಮುಖ್ಯ ದ್ವಾರವನ್ನು ನಿರ್ಮಿಸಬಾರದು. ವಾಸ್ತು ಶಾಸ್ತ್ರದ ಪ್ರಕಾರ ಭಾರವಾದ ವಸ್ತುಗಳನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ಇಡಬೇಕು.ಈ ದಿಕ್ಕನ್ನು ತೆರೆದಿರಬಾರದು ಅಥವಾ ಯಾವುದೇ ಬಾಗಿಲು ಅಥವಾ ಕಿಟಕಿ ಕೂಡಾ ಈ ದಿಕ್ಕಿನಲ್ಲಿ ಇರಬಾರದು. ಇದು ಮನೆಯಲ್ಲಿ ಜಗಳ ಮತ್ತು ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. 

ಇದನ್ನೂ ಓದಿ : ಮನೆಯಲ್ಲಿ ಆ ಜಾಗದಲ್ಲಿ ನವಿಲು ಗರಿ ಇಟ್ಟರೆ.. ಆರ್ಥಿಕ ಲಾಭ, ಗಂಡ-ಹೆಂಡತಿ ನಡುವೆ ಸಮಸ್ಯೆಗಳೇ ಬರೋದಿಲ್ಲ!!

ಈಶಾನ್ಯ ದಿಕ್ಕು :
ಮನೆಯ ಈಶಾನ್ಯ ಮೂಲೆಯಲ್ಲಿ ಮುಖ್ಯ ದ್ವಾರವಿದ್ದರೆ ತುಂಬಾ ಶುಭ. ಇದಲ್ಲದೆ, ಈಶಾನ್ಯ ಮೂಲೆಯಲ್ಲಿ ಪೂಜಾ ಮನೆಯನ್ನು ಹೊಂದಿರುವುದು ವಾಸ್ತು ಪ್ರಕಾರ ಮಂಗಳಕರವಾಗಿದೆ. 

ಮುಖ್ಯ ಬಾಗಿಲಿಗೆ ಸಂಬಂಧಿಸಿದಂತೆ ಈ ವಿಷಯಗಳನ್ನು ನೆನಪಿನಲ್ಲಿಡಿ :
ಮುಖ್ಯ ದ್ವಾರ ಮತ್ತು ಮುಖ್ಯ ದ್ವಾರಕ್ಕೆ ಹೋಗುವ ಮಾರ್ಗದಲ್ಲಿ ಕತ್ತಲೆ ಇರಬಾರದು. ಮುಖ್ಯ ಬಾಗಿಲಿನಲ್ಲಿ ಕತ್ತಲೆಯಿದ್ದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.  
ಮುಖ್ಯ ಬಾಗಿಲು ಒಡೆದಿರಬಾರದು ಅಥವಾ ಶಿಥಿಲವಾಗಿರಬಾರದು. ಹಾಗೆಯೇ ಅದರ ಬಣ್ಣವನ್ನೂ ಮಾಸಲು ಬಿಡಬಾರದು. ಮನೆಯ ಮುಖ್ಯ ದ್ವಾರ ಯಾವಾಗಲೂ ಸುಸ್ಥಿತಿಯಲ್ಲಿರಬೇಕು. ಬಾಗಿಲು ಮುಚ್ಚುವಾಗ ಅಥವಾ ತೆರೆಯುವಾಗ ಶಬ್ದ ಬರಬಾರದು. 

ಇದನ್ನೂ ಓದಿ : ಈ ಎರಡು ದಿನ ಕೂದಲನ್ನು ಯಾವ ಕಾರಣಕ್ಕೂ ಕತ್ತರಿಸಬೇಡಿ.. ಮನೆಯಲ್ಲಿ ದಾರಿದ್ರ್ಯ ತಾಂಡವವಾಡುವುದು, ಸಿರಿವಂತನೂ ಭಿಕ್ಷುಕನಾಗುವ!
 ಮನೆಯ ಪ್ರವೇಶ ದ್ವಾರದಲ್ಲಿ ಯಾವುದೇ ರೀತಿಯ ನೆರಳು ಇರಬಾರದು. ಮುಖ್ಯ ಬಾಗಿಲಿನ ಮುಂದೆ ಕಂಬ, ಮರ ಅಥವಾ ಇನ್ನಾವುದೇ ವಸ್ತು ಇರಬಾರದು. ಮುಖ್ಯ ದ್ವಾರದ ಮುಂದೆ ಲಿಫ್ಟ್ ಅಥವಾ ಮೆಟ್ಟಿಲನ್ನು ನಿರ್ಮಿಸಬೇಡಿ. ಇದರಿಂದ ಮನೆಗೆ ನೆಗೆಟಿವ್ ಎನರ್ಜಿ ಹೆಚ್ಚುತ್ತದೆ.

 

(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More